ಗೋವಾದಲ್ಲಿ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್​ಗೆ; ಗೆಲ್ಲಬಹುದಾದ ಅಭ್ಯರ್ಥಿಗಳು ಪ್ರತ್ಯೇಕ ಸ್ಥಳಕ್ಕೆ

ಗೋವಾದಲ್ಲಿ ನೂತನ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್​ಗೆ ವಹಿಸಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಸ್ಥಳಕ್ಕೆ ಇರಿಸುವಂತೆ ನೋಡಿಕೊಳ್ಳಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತು ಮಾಡಿ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ.

ಗೋವಾದಲ್ಲಿ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್​ಗೆ; ಗೆಲ್ಲಬಹುದಾದ ಅಭ್ಯರ್ಥಿಗಳು ಪ್ರತ್ಯೇಕ ಸ್ಥಳಕ್ಕೆ
ಡಿಕೆ ಶಿವಕುಮಾರ್
TV9kannada Web Team

| Edited By: ganapathi bhat

Mar 08, 2022 | 2:17 PM

ಬೆಂಗಳೂರು: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ ಹಲವು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಪೈಕಿ, ಮಾರ್ಚ್ 10 ರಂದು ಗೋವಾ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು (ಮಾರ್ಚ್ 8) ಗೋವಾಗೆ ತೆರಳಲಿದ್ದಾರೆ ಎಂದು ಮಾಹಿತಿ ಲಭಿಸಿದೆ. ಎಐಸಿಸಿ ಸೂಚನೆ ಮೇರೆಗೆ ಡಿ.ಕೆ. ಶಿವಕುಮಾರ್ ಗೋವಾಗೆ ತೆರಳಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಶಾಸಕರು ಕೈತಪ್ಪದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಗೋವಾದಲ್ಲಿ ನೂತನ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್​ಗೆ ವಹಿಸಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಸ್ಥಳಕ್ಕೆ ಇರಿಸುವಂತೆ ನೋಡಿಕೊಳ್ಳಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತು ಮಾಡಿ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ.

ಗೋವಾ: ಚುನಾವಣೋತ್ತರ ಸಮೀಕ್ಷೆ ಏನು ಹೇಳಿದೆ? ಇಲ್ಲಿದೆ ಮಾಹಿತಿ

ಮೂಲ ಬಿಜೆಪಿ ಕಾಂಗ್ರೆಸ್ ಎಂಜಿಪಿ ಇತರೆ
ಇಂಡಿಯಾ ಟುಡೇ 14-18 15-20 2-5 0-4
ಎಬಿಪಿ ನ್ಯೂಸ್ 13-17 5-9 5-9
0-0 0-1 0-2 0-3 0-4

ಗೋವಾದಲ್ಲಿ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಮತ್ತು ರಿಪಬ್ಲಿಕ್ ಪಿ-ಮಾರ್ಕ್ ಎರಡೂ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಿಗಿಯಾದ ಸ್ಪರ್ಧೆ ಏಳುವುದಾಗಿ ಘೋಷಿಸಿದೆ. ಆದರೆ, ಇವೆರಡೂ ಸಂಪೂರ್ಣ ಬಹುಮತವನ್ನು ಗೆಲ್ಲುವ ನಿರೀಕ್ಷೆಯಿಲ್ಲ. ಸಮೀಕ್ಷೆಗಳ ಪ್ರಕಾರ, ಬಿಜೆಪಿ 14-18 ಮತ್ತು ಕಾಂಗ್ರೆಸ್ 15-20 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 13-17 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಿಪಬ್ಲಿಕ್ ಹೇಳಿದೆ.

ಇದನ್ನೂ ಓದಿ: Exit Polls 2022: ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ದರ್ಬಾರ್, ಪಂಜಾಬ್​ನಲ್ಲಿ ಆಮ್ ಆದ್ಮಿ; ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೀಗಿದೆ

ಇದನ್ನೂ ಓದಿ: TV9 Exit Poll Results 2022: ಐದು ರಾಜ್ಯಗಳಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ? ಇಲ್ಲಿದೆ ಚುನಾವಣೋತ್ತರ ಸಮೀಕ್ಷೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada