Hassan constituency: ಹಾಸನಾಂಬೆ ತವರಿನಲ್ಲಿ ಗೆಲ್ಲೋದ್ಯಾರು? ಏನಂತಾರೆ ಅಭ್ಯರ್ಥಿಗಳು?

ಸತತ ಒಂದು ತಿಂಗಳ ಜಿದ್ದಾ ಜಿದ್ದಿನ ಹೋರಾಟಕ್ಕೆ ತೆರೆ ಬಿದ್ದಿದೆ. ರಾಜ್ಯ ವಿಧಾನಸಭೆಯಲ್ಲಿ ಯಾರು ಗದ್ದುಗೆ ಏರ್ತಾರೆ ಎನ್ನುವ ಕುತೂಹಲದ ನಡುವೆ ತಮ್ಮ ಅಮೂಲ್ಯ ಮತದಾನ ಮೂಲಕ ಮತದಾರ ಪ್ರಭು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಯಾರು ಗೆಲ್ತಾರೆ ಎನ್ನುವ ಕುತೂಹಲದ ಚರ್ಚೆ ಎಲ್ಲೆಡೆ ಆರಂಭವಾಗಿದೆ. ಇತ್ತ ಇಡೀ ರಾಜ್ಯದ ಗಮನ ಸೆಳೆದಿರುವ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ನಡುವೆ ನೇರಾ ಹಣಾ ಹಣಿ ಕಂಡು ಬಂದಿದ್ದು ಅಂತಿಮವಾಗಿ ಯಾರು ಗೆಲ್ಲುತ್ತಾರೆ? ಎನ್ನುವ ಕುತೂಹಲ ಕೆರಳಿಸಿದೆ.

Hassan constituency: ಹಾಸನಾಂಬೆ ತವರಿನಲ್ಲಿ ಗೆಲ್ಲೋದ್ಯಾರು? ಏನಂತಾರೆ ಅಭ್ಯರ್ಥಿಗಳು?
ಸ್ವರೂಪ್​, ಪ್ರೀತಂ ಗೌಡ
Follow us
|

Updated on: May 12, 2023 | 12:39 PM

ಹಾಸನ: ಒಂದು ತಿಂಗಳ ಜಿದ್ದಾ ಜಿದ್ದಿನ ಹೋರಾಟಕ್ಕೆ ಮೇ.10 ರಂದು ತೆರೆ ಬಿದ್ದಿದೆ. ಮತ ಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ನಾಳೆ(ಮೇ.13) ನಡೆಯುವ ಮತ ಎಣಿಕೆಗೆ ಕೌಂಟ್ ಡೌನ್ ಶುರುವಾಗಿದೆ. ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು, ರಾಜ್ಯದ ಹೈವೋಲ್ಟೇಜ್ ಕ್ಷೇತ್ರ ಹಾಸನ(Hassan)ದಲ್ಲಿ ಕದನ ಕುತೂಹಲ ಮೂಡಿಸಿದೆ. ಯಾರು ಒಂದಾದ್ರು, ಎಷ್ಟೇ ಹೊರಾಟ ಮಾಡಿದ್ರು, ಗೆಲುವು ನಮ್ಮದೆ ಎಂತಿದ್ದಾರೆ ಪ್ರೀತಂ ಗೌಡ (Preetham Gowda). ಇತ್ತ ಒಂದೇ ಓಟಲ್ಲಿ ಗೆದ್ರು, ಅದೇ ಕೋಟಿ ಸಮಾನ ಎಂದಿದ್ದಾರೆ ಸ್ವರೂಪ್(Swaroop). ಹೌದು ಕಳೆದ 30 ದಿನಗಳಿಂದ ರಾಜ್ಯದ ಮೂರೂ ಪಕ್ಷಗಳ ನಾಯಕರು ಕಾಲಿಗೆ ಚಕ್ರಕಟ್ಟಿಕೊಂಡು ವಿಧಾನಸೌಧದ ಗದ್ದುಗೆ ಏರೋಕೆ ಇನ್ನಿಲ್ಲದ ಕಸರತ್ತು ನಡಸಿದ್ದಾರೆ. ಮತದಾರರ ಮುಂದೆ ಬಣ್ಣ ಬಣ್ಣದ ಕನಸು ಬಿತ್ತಿ, ನಮಗೇ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದಾರೆ. ಆದ್ರೆ, ಎಲ್ಲರ ಮನವಿ ಆಲಿಸಿರುವ ಮತದಾರ ತನ್ನ ತೀರ್ಪು ಬರೆದಿದ್ದಾನೆ. ಜಿದ್ದಾ ಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿರುವ ರಾಜ್ಯದ ಹೈವೋಲ್ಟೇಜ್ ಕ್ಷೇತ್ರದಲ್ಲಿ ಒಂದಾಗಿರುವ ಹಾಸನದಲ್ಲಿ ಮತದಾನದ ಬಳಿಕವೂ ಕದನ ಕುತೂಹಲ ಮುಂದುವರೆದಿದೆ.

ಬಿಜೆಪಿ ಜೆಡಿಎಸ್ ನಡುವೆ ನೇರಾ ನೇರಾ ನಡೆದಿರುವ ಪೈಟ್​ನಲ್ಲಿ ಅಂತಿಮವಾಗಿ ಗೆಲುವು ಯಾರ ಮುಡಿಗೇರಲಿದೆ ಎನ್ನುವ ಕುತೂಹಲ ಇದೆ. ಕ್ಷೇತ್ರದಲ್ಲಿ ಜನರು ಜಾತಿ ಧರ್ಮ ಮೀರಿ ಮತಗಹಾಕಿದ್ದಾರೆ. ಎಂದಿರುವ ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾನದ ಬಳಿಕ ನಿನ್ನೆ(ಮೇ.11) ಮನೆಯಲ್ಲೆ ರಿಲ್ಯಾಕ್ಸ್ ಮಾಡಿದ ಪ್ರೀತಂಗೌಡ, ಕ್ಷೇತ್ರದಲ್ಲಿ ಚುನಾವಣೆ ನಡಸಿದ ಕಾರ್ಯಕರ್ತರ ಜೊತೆ ಮನೆಯಲ್ಲಿ ಸಮಾಲೋಚನೆ ನಡೆಸಿದ್ರು, ಎಷ್ಟು ಅಂತರದಲ್ಲಿ ಗೆಲುವು ಸಿಗಬಹುದು, ಎಲ್ಲೆಲ್ಲಿ ಎಷ್ಟು ಮತ ಬರಬಹುದು ಎನ್ನುವ ಲೆಕ್ಕಾಚಾರ ಮಾಡಿ ಮಾತನಾಡಿದ ಅವರು ‘ಲೆಕ್ಕ ಬರೆದಂತೆಲ್ಲ ಲೀಡ್ ಹೆಚ್ಚಾಗುತ್ತಲೇ ಇದೆ. ಜೆಡಿಎಸ್​ನಲ್ಲಿ ಮಾಜಿ ಪ್ರಧಾನಿ, ಮಾಜಿ ಸಿಎಂ, ಮಾಜಿ ಸಚಿವರು ಸಂಸದರು, ವಿಧಾನಪರಿಷತ್ ಸದಸ್ಯರೆಲ್ಲ ಒಂದಾಗಿ ಚುನಾವಣೆ ಮಾಡಿದ್ರು, ಅವರು ನಮ್ಮ ಸಮೀಪ ಕೂಡ ಬರೋಕೆ ಆಗಲಿಲ್ಲ ಎಂದು ದಳಪತಿಗಳ ವಿರುದ್ದ ಗುಡುಗಿದ್ದಾರೆ.

ಇದನ್ನೂ ಓದಿ:Karnataka Assembly Election: ಕಳೆದ ಚುನಾವಣೆಗಳಲ್ಲಿ 50 ಸಾವಿರ ಮತಗಳ ಅಂತರದಿಂದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳು

ಬಹುಶಃ ಅವರು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಹಾಕೋದೆ ಡೌಟ್ ಎಂದು ಲೇವಡಿ ಮಾಡಿರುವ ಅವರು ‘ನನ್ನ ವಿರುದ್ದ ಚುನಾವಣೆ ಮಾಡೋಕೆ ಇನ್ನೂ ನಾಲ್ಕೈದು ಬಾರಿ ರಿಹರ್ಸಲ್ ಮಾಡಿಕೊಂಡು ಬರಲಿ ಎಂದು ಗುಟುರುಹಾಕಿದ್ದು, ಈ ಬಾರಿ ಮತ್ತೊಮ್ಮೆ ಗೆಲುವು ನಮ್ಮದೇ ಎನ್ನುವ ಮೂಲಕ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಮತ್ತೊಮ್ಮೆ ಕಮಲ ಅರಳೋದು ನಿಶ್ಚಿತ ಎಂದಿದ್ದಾರೆ.ಮೂರು ತಿಂಗಳ ಹಿಂದಿನಿಂದಲೂ ಕೂಡ ಹಾಸನದಲ್ಲಿ ಯಾರು ಅಭ್ಯರ್ಥಿ ಆಗ್ತಾರೆ ಎನ್ನುವ ಚರ್ಚೆ ಮೂಲಕ ಶುರುವಾಗಿದ್ದ ಭವಾನಿ ರೇವಣ್ಣ ವರ್ಸಸ್ ಸ್ವರೂಪ್ ಪ್ರಕಾಶ್ ನಡುವಿನ ಸಮರದಲ್ಲಿ ಕಡೆಗೂ ಟಿಕೆಟ್ ಪಡೆದ ಸ್ವರೂಪ್​ಗೆ ದಳಪತಿಗಳ ಕುಟುಂಬ ಒಂದಾಗಿ ಹೋರಾಟ ಮಾಡಿ ಶತಾಯ ಗತಾಯ ಕಳೆದ ಬಾರಿ ಕಳೆದುಕೊಂಡ ಕ್ಷೇತ್ರವನ್ನು ಮರಳಿ ಪಡೆಯುವ ರಣತಂತ್ರ ಹೆಣೆದಿತ್ತು. ಇದಕ್ಕೆ ಪ್ರತಿಯಾಗಿ ತಮ್ಮದೇ ಸ್ಟೈಲಿನಲ್ಲಿ ತಿರುಗೇಟು ಕೊಟ್ಟಿರುವ ಬಿಜೆಪಿಯ ಪ್ರಿತಂಗೌಡ, ಮತ್ತೊಮ್ಮೆ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಊರು ಬಿಡಿಸ್ತೀನಿ ಅಂದವರು ಎಲ್ಲಿರ್ತಾರೆ ನೋಡೋಣ ಎಂದಿದ್ದಾರೆ. ಆದ್ರೆ, ಮೊದಲಿನಿಂದಲೂ ಸೈಲೆಂಟಾಗೆ ತಮ್ಮ ಹೊರಾಟ ಮಾಡಿದ ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ ಪುತ್ರ, ಸ್ವರೂಪ್ ಪ್ರಕಾಶ್ ಎಲ್ಲರ ಬೆಂಬಲದಿಂದ ಚುನಾವಣೆ ಎದುರಿಸಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಮತದಾನ ಮುಗಿದ ಬಳಿಕ ಇಂದು(ಮೇ.11) ಕ್ಷೇತ್ರದ ಹಲವೆಡೆ ರೌಂಡ್ ಮಾಡಿದ ಸ್ವರೂಪ್ ಆಪ್ತರ ಮದುವೆ ಸಮಾರಂಭದಲ್ಲಿ ಭಾಗಿಯಾದರು. ಸ್ವರೂಪ್ ಹೋದಲ್ಲೆಲ್ಲ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡ್ರು, ಅಭಿಮಾನದಿಂದ ಸ್ವಾಗತ ಮಾಡಿದ್ರು, ರಿಲ್ಯಾಕ್ಸ್ ಮೂಡಲ್ಲಿ ಓಡಾಡಿದ ಸ್ವರೂಪ್, ಕ್ಷೇತ್ರದಲ್ಲಿ ಪಕ್ಷಾತೀತವಾಗಿ ನನಗೆ ಬೆಂಬಲ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದ ಎಂದು ಹೇಳುವ ಮೂಲಕ ನೂರಕ್ಕೆ ನೂರು ಒಂದೇ ಒಂದು ಓಟಲ್ಲಾದ್ರು ನಾವು ಗೆಲ್ತೀವಿ. ಒಂದೊಂದು ಓಟು ಕೂಡ ನಮಗೆ ಕೋಟಿ ಸಮಾನ. ಅಂತರ ಎಷ್ಠೇ ಇರಲಿ ಗೆಲುವು ನಮ್ಮದೇ ಎನ್ನೋ ಮೂಲಕ ಕಳೆದುಕೊಂಡ ಕ್ಷೇತ್ರದಲ್ಲಿ ಮತ್ತೊಮ್ಮೆ ದಳಪತಿಗಳ ಕೇಕೆ ನಿಶ್ಚಿತ ಎಂದರು.

ಇದನ್ನೂ ಓದಿ:Betting on candidates: ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಎರಡು ದಿನ ಬಾಕಿಯಿರುವಾಗಲೇ ಮೈಸೂರಲ್ಲಿ ಜೋರಾಯ್ತು ರಾಜಕೀಯ ಬೆಟ್ಟಿಂಗ್!

ಒಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಹಾಸನ ಕ್ಷೇತ್ರದಲ್ಲಿ ಗೆಲ್ಲೋದು ಯಾರು ಎನ್ನುವ ಕುತೂಹಲ ಈ ಕ್ಷಣಕ್ಕೂ ಅಂತಿಮ ಆಗಿಲ್ಲ. ಜಿದ್ದಾ ಜಿದ್ದಿನ ಕಣದಲ್ಲಿ ಮತದಾರ ಯಾರಿಗೆ ಜೈ ಅಂದಿದ್ದಾನೆ. ಅಂತಿಮವಾಗಿ ಯಾರು ಹಾಸನಾಂಬೆ ತವರಲ್ಲಿ ಗದ್ದುಗೆ ಏರ್ತಾರೆ ಎನ್ನೋದಕ್ಕೆ ಇನ್ನೊಂದು ದಿನ ಕಾಯಲೇ ಬೇಕು.

ವರದಿ: ಮಂಜುನಾಥ್ ಕೆ ಬಿ ಟಿವಿ9 ಹಾಸನ

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ