AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದೇಕೆ? ತಜ್ಞರು ಕೊಟ್ಟ ಕಾರಣವೇನು? ಇಲ್ಲಿದೆ ವಿವರ

ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದೇಕೆ? ಯಾವ ಕಾರಣಕ್ಕೆ ಪಠ್ಯ ಬದಲಿಸಲು ಸಮಿತಿಯ ನಿರ್ಧಾರ? ಪಠ್ಯ ಪರಿಷ್ಕರಣೆ ಸಮಿತಿಯ ತಜ್ಞರು ಕೊಟ್ಟ ಸ್ಪಷ್ಟನೆ ಏನು? ಈ ಎಲ್ಲಾ ವಿವರ ಇಲ್ಲಿದೆ.

ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದೇಕೆ? ತಜ್ಞರು ಕೊಟ್ಟ ಕಾರಣವೇನು? ಇಲ್ಲಿದೆ ವಿವರ
ವಿಧಾನಸೌಧ
Follow us
ರಮೇಶ್ ಬಿ. ಜವಳಗೇರಾ
|

Updated on: Jun 16, 2023 | 6:17 PM

ಬೆಂಗಳೂರು: ಬಿಜೆಪಿ(BJP) ಜಾರಿಗೆ ತಂದ ಎಲ್ಲಾ ಜನ ವಿರೋಧಿ ಕಾನೂನುಗಳನ್ನ ಒಂದು ವರ್ಷದೊಳಗೆ ರದ್ದು ಮಾಡುವುದಾಗಿ ಪ್ರಣಾಳಿಕೆಯಲೇ ಹೇಳಿದ್ದ ಕಾಂಗ್ರೆಸ್(Congress), ಇದೀಗ ಆ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟಿದೆ. ಐದು ಗ್ಯಾರಂಟಿ ಜಾರಿಯ ಜೊತೆ ಜೊತೆಗೆ ಬಿಜೆಪಿ ಕಾಲದಲ್ಲಿ ತರಲಾಗಿದ್ದ ಕಾಯ್ದೆಗಳಿಗೆ ಸರ್ಕಾರ ಆಪರೇಷನ್ ಶುರು ಮಾಡಿದೆ. ನಿನ್ನೆ(ಜೂನ್ 15) ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಕಾಲದಲ್ಲಿ ತರಲಾಗಿದ್ದ ಎರಡು ಕಾಯ್ದೆಗಳನ್ನ ರದ್ದು ಮಾಡುವ ವಿಚಾರವಾಗಿ ಹಾಗೂ ಪಠ್ಯ ಪರಿಷ್ಕರಣೆ(textbook revised )ಮತ್ತು ಬಿಜೆಪಿ ಕಾಲದ ಅಕ್ರಮಗಳ ತನಿಖೆ ಮಾಡುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಅದರಲ್ಲೂ ಪ್ರಮುಖವಾಗಿ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ಮಾತಿನ ಸಂಘರ್ಷ ತಾರಕಕ್ಕೇರಿದೆ. ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದೇಕೆ? ಎನ್ನುವ ಪ್ರಶ್ನೆಗೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದಲೇ ಸಮರ್ಥನೆ ನೀಡಿದೆ. ಪಠ್ಯ ಬದಲಾಯಿಸಲು ಲಿಖಿತ ರೂಪದಲ್ಲಿ ಸಮರ್ಥನೆ ನೀಡಿರುವ ಶಿಕ್ಷಣ ತಜ್ಞರು, ಯಾವೆಲ್ಲ ಕಾರಣಕ್ಕೆ ಪಠ್ಯ ಬದಲಾಯಿಸ ಬೇಕಿದೆ ಎಂದು ಕಾರಣವನ್ನು ಸಹ ಕೊಟ್ಟಿದ್ದಾರೆ. ತಜ್ಞರು ನೀಡಿರುವ ಕಾರಣ ಮತ್ತು ಸಮರ್ಥನೆ ನೀಡಿರುವ ಮಾಹಿತಿ ಟಿವಿ9ಗೆ ಲಭ್ಯವಾಗಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Cabinet Meeting: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ತೀರ್ಮಾನ, ಪಠ್ಯ ಪರಿಷ್ಕರಣೆಗೆ ಅಸ್ತು ಎಂದ ಸಿದ್ದರಾಮಯ್ಯ ಸಂಪುಟ!

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದಲೇ ಸಮರ್ಥನೆ

ಕೆಲವೊಂದು ಪಠ್ಯಗಳಲ್ಲಿ ಏಕವಚನಗಳನ್ನ ಅತಿಯಾಗಿ ಬಳಸಲಾಗಿದ್ದು, ಕೆಲ ವಾಖ್ಯಗಳು ಸಹ ವಿದ್ಯಾರ್ಥಿಗಳು ಓದಲು ಸಹಕಾರಿಯಾಗಿಲ್ಲ. ಈ ಚಿಕ್ಕವಯಸ್ಸಿನಲ್ಲಿ ಅಥವಾ ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಓದುವ ಅವಶ್ಯಕತೆ ಇಲ್ಲ ಎಂದು ಹೆಗ್ಡೆವಾರ್ ಹಾಗೂ ಸಾವರ್ಕರ್ ಪಾಠಕ್ಕೆ ಕೊಕ್​ ನೀಡಿದ್ದಕ್ಕೆ ಸಮರ್ಥನೆ ನೀಡಲಾಗಿದೆ.

ಚಕ್ರವರ್ತಿ ಸೂಲಿಬೆಲೆ ಬರೆದಿರುವ ಭಗತ್ ಸಿಂಗ್ ಪಠ್ಯಕ್ಕೂ ಕತ್ತರಿ ಹಾಕುವುದಕ್ಕೆ ಕಾರಣ ಕೊಟ್ಟಿದ್ದು, ಈಗಾಗಲೇ ಭಗತ್ ಸಿಂಗ್ ಗೆ ಸಂಬಂಧಿಸಿದ ಸಾಕಷ್ಟು ಪಾಠಗಳಿವೆ. ಭಗತ್ ಸಿಂಗ್ ಬಗ್ಗೆ ಬರೆದಿರುವ ಲೇಖಕ ಚಕ್ರವರ್ತಿ ಸೂಲಿಬೇಲೆಯ ಬಗ್ಗೆ ಸಮಿತಿ ತಕರಾರು ಮಾಡಿದ್ದಾರೆ. ಚಕ್ರವರ್ತಿ ಸೂಲಿಬೇಲೆ ದ್ವೇಷಮಯ ವ್ಯಕ್ತಿತ್ವ ಇರುವ ಲೇಖಕ ಎಂದು ಸಮಿತಿ ಹೇಳಿದೆ. ಈ ಹಿನ್ನಲೆಯಲ್ಲಿ ಸೂಲಿಬೇಲೆ ಬರೆದಿರುವ ಪಠ್ಯವನ್ನು ಪರಿಷ್ಕರಣೆ ಮಾಡಲು ಸಮಿತಿ ನಿರ್ಧರಿಸಿದೆ ಎಂದು ಶಿಕ್ಷಣ ಇಲಾಖೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಪಠ್ಯದಿಂದ ಯಾವೆಲ್ಲ ಪಾಠ ಔಟ್? ಯಾವುದು ಇನ್?

ಹಿಂದಿನ ಸರ್ಕಾರ ಅವಧಿಯಲ್ಲಿ ಸೇರ್ಪಡೆಯಾಗಿದ್ದ ಆರ್’ಎಸ್ಎಸ್ ಸಂಸ್ಥಾಪಕ ಕೇಶವಬಲಿರಾಮ್ ಹೆಡಗೇವಾರ್, ಬರಹಗಾರ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಗದ್ಯ, ಸಾವರ್ಕರ್ ಕುರಿತ ಪಠ್ಯ ಹಾಗೂ ಲೇಖಕ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯಗಳನ್ನು ಕೈಬಿಡಲು ತೀರ್ಮಾನಿಸಲಾಗಿದೆ. ಇನ್ನು ಹಿಂದಿನ ಸರ್ಕಾರ ಕೈಬಿಟ್ಟಿದ್ದ ಸಾವಿತ್ರಿಬಾಯಿ ಪುಲೆ, ಅಂಬೇಡ್ಕರ್ ಅವರ ಕುರಿತ ನೀ ಹೋದ ಮರು ದಿನ ಲೇಖನ, ನೆಹರು ಅವರು ಮಗಳಿಗೆ ಬರೆದ ಪತ್ರ, ಟಿಪ್ಪು ಸುಲ್ತಾನ್ ಕುರಿತ ಪಠ್ಯ ಸೇರಿದಂತೆ ಹಲವು ವಿಚಾರಗಳನ್ನು ಸೇರ್ಪಡೆ ಮಾಡೆಗೆ ಮುಂದಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಾದ ಹುಟ್ಟುಹಾಕಿದ್ದ ನಿರ್ಣಯಗಳಿಗೆ ಕೊಕ್ ಕೊಡುವ ಮೂಲಕ ಕಾಂಗ್ರೆಸ್ ಸರ್ಕಾರ ಬಿಜೆಪಿಗೆ ಶಾಕ್ ಕೊಟ್ಟಿದೆ. ಬಿಜೆಪಿ ಜಾರಿಗೆ ತಂದಿದ್ದ ಕಾಯ್ದೆಗಳನ್ನು ರದ್ದು ಪಡಿಸುವ ನಿರ್ಣಯಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ತೆಗೆದುಕೊಂಡಿದೆ. ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಸಮರ ತಾರಕಕ್ಕೇರಿದ್ದು ಕಾಂಗ್ರೆಸ್ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.

ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್