Karan Mehra Arrested: ಪತ್ನಿಗೆ ಥಳಿಸಿದ ಖ್ಯಾತ ಕಿರುತೆರೆ ನಟ ಕರಣ್ ಮೆಹ್ರಾ; ಪೊಲೀಸ್ ಠಾಣೆ ಮೆಟ್ಟಿಲೇರಿ ಹೇಳಿದ ಕಥೆಯೇ ಬೇರೆ
ನಿಶಾ ರಾವಲ್ ನೀಡಿದ ದೂರಿನ ಮೇರೆಗೆ ಕರಣ್ ಅವರನ್ನು ಪೊಲೀಸರು ಬಂಧಿಸಿದ್ದರು. ಒಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ಕಳೆದ ಬಳಿಕ ಮಂಗಳವಾರ (ಜೂ.1) ಬೆಳಗ್ಗೆ ಅವರಿಗೆ ಜಾಮೀನು ಸಿಕ್ಕಿದೆ.
ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಮೂಲಕ ಫೇಮಸ್ ಆಗಿರುವ ನಟ ಕರಣ್ ಮೆಹ್ರಾ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ನಿಶಾ ರಾವಲ್ ಮೇಲೆ ಅವರು ಹಲ್ಲೇ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಸಂಬಂಧ ಅವರನ್ನು ಸೋಮವಾರ (ಮೇ 31) ರಾತ್ರಿ ಪೊಲೀಸರು ಬಂಧಿಸಿದ್ದರು. ಆದರೆ ಈಗ ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ.
ಜಾಮೀನು ಪಡೆದು ಹೊರಬಂದ ಬಳಿಕ ಪತ್ನಿ ವಿರುದ್ಧವೇ ಕರಣ್ ಮೆಹ್ರಾ ಆರೋಪ ಮಾಡಿದ್ದಾರೆ. ಪತ್ನಿ ನಿಶಾ ರಾವಲ್ ಮತ್ತು ಆಕೆಯ ಸಹೋದರ ರೋಹಿತ್ ಸೇಟಿಯಾ ಸೇರಿಕೊಂಡು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕರಣ್ ಹೇಳಿದ್ದಾರೆ. ಬಳಿಕ ತಮ್ಮನ್ನೇ ತಪ್ಪಿತಸ್ಥರ ರೀತಿ ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕರಣ್ ಮತ್ತು ನಿಶಾ ಸಂಸಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಹಲವು ದಿನಗಳ ಹಿಂದೆಯೇ ಶುರುವಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಮಾಧ್ಯಮದವರು ಪ್ರಯತ್ನಿಸಿದಾಗಲೇ ಆ ಸುದ್ದಿಯನ್ನು ಕರಣ್ ತಳ್ಳಿ ಹಾಕುತ್ತಿದ್ದರು. ‘ನನ್ನ ಮತ್ತು ನಿಶಾ ನಡುವೆ ಯಾವುದೇ ಮನಸ್ತಾಪ ಇಲ್ಲ. ನಾವು ಚೆನ್ನಾಗಿ ಇದ್ದೇವೆ. ಈ ಕೊರೊನಾ ವೈರಸ್ ಸಮಯದಲ್ಲಿ ಆಕೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ’ ಎಂದು ಅವರು ಹೇಳಿದ್ದರು. ಆದರೆ ಈಗ ಅವರ ಸಂಸಾರದ ರಗಳೆ ಬೀದಿಗೆ ಬಂದಿದೆ.
ನಿಶಾ ರಾವಲ್ ನೀಡಿದ ದೂರಿನ ಮೇರೆಗೆ ಕರಣ್ ಅವರನ್ನು ಪೊಲೀಸರು ಬಂಧಿಸಿದ್ದರು. ಒಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ಕಳೆದ ಬಳಿಕ ಮಂಗಳವಾರ (ಜೂ.1) ಬೆಳಗ್ಗೆ ಅವರಿಗೆ ಜಾಮೀನು ಸಿಕ್ಕಿದೆ. ಜಾಮೀನು ಪಡೆದು ಹೊರಬಂದ ಬಳಿಕ ತಮ್ಮ ಕುಟುಂಬದ ಕಹಿ ಸತ್ಯವನ್ನೆಲ್ಲ ಅವರು ಬಹಿರಂಗಪಡಿಸಿದ್ದಾರೆ. ಪತ್ನಿ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.
ಒಂದು ಸುತ್ತಿನ ವಿಚಾರಣೆ ನಡೆಸಿರುವ ಪೊಲೀಸರಿಗೆ ಹಲವು ವಿಚಾರಗಳು ಗೊತ್ತಾಗಿವೆ. ಕರಣ್ ಮತ್ತು ನಿಶಾ ನಡುವೆ ಹಲವು ದಿನಗಳಿಂದ ಸಂಬಂಧ ಕೆಟ್ಟಿತ್ತು. ಹಾಗಾಗಿ ಅವರು ವಿಚ್ಛೇದನ ಪಡೆಯಲು ಕೂಡ ನಿರ್ಧರಿದ್ದರು. ಅದಕ್ಕಾಗಿ ಅವರಿಬ್ಬರು ಈಗಾಗಲೇ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಿದ್ದಾರೆ ಎಂಬ ವಿಚಾರ ಈಗ ಬಯಲಾಗಿದೆ.
ಇದನ್ನೂ ಓದಿ:
ಕಾಮತೃಷೆ ನೀಗಿಸಲು ನಿರಾಕರಿಸಿದ ಪತ್ನಿಯನ್ನು ಶೂಟ್ ಮಾಡಿ ತನ್ನ ಮೂವರು ಮಕ್ಕಳನ್ನು ಕಾಲುವೆಗೆ ಎಸೆದ
ಬಾಲಿವುಡ್ ಕಲಾವಿದ ಕಬೀರ್ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ