ಸೆಪ್ಟೆಂಬರ್ 5 ಶಿಕ್ಷಕರ ದಿನ. ಅಪ್ರತಿಮ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವಾಗಿದ್ದು, ಅದರ ಗೌರವಾರ್ಥವಾಗಿ ದೇಶಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಶಿಕ್ಷಕರ ಪಾತ್ರವು ಬಹು ದೊಡ್ಡದು. ಬದುಕನ್ನು ರೂಪಿಸಿದ ಶಿಕ್ಷಕರಿಗೆ ಧನ್ಯವಾದಗಳು ತಿಳಿಸಲು ಇದೊಂದು ಒಳ್ಳೆಯ ದಿನವಾಗಿದ್ದು, ಈ ರೀತಿಯಾಗಿ ಸಂದೇಶ ಕಳುಹಿಸಿ ನಿಮ್ಮ ಗುರುವೃಂದಕ್ಕೆ ಶುಭಾಶಯಗಳನ್ನು ಕೋರಬಹುದು.
* ನನ್ನ ಈ ಯಶಸ್ವಿ ಜೀವನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಿದ್ದಿ ಬುದ್ಧಿ ಹೇಳಿದ ಎಲ್ಲ ನನ್ನ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
* ವ್ಯಕ್ತಿಯ ಬದುಕಿನಲ್ಲಿ ಮುಂದೆ ಗುರು ಇರಬೇಕು, ಹಿಂದೆ ಗುರು ಇರಬೇಕು, ಆಗ ಮಾತ್ರ ಒಳಿತಾಗುವುದು ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
* ಸಾವಿರ ದಿನಗಳ ಸುದೀರ್ಘ ಓದಿಗಿಂತಲೂ ಶ್ರೇಷ್ಠ ಶಿಕ್ಷಕರ ಜೊತೆ ಕಳೆದ ಒಂದು ದಿನದಿಂದ ದೊರೆವ ಜ್ನಾನವೇ ಲೇಸು. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
* ಶಿಕ್ಷಕರೇ ಸ್ಫೂರ್ತಿ, ಶಿಕ್ಷಕರೇ ದಾರಿ. ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ತಂದಿರುವ ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನದ ಹಾರ್ಥಿಕ ಶುಭಾಶಯಗಳು.
ಮತ್ತಷ್ಟು ಓದಿ: Teachers Day 2024: ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳಿಂದಲೇ ಸದಸ್ಯರನ್ನು ಶಾಂತಗೊಳಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್
* ನನಗೆ ಉತ್ತಮ ಮಾರ್ಗದರ್ಶನ ನೀಡಿ, ಗೆಳೆಯನಂತೆಯೇ ನಮ್ಮೊಂದಿಗೆ ಬೆರೆತು, ಸರಿ ತಪ್ಪುಗಳನ್ನು ತಿದ್ದಿ ಹೇಳಿ ಜೀವನವನ್ನು ರೂಪಿಸಿದ ನಿಮಗೆ ನನ್ನ ವಂದನೆಗಳು ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
* ನಾವು ಇವತ್ತು ಏನಾಗಿದ್ದೆವೋ ಅದಕ್ಕೆ ನಿಮ್ಮ ಕೊಡುಗೆ ಮಹತ್ವವಾದದ್ದು. ಇಂದಿಗೂ ಕೂಡ ಮಾರ್ಗದರ್ಶನ ಮಾಡುತ್ತಿರುವ ನನ್ನ ನೆಚ್ಚಿನ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
* ಅತ್ಯುತ್ತಮ ಶಿಕ್ಷಕರು ಪುಸ್ತಕದಿಂದ ಅಲ್ಲ, ಹೃದಯದಿಂದ ಕಲಿಸುತ್ತಾರೆ. ಅಂತಹ ಅದ್ಭುತ ಶಿಕ್ಷಕರು ನನ್ನ ಬದುಕಿನಲ್ಲಿ ಬಂದು ನನಗೆ ಮಾರ್ಗದರ್ಶನ ಮಾಡಿದ್ದಕ್ಕೆ ಧನ್ಯವಾದಗಳು. ನನ್ನೆಲ್ಲಾ ಗುರುವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
* ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಜೊತೆಗೆ ದೇಶದ ಭವ್ಯ ಭವಿಷ್ಯವನ್ನು ರೂಪಿಸುವವರು ಶಿಕ್ಷಕ ವೃಂದದವರು. ನನ್ನೆಲ್ಲಾ ಶಿಕ್ಷಕ ವೃಂದದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:42 am, Thu, 5 September 24