ಮಣಿಪುರ ಹಿಂಸಾಚಾರ; ಕಲಬುರಗಿ ಚುನಾವಣಾ ಪ್ರಚಾರ ರದ್ದು, ದೆಹಲಿಗೆ ತೆರಳಿದ ಅಮಿತ್ ಶಾ

ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕಲಬುರಗಿಯಲ್ಲಿ (Kalaburagi) ಭಾಗಿಯಾಗಬೇಕಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮ ಬಹುತೇಕ ರದ್ದಾಗಿದೆ.

ಮಣಿಪುರ ಹಿಂಸಾಚಾರ; ಕಲಬುರಗಿ ಚುನಾವಣಾ ಪ್ರಚಾರ ರದ್ದು, ದೆಹಲಿಗೆ ತೆರಳಿದ ಅಮಿತ್ ಶಾ
ಅಮಿತ್ ಶಾ
Follow us
Ganapathi Sharma
|

Updated on: May 04, 2023 | 4:51 PM

ಕಲಬುರಗಿ: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕಲಬುರಗಿಯಲ್ಲಿ (Kalaburagi) ಭಾಗಿಯಾಗಬೇಕಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮ ರದ್ದಾಗಿದೆ. ಪಂಜಾಬ್​ನಿಂದ ಕಲಬುರಗಿಗೆ ಬರುತ್ತಿದ್ದ ಅಮಿತ್ ಶಾ, ಮಾರ್ಗ ಮಧ್ಯದಲ್ಲೇ ನಿರ್ಧಾರ ಬದಲಾಯಿಸಿ ದೆಹಲಿಗೆ ತೆರಳಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿಯಲ್ಲಿ ಇಂದು ಅಮಿತ್ ಶಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಮಣಿಪುರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಕಾರಣ ತುರ್ತಾಗಿ ಅವರು ದೆಹಲಿಗೆ ತೆರಳಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ಕಳೆದ ಕೆಲವು ದಿನಗಳಲ್ಲಿ ತೊಡಗಿಕೊಂಡಿದ್ದು, ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು ಮೇ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಏನಾಗುತ್ತಿದೆ ಮಣಿಪುರದಲ್ಲಿ?

ಮಣಿಪುರದಲ್ಲಿ ಬಹುಸಂಖ್ಯಾತ ‘ಮೈತೆ’ ಸಮುದಾಯವನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸುವುದರ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದ್ದು, ಹಲವೆಡೆ ಹಿಂಸಾಚಾರ ಉಲ್ಬಣಿಸಿದೆ. ಮಣಿಪುರದಲ್ಲಿ ಕಳೆದ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಮತ್ತೆ ಗದ್ದುಗೆಗೇರಿತ್ತು. ನಂತರ ‘ಮೈತೆ’ ಸಮುದಾಯವನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ನಿರ್ಧಾರದ ವಿರುದ್ಧ ಆರಂಭವಾಗಿರುವ ಪ್ರತಿಭಟನೆ ಈಗ ತೀವ್ರ ಹಿಂಸಾಚಾರದ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ನನ್ನ ರಾಜ್ಯ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ: ಮೋದಿ, ಅಮಿತ್ ಶಾಗೆ ಮೇರಿ ಕೋಮ್ ಮನವಿ

ರಾಜಧಾನಿ ಇಂಫಾಲ್, ಚುರಾಚಂದ್‌ಪುರ, ಬಿಷ್ಣುಪುರ್ ಮತ್ತು ಕಾಂಗ್‌ಪೋಕ್ಪಿ ಸೇರಿದಂತೆ ಇತರ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲಾಗಿದೆ. ಹಲವೆಡೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ