ಗಣಿತ ಕಲಿಕೆಯಲ್ಲಿ ಹಿಂದೆ ಬಿದ್ದ ಸರ್ಕಾರಿ ಶಾಲಾ ಮಕ್ಕಳು; ವರದಿಯೊಂದರಲ್ಲಿ ಶಾಕಿಂಗ್ ಅಂಶ ಬಯಲು
ಕಳೆದ ಮೂರು ವರ್ಷಗಳಿಂದ ಮಹಾಮಾರಿ ಕೊರೊನಾ ಮಕ್ಕಳ ಶಿಕ್ಷಣದ ಬದಕನ್ನೇ ನುಗ್ಗಿ ಹಾಕಿದ್ದು ಮಕ್ಕಳ ಕಲಿಕೆ ಹಳ್ಳ ಹಿಡಿದಿದೆ. ಸದ್ಯ ಕಳೆದ ಒಂದು ವರ್ಷದಿಂದ ಮಕ್ಕಳು ಕಲಿಕೆಯತ್ತ ಗಮನ ಹರಿಸುತ್ತಿದ್ದಾರೆ. ಆದರೂ ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ನ್ಯೂನೆತೆಗಳು ಕಂಡು ಬರ್ತಿವೆ. ಶಿಕ್ಷಣದ ಬಗ್ಗೆ ಮಾಡಲಾದ ಸಮೀಕ್ಷೆಯೊಂದು ಹೊರ ಬಿದ್ದಿದ್ದು ಅದರಲ್ಲಿ ಸರ್ಕಾರಿ ಶಾಲೆ ಮಕ್ಕಳಿ ಗಣಿತದಲ್ಲಿ ಹಿಂದುಳಿದಿದ್ದಾರೆ ಎಂಬ ಅಂಶ ಬಯಲಾಗಿದೆ.
ಬೆಂಗಳೂರು, ಜ.09: ಕಳೆದ ಮೂರು ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನ ಕೊರೊನಾ (Coronavirus) ಹೆಮ್ಮಾರಿ ಇನ್ನಿಲ್ಲದಂತೆ ಕಾಡಿದೆ. ಕೊರೊನಾ ಸಂಕಷ್ಟದ ಪರಿಣಾಮದಿಂದ ಶೇ% 50 ರಿಂದ 60 ರಷ್ಟು ಮಕ್ಕಳ ಕಲಿಕೆಯು ಕುಂಠಿತವಾಗಿದೆ. ಅಲ್ಲದೆ ಮಕ್ಕಳ ಕಲಿಕಾ ಪ್ರಗತಿಗೆ ಭಾರಿ ಹೊಡೆತ ಬಿದಿದ್ದು ಶಿಕ್ಷಣ ಇಲಾಖೆ (Education Department) ವಿದ್ಯಾರ್ಥಿಗಳ ಕಲಿಕಾ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಈ ನಡುವೆ ಸರ್ಕಾರಿ ಶಾಲಾ (Government School) ಮಕ್ಕಳು ಗಣಿತದಲ್ಲಿಯೇ (Maths) ಹೆಚ್ಚು ಫೇಲ್ ಆಗ್ತೀರೊ ಶಾಕಿಂಗ್ ವರದಿ ಬಯಲಾಗಿದೆ.
ಗಣಿತ ಕಲಿಕೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಹಿಂದೆ ಬೀದಿರುವ ಬಗ್ಗೆ ವದಿಯೊಂದು ಹೊರ ಬೀದಿದೆ. ಗಣಿತ ಲೆಕ್ಕದಲ್ಲಿ ಸರ್ಕಾರಿ ಶಾಲಾ ಮಕ್ಕಳು ಹಿಂದೆ ಬೀದಿದ್ದು ಸಾಮಾನ್ಯ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮಾಡಲು ಬರುತ್ತಿಲ್ಲ. ಅದರಲ್ಲೂ ರಾಜ್ಯದ ಗ್ರಾಮೀಣ ಸರ್ಕಾರಿ ಮಕ್ಕಳಲ್ಲಿ ಗಣಿತ ಕಲಿಕೆ ಹಿಂದೆ ಉಳಿದಿದೆ. ಗಣಿತದಲ್ಲಿಯೇ ಮಕ್ಕಳು ಫೇಲ್ ಆಗ್ತೀರೊ ಶಾಕಿಂಗ್ ವರದಿಯನ್ನ ಬೆಂಗಳೂರಿನ ಅಕ್ಷರ ಫೌಂಡೇಶನ್ ನಡೆಸಿರುವ ಅಧ್ಯಯನ ಕಾರಿ ಮಕ್ಕಳ ಸ್ಪರ್ಧೆಯಲ್ಲಿ ತಿಳಿದು ಬಂದಿದೆ.
ರಾಜ್ಯಾದ್ಯಂತ 2,625 ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ 2022ರ ನವೆಂಬರ್‌ನಿಂದ 2023ರ ಮಾರ್ಚ್‌ವರೆಗೆ ಸಮೀಕ್ಷೆ ನಡೆಸಿ ವರದಿ ನೀಡಿದೆ. 4ರಿಂದ 6ನೇ ತರಗತಿ ವರೆಗಿನ 3,12,550 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಸ್ತುತ ತರಗತಿಗಳಿಗಿಂತ ಹಿಂದಿನ ತರಗತಿಯ ವಿಷಯಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ. ಆದರೆ, ಈ ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಣಿತದಲ್ಲಿ ಸಾಮಾನ್ಯ ಜ್ಞಾನ ಕಲಿಕೆಯೂ ಇಲ್ಲದೆ ಹಿಂದುಳಿದಿದ್ದಾರೆ ಎಂಬುದು ಸಮೀಕ್ಷೆ ವರದಿಯಲ್ಲಿ ಬಯಲಾಗಿದೆ.
ಇದನ್ನೂ ಓದಿ: ಶಾಲಾ ಬ್ಯಾಗ್ ಹೊರೆ ಇಳಿಸಲು ಶಿಕ್ಷಣ ಇಲಾಖೆ ಹೊಸ ಪ್ಲಾನ್; ಭಾಗ-1, ಭಾಗ-2 ಪಠ್ಯಕ್ಕೆ ಚಿಂತನೆ
4ನೇ ತರಗತಿಯಲ್ಲಿ 1,03,962ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ಹೊಂದಿಸಲು ಕಳೆದ ವರ್ಷದ ಅಂದ್ರೆ 3ನೇ ತರಗತಿಯ ಶಾಲಾ ಪಠ್ಯಕ್ರಮವನ್ನು ಬಳಸಲಾಗಿತ್ತು. ಆದ್ರೂ ಕೂಡಾ ಈ ಮಕ್ಕಳಲ್ಲಿ ಕೇವಲ 40% ಮಾತ್ರ ಗುಣಾಕಾರ ಮತ್ತು ಭಾಗಾಕಾರ ಲೆಕ್ಕವನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. 5 ಮತ್ತು 6ನೇ ತರಗತಿಯ ಹೆಚ್ಚಿನ ವಿದ್ಯಾರ್ಥಿಗಳು ಕೂಡ ಗಣಿತದಲ್ಲಿ ಹಿಂದುಳಿದಿರುವ ಬಗ್ಗೆ ಸಮೀಕ್ಷೆ ವರದಿ ನೀಡಿದೆ. ಇಷ್ಟಕ್ಕೆಲ್ಲ ಕಾರಣ ಉತ್ತಮ ಶಿಕ್ಷಕರ ಕೊರತೆಯೇ ಕಾರಣ ಅಂತಾ ಪೋಷಕರು ಕಿಡಿ ಕಾರಿದ್ದಾರೆ.
ಇನ್ನು ಶಾಲಾ ಶಿಕ್ಷಣ ಇಲಾಖೆ ಮಕ್ಕಳ ಕಲಿಕೆಗೆ ಬಗ್ಗೆ, ಹಿಂದುಳಿದಿರುವ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಅಕ್ಷರ ಫೌಂಡೇಶನ್ ನಡೆಸಿರುವ ಅಧ್ಯಯನ ವರದಿಯ ಬಗ್ಗೆ ಮಾಹಿತಿ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಒಟ್ನಲ್ಲಿ ಕಳೆದ ಎರಡು ಮೂರು ವರ್ಷದಿಂದ ಶಾಲಾ ಮಕ್ಕಳ ಕಲಿಕೆಯನ್ನ ಕೊರೊನಾ ಹಾಗೂ ಹಿಜಾಬ್ ಗಲಾಟೆಗಳ ರಜೆ ಕಲಿಕೆಯ ನಿರಂತರತೆಗೂ ಧಕ್ಕೆ ತಂದಿದೆ. ಕಲಿಕಾ ನ್ಯೂನೆತೆಗೆ ಕಾರಣವಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ವರ್ಷದಲ್ಲಿಯಾದ್ರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಕ್ರಮವಹಿಸಿಬೇಕಿದೆ. ಶಿಕ್ಷಕರ ಕೊರತೆ ನೀಗಿಸಿ ಉತ್ತಮ ಶಿಕ್ಷಣ ನೀಡುವತ್ತ ಗಮನ ನೀಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ