ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನು ಸಿಗದ ಉಚಿತ ಶೂ, ಸಾಕ್ಸ್: ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ
ಕರ್ನಾಟಕದಲ್ಲಿ 2025-2026ನೇ ಸಾಲಿನ ಶೈಕ್ಷಣಿಕ ಅವಧಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಿವೆ. ಚಿಣ್ಣರು ಶಾಲೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಆದರೆ ಶಾಲೆ ಶುರುವಾದರೂ ಇನ್ನು ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ಮಾತ್ರ ನೀಡಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಯ ಎಡವಟ್ಟಿಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜೂನ್ 23: ಬೇಸಿಗೆ ರಜೆ ಮುಗಿಸಿ ಮಕ್ಕಳು ಕಳೆದ ಒಂದು ವಾರದಿಂದ ಮರಳಿ ಶಾಲೆಗೆ (school) ವಾಪಸ್ ಆಗಿದ್ದಾರೆ. ಪುಸ್ತಕ, ಪೆನ್ ಹಾಕಿ ಬ್ಯಾಗ್ ಹಾಕಿಕೊಂಡು ಶಾಲೆಗೆ ಬರುತ್ತಿರುವ ಮಕ್ಕಳು ಪಾಠ ಕಲಿಯೋದಕ್ಕೆ ರೆಡಿಯಾಗಿದ್ದಾರೆ. ಶಿಕ್ಷಕರು ಕ್ಲಾಸ್ ಮಾಡೋದಕ್ಕೆ ಸಿದ್ಧರಿದ್ದಾರೆ. ಆದರೆ ಶಾಲೆ ಶುರುವಾದರೂ ಮಕ್ಕಳಿಗೆ ಸಿಗಬೇಕಿದ್ದ ಉಚಿತ ಶೂ ಸಾಕ್ಸ್ (Shoe, Socks) ಇನ್ನು ಕೈ ತಲುಪಿಲ್ಲ. ಶಿಕ್ಷಣ ಇಲಾಖೆಯ ಎಡವಟ್ಟಿಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆ ಆರಂಭವಾದರೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ ಮತ್ತು ಸಾಕ್ಸ್ ಸಿಕ್ಕಿಲ್ಲ. ಬಡ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಉಚಿತ ಶೂ ಮತ್ತು ಸಾಕ್ಸ್ ಭಾಗ್ಯ ಇನ್ನು ಮಕ್ಕಳ ಕೈ ಸೇರಿಲ್ಲ. ಶೂ ಇಲ್ಲದೆ ಚಪ್ಪಲಿ ಹಾಕಿಕೊಂಡು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇನ್ನು ಕೆಲವು ಮಕ್ಕಳು ಹಳೆ ಶೂ ಹಾಕಿಕೊಂಡು ಬಂದ್ರೆ ಮತ್ತೆ ಕೆಲವು ಮಕ್ಕಳು ಶೂ ಇಲ್ಲದೇ ಶಾಲೆಗೆ ಬರ್ತಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್: ವಿದ್ಯಾರ್ಥಿಗಳು, ಪೋಷಕರು ಇದನ್ನ ತಿಳಿದುಕೊಳ್ಳಲೇಬೇಕು!
ಪಂಚ್ ಗ್ಯಾರಂಟಿ ನೀಡಿರುವ ಸರ್ಕಾರ ಬಡ ಶಾಲಾ ಮಕ್ಕಳನ್ನ ಮಾತ್ರ ಪ್ರಪಾತಕ್ಕೆ ತಳಿದೆ. ಶೈಕ್ಷಣಿಕ ವರ್ಷ ಆರಂಭವಾದರೂ ಶಾಲಾ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯ ಒದುಗಿಸದೇ ಪರದಾಡುವಂತೆ ಮಾಡಿದೆ. ಶಾಲೆ ಆರಂಭದಲ್ಲಿಯೇ ಶೂ ಸಾಕ್ಸ್ ನೀಡದೆ ನಿರ್ಲಕ್ಷ್ಯ ತೋರಿದಕ್ಕೆ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಶಿಕ್ಷಣ ಇಲಾಖೆ ಹೇಳೋದು ಒಂದು ಮಾಡೋದು ಮತ್ತೊಂದು ಎನ್ನುವಂತಾಗಿದೆ. ಶಾಲೆ ಆರಂಭದ ದಿನವೇ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕ ಕೊಡುತ್ತೇವೆ ಅಂತಾ ಹೇಳಲಾಗಿತ್ತು. ಆದರೆ ಅದೇ ಹಾಡು ಅದೇ ಕಥೆ ಶುರುವಾಗಿದೆ. ಇನ್ನು ರಾಜ್ಯದ ಸರಕಾರಿ ಶಾಲೆಗಳಲ್ಲಿ 2025 – 26ನೇ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಅಂದಾಜು 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದು ಜತೆ ಶೂ ಮತ್ತು ಎರಡು ಜತೆ ಸಾಕ್ಸ್ ಖರೀದಿಗೆ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ.
ಹಣ ಬಂದ ಮೇಲೆ ಶೂ, ಸಾಕ್ಸ್ ಖರೀದಿ
ಶೂ ಹಾಗೂ ಸಾಕ್ಸ್ ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಆಯಾ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಿದೆ. ಕಳೆದ ವರ್ಷ ಶೂ ಹಾಗೂ ಸಾಕ್ಸ್ ಖರೀದಿಗೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ., 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ. ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ನಿಗದಿ ಮಾಡಿತ್ತು. ಆದರೆ ಈ ವರ್ಷ ಇದರ ಹಣವನ್ನು ಶಾಲೆಗೆ ನೀಡಿಲ್ಲ ಹೀಗಾಗಿ ಶೂ, ಸಾಕ್ಸ್ ಖರೀದಿಗೆ ಸೂಚನೆ ಬಂದಿದೆ, ಆದರೆ ಹಣ ಬಂದಿಲ್ಲ. ಹಣ ಬಂದ ಮೇಲೆ ಖರೀದಿ ಮಾಡುತ್ತೇವೆ ಅಂತಾ ಶಾಲೆಗಳು ಹೇಳ್ತೀದ್ದು, ಶಾಲಾ ಶಿಕ್ಷಣ ಆಯುಕ್ತ ತ್ರೀಲೋಕ್ ಚಂದ್ರ, ಸ್ಥಳೀಯವಾಗಿ ಶೂ, ಸಾಕ್ಸ್ ಖರೀದಿಗೆ ಹೇಳ್ತೀದ್ದೆವೆ, ಹಣ ಬಿಡುಗಡೆ ಮಾಡುತ್ತೇವೆ ಅಂತಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ತಡೆ, ಶಾಲೆ ಅನುದಾನ ಬಂದ್
ಒಟ್ಟಿನಲ್ಲಿ ಶಾಲೆಗಳು ಶುರುವಾಗಿವೆ. ಈ ಬಾರಿ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಪಠ್ಯಪುಸ್ತಕ ಹಾಗೂ ಶೂ ಸಾಕ್ಸ್ ನೀಡುತ್ತೇವೆ ಅಂತಾ ಹೇಳಿದ್ದ ಶಿಕ್ಷಣ ಇಲಾಖೆ ಪ್ರತೀ ಬಾರಿಯಂತೆ ಶೂ ಸಾಕ್ಸ್ ವಿತರಣೆ ತಡಗೊಳಿಸಿದೆ. ಇನ್ನಾದ್ರೂ ಶಿಕ್ಷಣ ಇಲಾಖೆ ಕೊಂಚ ಇತ್ತ ಗಮನಹರಿಸಬೇಕಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.