AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CBSE 10th Result 2022 Date: ಈ ದಿನಾಂಕದಂದು ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ

ಸಿಬಿಎಸ್​ಇಯ ಅಧಿಕೃತ ವೆಬ್‌ಸೈಟ್ cbseresults.nic.in ಅಥವಾ results.gov.inನಲ್ಲಿ CBSE 10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ವೀಕ್ಷಿಸಬಹುದು.

CBSE 10th Result 2022 Date: ಈ ದಿನಾಂಕದಂದು ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ
ಸಾಂದರ್ಭಿಕ ಚಿತ್ರImage Credit source: Live Mint
TV9 Web
| Edited By: |

Updated on:Jul 13, 2022 | 9:47 AM

Share

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10ನೇ ತರಗತಿಯ ಬೋರ್ಡ್ ಪರೀಕ್ಷೆ 2022 ಫಲಿತಾಂಶಗಳನ್ನು ಜುಲೈ ಅಂತ್ಯದ ವೇಳೆಗೆ ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ಇನ್ನೂ ಸಿಬಿಎಸ್​ಇ ಫಲಿತಾಂಶದ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ. ಈ ಹಿಂದೆ ಜುಲೈ 10ರಿಂದ 15ರೊಳಗೆ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಸಿಬಿಎಸ್​ಇಯ ಅಧಿಕೃತ ವೆಬ್‌ಸೈಟ್ cbseresults.nic.in ಅಥವಾ results.gov.inನಲ್ಲಿ CBSE 10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ವೀಕ್ಷಿಸಬಹುದು.

ಈ ವರ್ಷ ಸುಮಾರು 35 ಲಕ್ಷ ವಿದ್ಯಾರ್ಥಿಗಳು ಏಪ್ರಿಲ್ 26ರಿಂದ ಜೂನ್ 15ರವರೆಗೆ ನಡೆದ CBSE 10ನೇ, 12ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿದ್ದರು. CBSE 10ನೇ ತರಗತಿಗೆ ಒಟ್ಟು 21 ಲಕ್ಷ ವಿದ್ಯಾರ್ಥಿಗಳು ಮತ್ತು 14 ಲಕ್ಷ ವಿದ್ಯಾರ್ಥಿಗಳು CBSE 12ನೇ ಪರೀಕ್ಷೆಗೆ ಹಾಜರಾಗಿದ್ದರು. ಈ ತಿಂಗಳ ಕೊನೆಯ ವಾರದಲ್ಲಿ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳು ಪರೀಕ್ಷಾ ಸಂಗಮ ವೆಬ್​ಸೈಟ್​ನಲ್ಲಿ (parikshasangam.cbse.gov) ಕೂಡ ತಮ್ಮ ಸ್ಕೋರ್‌ಗಳನ್ನು ಪರಿಶೀಲಿಸಬಹುದು. ಸಿಬಿಎಸ್​ಇ ಪರೀಕ್ಷೆ ಸಂಬಂಧಿತ ಚಟುವಟಿಕೆಗಳನ್ನು ಈ ವೆಬ್​ಸೈಟ್​ನಲ್ಲೇ ನೋಡಬಹುದು. CBSE ಬೋರ್ಡ್ ಒಂದೇ ಕಡೆ ಬೋರ್ಡ್ ಪರೀಕ್ಷೆಯ ಫಲಿತಾಂಶಗಳು, ಮಾದರಿ ಪತ್ರಿಕೆಗಳು ಮತ್ತು ಇತರ ವಿವರಗಳನ್ನು ನೀಡಲು ‘ಪರೀಕ್ಷಾ ಸಂಗಮ’ ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿತು. cbsedigitaleducation.com ಪ್ರಕಾರ, ಹೊಸದಾಗಿ ಪ್ರಾರಂಭಿಸಲಾದ ಪರೀಕ್ಷಾ ಸಂಗಮ್ ಪೋರ್ಟಲ್ ಶಾಲೆಯ ಪ್ರಾದೇಶಿಕ ಕಚೇರಿಗಳು ಮತ್ತು CBSE ಮಂಡಳಿಯ ಪ್ರಧಾನ ಕಛೇರಿಯಿಂದ ನಡೆಸಲಾಗುವ ವಿವಿಧ ಪರೀಕ್ಷೆ ಸಂಬಂಧಿತ ಪ್ರಕ್ರಿಯೆಗಳ ಮಾಹಿತಿಯನ್ನು ನೀಡುತ್ತದೆ.

ಇದನ್ನೂ ಓದಿ
Image
JEE Main Result 2022: ಜೆಇಇ ಮೇನ್ಸ್​ ಫಲಿತಾಂಶ ಪ್ರಕಟ
Image
ಶಾಲೆಗಳಲ್ಲಿ ದುಬಾರಿ ಬೆಲೆಗೆ ಪುಸ್ತಕ, ಸಮವಸ್ತ್ರ ಮಾರಾಟ: ಸಿಡಿದೆದ್ದ ಪೋಷಕರಿಂದ ಸಿಬಿಎಸ್​ಇಗೆ ದೂರು
Image
ಉನ್ನತ ಶಿಕ್ಷಣ ಜು 10ರಿಂದ ಪ್ರವೇಶ ಆರಂಭ, ಒಂದೇ ಅರ್ಜಿ ಮೂಲಕ ಯಾವುದೇ ಕಾಲೇಜು ಆಯ್ಕೆ – ಸಚಿವ ಡಾ. ಅಶ್ವಥ್ ನಾರಾಯಣ

ಇದನ್ನೂ ಓದಿ: http://cbse

CBSE 10ನೇ ತರಗತಿಯ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು ಎಂಬ ಮಾಹಿತಿ ಇಲ್ಲಿದೆ:

– ಅಧಿಕೃತ ವೆಬ್‌ಸೈಟ್‌ cbse.gov.in, cbseresults.nic.inಗೆ ಭೇಟಿ ನೀಡಿ.

– CBSE 10 ನೇ ಫಲಿತಾಂಶ 2022 ಎಂಬ ಲಿಂಕ್ ಕ್ಲಿಕ್ ಮಾಡಿ. – ಲಾಗಿನ್ ದಾಖಲಾತಿಗಳನ್ನು ನಮೂದಿಸಿ

– ಸಲ್ಲಿಸು (ಸಬ್ಮಿಟ್) ಎಂಬಲ್ಲಿ ಕ್ಲಿಕ್ ಮಾಡಿ. ಆಗ ಫಲಿತಾಂಶವು ಸ್ಕ್ರೀನ್ ಮೇಲೆ ಗೋಚರಿಸುತ್ತದೆ.

– ಫಲಿತಾಂಶವನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.

ಡಿಜಿ ಲಾಕರ್ ಮೂಲಕ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ಡೌನ್‌ಲೋಡ್ ಮಾಡುವುದು ಹೇಗೆ?:

– ಅಧಿಕೃತ ವೆಬ್‌ಸೈಟ್‌ digilocker.gov.inಗೆ ಭೇಟಿ ನೀಡಿ.

– ನಿಮ್ಮ ಆಧಾರ್ ಸಂಖ್ಯೆ ಮತ್ತು ಇತರ ವಿವರಗಳಂತಹ ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ

– ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ

– ನಿಮ್ಮ ತಾತ್ಕಾಲಿಕ ಮಾರ್ಕ್ ಶೀಟ್ ಅನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ

– ಅದನ್ನು PDFನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: CBSE 10 Results 2022: ಇಂದು ಸಿಬಿಎಸ್​​ಇ 10ನೇ ತರಗತಿಯ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿದೆ ಮಾಹಿತಿ

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು SMS ಮೂಲಕವೂ ಪರಿಶೀಲಿಸಬಹುದು.

cbse10 <space> ರೋಲ್ ಸಂಖ್ಯೆ ಹಾಕಿ ಸಂದೇಶವನ್ನು ಟೈಪ್ ಮಾಡಿ.

ಆ ಮೆಸೇಜನ್ನು 7738299899 ನಂಬರ್​ಗೆ ಕಳುಹಿಸಿ

ಆಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಫಲಿತಾಂಶವನ್ನು ನೋಡಬಹುದು.

ಈ ವರ್ಷ CBSE 10 ನೇ ತರಗತಿಯ ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26ರಿಂದ ಮೇ 24ರವರೆಗೆ ನಡೆದಿದ್ದವು. CBSE ಬೋರ್ಡ್ ಮಾರ್ಚ್‌ನಲ್ಲಿ 10ನೇ ತರಗತಿಯ ಅವಧಿ 1 ಫಲಿತಾಂಶವನ್ನು ಪ್ರಕಟಿಸಿತ್ತು. ಸಿಬಿಎಸ್‌ಇ ಮಂಡಳಿಯು 1ನೇ ತರಗತಿಯ 10ನೇ ತರಗತಿಯ ಅಂಕಪಟ್ಟಿಯನ್ನು ಆಯಾ ಶಾಲೆಗಳಿಗೆ ಕಳುಹಿಸಿತ್ತು. ಸಿಬಿಎಸ್‌ಇ 10ನೇ ತರಗತಿಯ 1ನೇ ಅವಧಿಯ ಥಿಯರಿ ಪೇಪರ್‌ಗಳ ಫಲಿತಾಂಶಗಳನ್ನು ಮಾತ್ರ ಶಾಲೆಗಳಿಗೆ ತಲುಪಿಸಲಾಗಿದೆ.

Published On - 9:46 am, Wed, 13 July 22

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ