AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Success Story: ತಂದೆಯ ಶೂ ಅಂಗಡಿಯಿಂದ IAS ಅಧಿಕಾರಿವರೆಗೆ; 6ನೇ ರ‍್ಯಾಂಕ್ ಪಡೆದು ಇತಿಹಾಸ ನಿರ್ಮಿಸಿದ ಶುಭಮ್ ಗುಪ್ತಾ ಯಶೋಗಾಥೆ

ಶೂ ಅಂಗಡಿಯಿಂದ IAS ಅಧಿಕಾರಿಯಾದ ಶುಭಮ್ ಗುಪ್ತಾ ಅವರ ಯಶಸ್ಸಿನ ಕಥೆ ಸ್ಪೂರ್ತಿದಾಯಕ. ಕುಟುಂಬದ ಕಷ್ಟ, 80 ಕಿ.ಮೀ ಪ್ರಯಾಣ ಮಾಡಿ ಓದು, ಯುಪಿಎಸ್‌ಸಿ ಪರೀಕ್ಷೆಯಲ್ಲಿನ ವೈಫಲ್ಯಗಳ ನಡುವೆಯೂ ಛಲ ಬಿಡದೆ ಹೋರಾಡಿ ಅಖಿಲ ಭಾರತ 6ನೇ ರ‍್ಯಾಂಕ್ ಪಡೆದು ತಂದೆಯ ಕನಸು ನನಸಾಗಿಸಿದರು. ಕಠಿಣ ಪರಿಶ್ರಮ ಮತ್ತು ಗುರಿಯ ಮೇಲಿನ ನಂಬಿಕೆಯಿಂದ ಯಾವುದೇ ಸಾಧನೆ ಸಾಧ್ಯ ಎಂದು ಇವರು ನಿರೂಪಿಸಿದ್ದಾರೆ.

Success Story: ತಂದೆಯ ಶೂ ಅಂಗಡಿಯಿಂದ IAS ಅಧಿಕಾರಿವರೆಗೆ; 6ನೇ ರ‍್ಯಾಂಕ್ ಪಡೆದು ಇತಿಹಾಸ ನಿರ್ಮಿಸಿದ ಶುಭಮ್ ಗುಪ್ತಾ ಯಶೋಗಾಥೆ
ಶುಭಮ್ ಗುಪ್ತಾ
ಅಕ್ಷತಾ ವರ್ಕಾಡಿ
|

Updated on: May 23, 2026 | 4:43 PM

Share

ಹೆತ್ತವರ ಮುಖದಲ್ಲಿ ಹೆಮ್ಮೆಯ ನಗು ಮೂಡಿಸುವುದು ಪ್ರತೀ ಮಕ್ಕಳ ಕನಸು. ಅದೇ ರೀತಿ ತನ್ನ ತಂದೆಯ ಕನಸನ್ನು ನನಸಾಗಿಸಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 6ನೇ ರ‍್ಯಾಂಕ್ ಪಡೆದು IAS ಅಧಿಕಾರಿಯಾದ ಶುಭಮ್ ಗುಪ್ತಾ ಅವರ ಜೀವನಗಾಥೆ ಇಂದು ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ, ನಿರಂತರ ಹೋರಾಟ ಮತ್ತು ಎಂದಿಗೂ ಕೈಬಿಡದ ಮನೋಭಾವ ಇದ್ದರೆ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂಬುದಕ್ಕೆ ಶುಭಮ್ ಜೀವಂತ ಉದಾಹರಣೆ.

ಶುಭಮ್ ಅವರ ಕುಟುಂಬ ಮೂಲತಃ ರಾಜಸ್ಥಾನದ ಸಿಕಾರ್ ಜಿಲ್ಲೆಯದ್ದು. ಬಳಿಕ ಕುಟುಂಬ ಜೈಪುರದಲ್ಲಿ ನೆಲೆಸಿದ್ದರೂ, 2007ರಲ್ಲಿ ತಂದೆಯ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾದ ಕಾರಣ ಜೀವನ ಸಂಪೂರ್ಣ ತಲೆಕೆಳಗಾಯಿತು. ಕುಟುಂಬ ಜೀವನೋಪಾಯಕ್ಕಾಗಿ ಗುಜರಾತ್‌ನ ದಹನು ಪ್ರದೇಶಕ್ಕೆ ವಲಸೆ ಹೋಗಬೇಕಾಯಿತು. ಅಲ್ಲಿಂದ ಆರಂಭವಾದ ಕಷ್ಟದ ದಿನಗಳು ಶುಭಮ್ ಅವರನ್ನು ಮತ್ತಷ್ಟು ಗಟ್ಟಿಗೊಳಿಸಿತು.

ದಹನುವಿನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಲ್ಲದ ಕಾರಣ, ಶುಭಮ್ ಮತ್ತು ಅವರ ಸಹೋದರಿಯನ್ನು 80 ಕಿಲೋಮೀಟರ್ ದೂರದ ಶಾಲೆಗೆ ಸೇರಿಸಲಾಗಿತ್ತು. ಪ್ರತಿದಿನ ರೈಲಿನಲ್ಲಿ ದೂರ ಪ್ರಯಾಣ ಮಾಡಿ ಓದಿದರೂ, ಶಿಕ್ಷಣದ ಮೇಲಿನ ಅವರ ಆಸಕ್ತಿ ಎಂದಿಗೂ ಕಡಿಮೆಯಾಗಲಿಲ್ಲ. 10ನೇ ತರಗತಿಯಲ್ಲಿ 10 CGPA ಪಡೆದು ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ ಅವರು, ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿ ಪಡೆದರು.

UPSC ಕನಸನ್ನು ಬೆನ್ನಟ್ಟಲು ಅವರು ‘ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ಮಾಡುತ್ತಿದ್ದ ಸ್ನಾತಕೋತ್ತರ ಪದವಿಯನ್ನು ಅರ್ಧಕ್ಕೆ ಕೈಬಿಟ್ಟರು. ದೆಹಲಿಯಿಂದ ಮರಳಿದ ಬಳಿಕ ತಂದೆಯ ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ UPSC ಸಿದ್ಧತೆ ಆರಂಭಿಸಿದರು. ಅಂಗಡಿಯಲ್ಲಿ ಸರಕುಗಳ ಮೂಟೆ ಹೊರುವುದು, ಗ್ರಾಹಕರಿಗೆ ಸೇವೆ ನೀಡುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಾ, ರಾತ್ರಿ ಹೊತ್ತು ಓದುತ್ತಿದ್ದರು.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

“ನನ್ನ ಮಗ ಅಧಿಕಾರಿಯಾಗಬೇಕು” ಎಂಬುದು ತಂದೆಯ ದೊಡ್ಡ ಕನಸಾಗಿತ್ತು. ಆ ಕನಸೇ ಶುಭಮ್ ಅವರಿಗೆ ಪ್ರೇರಣೆಯಾಯಿತು. ಆದರೆ UPSC ಪಯಣ ಸುಲಭವಾಗಿರಲಿಲ್ಲ. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲೇ ಸೋಲು ಕಂಡ ಅವರು, ಎರಡನೇ ಪ್ರಯತ್ನದಲ್ಲಿ AIR 360 ಪಡೆದು ಇಂಡಿಯನ್ ಆಡಿಟ್ ಅಂಡ್ ಅಕೌಂಟ್ಸ್ ಸರ್ವೀಸ್‌ಗೆ ಆಯ್ಕೆಯಾದರು. ಆದರೂ IAS ಗುರಿ ಕೈಬಿಡಲಿಲ್ಲ. ಮೂರನೇ ಪ್ರಯತ್ನದಲ್ಲಿ ಮತ್ತೆ ವಿಫಲರಾದಾಗ ಸಂಪೂರ್ಣ ನಿರಾಶರಾಗಿದ್ದರು. ಆದರೆ ಕುಟುಂಬದ ಬೆಂಬಲ ಮತ್ತು ಆತ್ಮವಿಶ್ವಾಸದಿಂದ ಮತ್ತೊಮ್ಮೆ ಹೋರಾಡಿದ ಅವರು, 2018ರಲ್ಲಿ ನಾಲ್ಕನೇ ಪ್ರಯತ್ನದಲ್ಲಿ AIR 6 ಪಡೆದು ದೇಶದ ಗಮನ ಸೆಳೆದರು.

ಇಂದು IAS ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶುಭಮ್ ಗುಪ್ತಾ, “ಯಶಸ್ಸಿಗೆ ಶಾರ್ಟ್‌ಕಟ್ ಇಲ್ಲ. ಹಿನ್ನೆಲೆ ಎಷ್ಟೇ ಸಾಮಾನ್ಯವಾಗಿದ್ದರೂ, ಕಷ್ಟಗಳು ಎಷ್ಟೇ ದೊಡ್ಡದಾಗಿದ್ದರೂ ಗುರಿಯ ಮೇಲಿನ ನಂಬಿಕೆ ಮತ್ತು ಕಠಿಣ ಪರಿಶ್ರಮ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ” ಎಂದು ಯುವಕರಿಗೆ ಸಂದೇಶ ನೀಡಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ