Transgender World : ‘ನೀವು ಹೋಮೊ ಸೆಕ್ಷುವಲ್‌ ಆಗಿದ್ದು ನಾರ್ಮಲ್‌ ಆಗಿ ಇರುವವರ ಜೊತೆ ಟೀ ಕುಡಿದಾಗ ಏನು ಅನ್ನಿಸುತ್ತದೆ?’

Rumi Column : ‘ದಯವಿಟ್ಟು ಹೇಳಿ, ನಾವ್ಯಾಕೆ ತೃತೀಯ ಲಿಂಗಿ? ನೀವು ಗಂಡಸರು ಮೊದಲನೆಯವರು, ಹೆಂಗಸರು ಎರಡನೆಯವರು. ನಾವು ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋವ್ರು ಮೂರನೆಯವರಾ? ಇದು ನಿಮಗೇ ನ್ಯಾಯ ಅನ್ನಿಸುತ್ತಾ? ಒಂದು ಮೂರು ಯಾವಾತ್ತೂ ನಾಲ್ಕು ಆಗಿಲ್ಲ.ಆದ್ರೆ ಸರ್ಕಾರಕ್ಕೆ, ನ್ಯಾಯಾಂಗಕ್ಕೆ, ಇದು ಅರ್ಥ ಆಗಲ್ಲ.’ ರೂಮಿ ಹರೀಶ್

Transgender World : ‘ನೀವು ಹೋಮೊ ಸೆಕ್ಷುವಲ್‌ ಆಗಿದ್ದು ನಾರ್ಮಲ್‌ ಆಗಿ ಇರುವವರ ಜೊತೆ ಟೀ ಕುಡಿದಾಗ ಏನು ಅನ್ನಿಸುತ್ತದೆ?’
Follow us
ಶ್ರೀದೇವಿ ಕಳಸದ
|

Updated on:Jan 04, 2022 | 10:28 AM

Rumi Column | ರೂಮಿ ಕಾಲಂ : 21 ವರ್ಷಗಳಿಂದ ಸ್ಟೂಡೆಂಟ್ ಎಂಬ ಹೆಸರಿನಲ್ಲಿ ಅಕಾಡೆಮಿಕ್‌ ಜಗತ್ತಿನಿಂದ ಅನುಭವಿಸುತ್ತಿರುವ ಹಿಂಸೆ ಇದೆಯಲ್ಲ… ಅಲ್ಲಿ ಕೇಳುವ ಪ್ರಶ್ನೆಗಳು ಎದುರಿಗಿರುವವರ ಮನಸ್ಸಿಗೆ ಏನು ಪರಿಣಾಮ ಬೀರಬಹುದು ಅಂತ ಕೂಡ ಯೋಚನೆ ಇಲ್ಲದಷ್ಟು ಇನ್​ಸೆನ್ಸಿಟಿವ್. ಹೀಗಾಗಿ ನಮ್ಮ ಅಲ್ಪಸಂಕ್ಯಾತರ ಜೀವನ ಇವರಿಗೆ ಆಬ್ಸರ್ವ್‌ ಮಾಡುವ ವಸ್ತುಗಳಾಗಿ ಬಿಡುವುದು ಬಹಳ ಹೀನಾಯ ಸ್ಥಿತಿ. ತಮಾಶೆ ಏನು ಅಂದ್ರೆ ನಮ್‌ ಎನ್‌ಜಿಓಗಳೂ ನಮಗೆ ನಮ್ಮ ಸ್ಯಾಡ್‌ ಸ್ಟೋರಿ ಹೇಳೋಕ್ಕೆ ತುಂಬಾ ಇನ್‌ಡೈರೆಕ್ಟ್‌ ಆಗಿ ಟ್ರೇನಿಂಗ್‌ ಕೊಡ್ತಾವೆ. ಒಂದ್‌ ಕಡೆ ನಮಗೆ ಆಗುವ ಹಕ್ಕುಗಳ ಉಲ್ಲಂಘನೆಯನ್ನ ಹೇಳಬೇಕು ಆದ್ರೆ ನಾವು ಆ ಸಮಯದಲ್ಲಿ ಅದನ್ನು ಹೇಗೆ ಎದುರಿಸಿದ್ದು, ಅಥವಾ ನಮ್ಮ ಘನತೆಯನ್ನು ಕಾಪಾಡಿಕೊಳ್ಳಲು ಏನು ಮಾಡಿದೆವು, ಅದರ ಕಥೆ ಯಾರಿಗೂ ಬೇಡ. ಸಮುದಾಯವಾಗಿ ನಮ್ಮ ಜೀವನಗಳ ಹೋರಾಟದ ಅನುಭವಗಳ ಸಾರ ಅಥವಾ ಶಕ್ತಿ ಹೇಗೆ ಬಂತು ಅನ್ನೋದು ಯಾರಿಗೂ ಬೇಡ. ರೂಮಿ ಹರೀಶ್, ಟ್ರಾನ್ಸ್​ ಮ್ಯಾನ್

*

(ಅಲೆ : 7)

ಪ್ರಶ್ನೆ 1 : ನೀವು ಹೋಮೊ ಸೆಕ್ಷುವಲ್‌ ಆಗಿದ್ದು ನಾರ್ಮಲ್‌ ಆಗಿ ಇರುವವರ ಜೊತೆ ಒಂದು ಟೀ ಕುಡಿದಾಗ ಏನು ಅನ್ನಿಸುತ್ತದೆ?

ಪ್ರಶ್ನೆ 2. : ನೀವು ಹೋಮೋ ಸೆಕ್ಷುವಲ್‌ ಆಗಿ ಯಾವಾಗಲೂ ಸೆಕ್ಸ್‌ ಮಾಡಬೇಕು ಅನ್ನಿಸುತ್ತಿರುತ್ತದಾ?

ಪ್ರಶ್ನೆ 3 : ನೀವು ಹೋಮೋ ಸೆಕ್ಷುವಲ್‌ ಆಗಿ ಯಾರಾದರೂ ಕೈ ಕುಲುಕಿದರೆ ಆವಾಗ ಅವರೊಂದಿಗೆ ಸೆಕ್ಸ್‌ ಮಾಡಬೇಕು ಅನ್ನಿಸುತ್ತದಾ? ಆ ಕೈ ಕುಲುಕಿದವರು ನಿಮ್ಮ ಕೈ ಕುಲುಕಿದ್ದವರೂ ನಿಮ್ಮ ಥರ ಹೋಮೊಸೆಕ್ಷುವಲ್‌ ಆಗ್ತಾರಾ?

ಪ್ರಶ್ನೆ 4 : ನೀವು ಹೋಮೊಸೆಕ್ಷುವಲ್‌ ಆಗಿರೋದ್ರಿಂದ, ನಮಗೇ ಏನೂ ಮಾಡೋದಿಲ್ಲಾ ಅಂದ್ರೆ ನಾವು 24 ಗಂಟೆ ನಿಮ್ಮೊಂದಿಗೆ ಕಾಲ ಕಳೆದು ನಿಮ್ಮ ದೈನಂದಿನ ಬದುಕು ಹೇಗಿರುತ್ತೇ ಅಂತ ಅಬ್ಸರ್ವ್‌ ಮಾಡಬೇಕು.

ಪ್ರಶ್ನೆ 5 : ನೀವು ತೃತೀಯಲಿಂಗಿ ಯಾವಾಗ ಆಗಿದ್ದು? ಹೇಗೆ ಆಗಿದ್ದು?

ಪ್ರಶ್ನೆ 6 : ತೃತೀಯಲಿಂಗಿ ಅಂತ ನಿಮಗೆ ಯಾವಾಗ ಅರಿವಾಗಿದ್ದು?

ಪ್ರಶ್ನೆ 7 : ನೀವು ತೃತೀಯಲಿಂಗಿ ಹೊಮೊಸೆಕ್ಷುವಲ್‌ ಆಗಿದ್ದುಕೊಂಡು ಸೆಕ್ಸ್‌ ಮಾಡುವಾಗ ಮನಸ್ಸಿನಲ್ಲಿ ಏನು ಓಡುತ್ತಿರುತ್ತದೆ? ವಿಕೃತ ಯೋಚನೆಗಳಾ ಅಥವಾ ನಿಮಗೆ ರೊಮ್ಯಾನ್ಸ್‌ ಅನ್ನೋದು ಇರುತ್ತಾ? ನಿಮಗೆ ಸುಖ ಸಿಗುತ್ತದಾ?

21 ವರ್ಷಗಳಿಂದ ಸ್ಟೂಡೆಂಟ್ ಎಂಬ ಹೆಸರಿನಲ್ಲಿ ಅಕಾಡೆಮಿಕ್‌ ಜಗತ್ತಿನಿಂದ ಅನುಭವಿಸುತ್ತಿರುವ ಹಿಂಸೆ ಇದು. ಕೇಳುವ ಪ್ರಶ್ನೆಗಳು ಎದುರಿಗಿರುವವರಿಗೆ ಮನಸ್ಸಿಗೆ ಏನು ಪರಿಣಾಮ ಬೀರಬಹುದು ಅಂತ ಕೂಡ ಯೋಚನೆ ಇಲ್ಲದೇ ಇನ್​ಸೆನ್ಸಿಟಿವ್ ಆಗಿ ನಾವು ಅಲ್ಪಸಂಖ್ಯಾತರು ನಮ್ಮ ಜೀವನ ಇವರಿಗೆ ಆಬ್ಸರ್ವ್‌ ಮಾಡುವ ವಸ್ತುಗಳಾಗಿ ಬಿಡುವುದು ಬಹಳ ಹೀನಾಯ ಸ್ಥಿತಿ. ತಮಾಶೆ ಏನು ಅಂದ್ರೆ ನಮ್‌ ಎನ್‌ಜಿಓಗಳೂ ನಮಗೆ ನಮ್ಮ ಸ್ಯಾಡ್‌ ಸ್ಟೋರಿ ಹೇಳೋಕ್ಕೆ ತುಂಬಾ ಇನ್‌ಡೈರೆಕ್ಟ್‌ ಆಗಿ ಟ್ರೇನಿಂಗ್‌ ಕೊಡುತ್ತವೆ. ಒಂದ್‌ ಕಡೆ ನಮಗೆ ಆಗುವ ಹಕ್ಕುಗಳ ಉಲ್ಲಂಘನೆಯನ್ನ ಹೇಳಬೇಕು ಆದ್ರೆ ನಾವು ಆ ಸಮಯದಲ್ಲಿ ಅದನ್ನು ಹೇಗೆ ಎದುರಿಸಿದ್ದು, ಅಥವಾ ನಮ್ಮ ಘನತೆಯನ್ನು ಕಾಪಾಡಿಕೊಳ್ಳಲು ಏನು ಮಾಡಿದೆವು, ಅದರ ಕಥೆ ಯಾರಿಗೂ ಬೇಡ. ಸಮುದಾಯವಾಗಿ ನಮ್ಮ ಜೀವನಗಳ ಹೋರಾಟದ ಅನುಭವಗಳ ಸಾರ ಅಥವಾ ಶಕ್ತಿ ಹೇಗೆ ಬಂತು ಅನ್ನೋದು ಯಾರಿಗೂ ಬೇಡ.

ಒಂದು ತಳ ಸಮುದಾಯ ಅಂದ ತಕ್ಷಣ ಅದು ಹೀಗೆ ಅಂತ ಒಂದು ಬಾಕ್ಸ್‌ನಲ್ಲಿ ಹಾಕಿ, ಅದರ ಕ್ಯಾರೆಕ್ಟರಸ್ಟಿಕ್ಸ್  ಹೀಗೆ, ಅದರ ಬೇಡಿಕೆಗಳು ಹೀಗೆ, ಅದರಲ್ಲಿ ಬೇಕಾಗಿರುವುದು ಏನು ಅಂತ ಫುಲ್‌ ತೀರ್ಮಾನಗಳನ್ನು ಮಾಡಿ, ಇಂತಹ ಸಮುದಾಯಗಳಲ್ಲಿರುವವರಿಗೆ ಅವಕಾಶ ಕೊಡದೇ ಮುಖ್ಯವಾಹಿನಿ ಸಮುದಾಯ ಅಂತ ಹೇಳಬಹುದಾ ಅಥವಾ ಬಹುಸಂಕ್ಯಾತ ಸಮುದಾಯನ ಅದರಲ್ಲೂ ಶೋಶಣೆ ಮಾಡುವ ಜಾತಿ ವರ್ಗಗಳ ಗಂಡಸರು ತಮ್ಮೆಲ್ಲಾ ಕ್ರಿಯೇಟಿವಿಟಿ ಉಪಯೋಗಿಸಿ ಹೆಸರುಗಳನ್ನ ಇಡುತ್ತಾರೆ. ನಾವು ಅದನ್ನ ಒಪ್ಪಿಕೊಂಡು, ತಲೆಬಗ್ಗಿಸಿ ತಗೊಂಡು “ಹೌದು ಮಹಾಸ್ವಾಮಿ ನೀವು ಹೇಳಿದಂಗೆ” ಅಂತ ಮುಂದುವರಿಯಬೇಕು.

ತೃತೀಯಲಿಂಗಿ, ಮಂಗಳಮುಖಿ, ಅಂತರಲಿಂಗಿ ನಿಜವಾಗ್ಲೂ …

ಹಾಗಾದ್ರೆ ನಮ್‌ ಸಮುದಾಯದಲ್ಲಿರುವ ಕೋಥಿ, ಪಂತಿ, ಸಾಟ್ಲಾ ಕೋಥಿ, ನಿರ್ವಾಣ್‌ ಕೋಥಿ, ಎಫ್‌ ಟು ಎಮ್‌, ಜೆಂಡರ್‌ ಕ್ವಿಯರ್‌, ಗಂಡುಬೀರಿ, ಗಸಗಸ, ದೋಸೆ ಕಾವಲಿ, ಚಪ್ಡಿಬಾಜಿ, ಈ ಪದಗಳೆಲ್ಲಾ ಎಲ್ಲಿಗೆ ಹೋಯ್ತು? ಅದಕ್ಕೆ ಗೌರವ ಇಲ್ವ?

ನಾನು ಇವತ್ತು ನಾನಾಗಿ ಅಂದ್ರೆ ತೃತೀಯ ಲಿಂಗಿ ಅಲ್ಲ, ಟ್ರಾನ್ಸ್‌ಜೆಂಡರ್‌ ಕ್ವಿಯರ್‌ ವ್ಯಕ್ತಿಯಾಗಿ 22 ವರ್ಶಗಳ ನನ್ನ ಕೆಲಸದ ಸಾಂವಿಧಾನಿಕ ಧಾರ್ಮಿಕತೆಯಿಂದ ಹೇಳ್ತಾ ಇದ್ದೀನಿ. ನಮ್ಮನ್ನ ನಾವು ಏನ್‌ ಕರೀಬೇಕು ಅಂತ ನಾವು ಪ್ರತಿಯೊಬ್ಬರೂ ಹೇಳ್ತೀವಿ ಅದನ್ನ ಗೌರವಿಸಕ್ಕೆ ಆಗುತ್ತಾ? ಹೌದು ನಿಮ್‌ ಸೆನ್ಸಸ್‌ಗೆ ಇದು ಒಪ್ಪಿಗೆ ಆಗಲ್ಲ.

ದಯವಿಟ್ಟು ಹೇಳಿ, ನಾವ್ಯಾಕೆ ತೃತೀಯ ಲಿಂಗಿ? ನೀವು ಗಂಡಸರು ಮೊದಲನೆಯವರು, ಹೆಂಗಸರು ಎರಡನೆಯವರು. ನಾವು ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋವ್ರು ಮೂರನೆಯವರಾ? ಇದು ನಿಮಗೆ ನ್ಯಾಯ ಅನ್ನಿಸುತ್ತಾ? ಒಂದು ಮೂರು ಯಾವಾತ್ತೂ ನಾಲ್ಕು ಆಗಿಲ್ಲ. ಆದ್ರೆ ಸರ್ಕಾರಕ್ಕೆ, ನ್ಯಾಯಾಂಗಕ್ಕೆ, ಇದು ಅರ್ಥ ಆಗಲ್ಲ. ಸಮಾಜದಲ್ಲಿ ಕೆಲವು ವಿಶಯಗಳು ಸ್ಟಾಟಿಸ್ಟಿಕ್ಸ್‌ನ ಆಚೆ ನಿಲ್ಲುತ್ತವೆ. ಅದನ್ನ ಒಳಗೊಳ್ಳೋ ಸೂತ್ರ ನಮ್ಮ ನ್ಯಾಯದಲ್ಲಿಲ್ಲ. ಆದ್ರೆ ನಮ್ ಸಂವಿಧಾನದಲ್ಲಿದೆ. ಸಂವಿಧಾನದಲ್ಲಿ ಸಮುದಾಯ ಸಮುದಾಯವಾಗಿ ಐಡೆಂಟಿಫೈ ಆಗುತ್ತೆ. ನ್ಯಾಯಾಂಗ ಅದರ ಹಿಸಾಬನ್ನು ಕೇಳುತ್ತೆ.

ಫಿಶ್‌ ಕರಿ ನಾನು ಕಲ್ತಿದ್ದು ಸುನಿಲನಿಂದ, ಮಾಡುವಾಗ ಮೆಂತ್ಯದ ಕಾಳು ಹಾಕುವಾಗ ಕೊಬ್ರಿ ಎಣ್ಣೆಯಲ್ಲಿ ಒಂದು ರೀತಿಯ ಪರಿಮಳ ಬರುತ್ತೆ. ಅಲ್ಲಿವರೆಗೂ ನಾವು ಆ ಪರಿಮಳಕ್ಕೆ ಕಾಯಬೇಕು. ಅದರ ನಂತರ ಶುಂಟಿ ಹಾಕಿ ಬಾಡಿಸಬೇಕು ಅದರ ಪರಿಮಳ ಬಂದ ಮೇಲೆ ಬೆಳ್ಳುಳ್ಳಿ. ಆಗ ಅದು ಬಾಡಿಸುವಾಗ ಒಂದು ಸಮಗ್ರ ಪರಿಮಳದಂತೆ ನಮ್ಮ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಕ್ಯಾತರ ಸಮುದಾಯ ಒಂದರೊಳಗೊಂದು ಸೇರಿಕೊಂಡಿದೆ. ಹೇಗೆ ಶುಂಟಿಗೆ ಬೇರೆ ಜೀವಿತ ಇದೆಯೋ, ಹಾಗೆ ಮೆಂತ್ಯ ಮತ್ತು ಬೆಳ್ಳುಳ್ಳಿಗೂ ಇದೆ. ಅಂದ್ರೆ ನಾವೆಲ್ಲರೂ ಸೇರಿದಾಗ ಒಂದು ರುಚಿಯಾದ ಕಲರ್‌ ಕಲರ್‌ ಆದ ಫಿಶ್‌ ಕರಿ ಥರ ಒಟ್ಟಿಗೆ ಹೊಮ್ಮತೇವೆ.

ರಾಗಿ ಮುದ್ದೆ ಮಾಡಬೇಕಾದರೆ ಅದರ ಹದ ತಿಳಿದುಕೊಳ್ಳಬೇಕು. ಹದ ಅದು ಸಲೀಮ್‌ ಚಾಚಾನ ಅಂಗಡಿಯ ಚಹದಂತೆ. ಹಾಗೇ ನಾವೂ. ನಾವ್ಯಾರು ಬೇರೆ ಅಲ್ಲಾ. ತೃತೀಯ ಲಿಂಗಿ, ಅಂತರ ಲಿಂಗಿ, ನೀವು ಕೊಡುವ ಹೆಸರಲ್ಲ. ನಾವು ಅಂದ್ರೆ, ನಾನು, ಊಮಿ, ಸುನಿಲ್‌, ಕ್ರಿಸ್ಟಿ, ಕಣ್ಣನ್‌, ಸೌಮ್ಯ, ಅಕ್ಕೈ, ರೇವತಿ, ಚಾಂದಿನಿ, ಮಲ್ಲು, ರೋಸಿ, ಕುಮ್ಸ್‌, ಕುಮಾರಿ, ಚಂದ್ರಿ, ಸವಿ, ನಾವೆಲ್ಲಾ ಒಂದು ಮಟನ್‌ ಬಿರಿಯಾನಿ ಥರ. ಇವತ್ತು ಅಕ್ಕೈದು ಆಟೋ ಬಯಾಗ್ರಫಿ ಮೇಲೆ ನಾಟಕ ಬರ್ತಿದೆ. ಯಾವ ಅಕಾಡೆಮಿಕ್ಸ್‌ಗೂ ಸಿಗದ ಒಂದು ಕಾಲ ಇತ್ತು. ಈ ಮೇಲೆ ಹೇಳಿದ ನಾವೆಲ್ಲರೂ ನಮ್ಮದೇ ಥಿಯರಿಗಳನ್ನ ನಮ್ಮ ಅನುಭವಗಳಿಂದ ನಮ್ಮ ಹೋರಾಟಗಳನ್ನ ಕಟ್ಟಿಕೊಂಡಿದ್ದೆವು. ಈಗಲೂ ಉಮೀ ನನ್ನ ಜೀವದ ಗೆಳತಿ. ಅವಳಿಗೆ ನನಗೆ ತುಂಬಾ ಜಗಳ ಆಗಿದೆ ಆದ್ರೆ ಇವತ್ತಿಗೆ ನಾನೇನಾದ್ರು ಕೆಲಸ ಮಾಡ್ಬೇಕಾದರೆ ಅವಳಿಂದ ಶುರು ಮಾಡ್ತೀನಿ. ಅಕ್ಕೈಯಿಂದ ಮುಂದುವರೆಸ್ತೀನಿ, ಮಲ್ಲು, ಸೌಮ್ಯ ಇವರೆಲ್ಲರೂ ನಮಗೆ ಅಂದ್ರೆ ನಂಗೆ ಸುನಿಲಿಗೆ ನಮ್ಮ ಸಂವಿಧಾನದಂತೆ.

ಪೊಲೀಸ್ ಸ್ಟೇಶನ್‌ಗಳಲ್ಲಿ ನಮಗೆಲ್ಲರಿಗೂ ಆಗಿರುವ ಅನುಭವಗಳಲ್ಲಿ ನಮ್ಮ ಒಂದೊಂದು ಜೀವಿತಗಳೂ ಒಂದೊಂದೂ ಅನುಭವಗಳೂ ಬಾಬಾ ಸಾಹೇಬರ ಸಂವಿಧಾನಕ್ಕೆ ನಾವೆಲ್ಲರೂ ಸೆಟೆದು ಎದ್ದು ನಿಲ್ಲುತ್ತೇವೆ ಎಂದರೆ ಅದು ಒಂದು ಅತಿಶಯವಲ್ಲ. ನಮಗೆಲ್ಲರಿಗೂ ಗೊತ್ತಿತ್ತು, ನಮ್ಮ ವಿಮುಕ್ತಿ ಇದ್ದದ್ದೇ ಸಂವಿಧಾನದಲ್ಲಿ. ಹಾಗೆ ನಮಗೆ ಸಿಕ್ಕ ಅಥವಾ ಸೆಕ್ಸ್‌ ವರ್ಕರ್ಸ್‌ಗೆ ಸಿಕ್ಕ ನ್ಯಾಯಾ ಎಂದರೆ ಸಂವಿಧಾನ. ಇಂದು ನಾವು ಅಕಾಡೆಮಿಕ್ಸ್‌ಗೆ ಹೇಳುವುದೇನೆಂದ್ರೆ… ನೀವು ನಮ್ಮನ್ನ ಕೇಳಿ!

*

ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗುವುದು. ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ, ಆಶಯ, ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com

ಹಿಂದಿನ ಅಲೆ : Rumi Column : ಗಂಡಸರೇ, ಸಂಜೆ ಆರು ಗಂಟೆ ಮೇಲೆ ಮನೆಯಿಂದ ಆಚೆ ಬರಬೇಡಿ!

Published On - 10:23 am, Tue, 4 January 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ