AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಹೆಚ್​ಡಿ ಕುಮಾರಸ್ವಾಮಿ ಎಂದ ಮಾಜಿ ಪ್ರಧಾನಿ ದೇವೇಗೌಡ

ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.

ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಹೆಚ್​ಡಿ ಕುಮಾರಸ್ವಾಮಿ ಎಂದ ಮಾಜಿ ಪ್ರಧಾನಿ ದೇವೇಗೌಡ
ಹೆಚ್​ಡಿ ಕುಮಾರಸ್ವಾಮಿ, ಹೆಚ್.ಡಿ ದೇವೇಗೌಡ
ಗಂಗಾಧರ​ ಬ. ಸಾಬೋಜಿ
|

Updated on:Apr 30, 2023 | 8:58 PM

Share

ರಾಮನಗರ: ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ (Hd Kumaraswamy) ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು. ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಮಾತನಾಡಿದ ಅವರು, ಹೆಚ್​.ಡಿ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡ್ತಿದ್ದಾರೆ, ಚನ್ನಪಟ್ಟಣಕ್ಕೆ ಬರಲು ಆಗಿಲ್ಲ. ಹೆಚ್​ಡಿಕೆ ಪರವಾಗಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಮೇ 10ರಂದು ಕುಮಾರಸ್ವಾಮಿ ಗೆಲ್ಲಿಸಿ, ಮೇ 13ಕ್ಕೆ ಸಿಎಂ ಆಗುತ್ತಾರೆ. ಹಾಗಾಗಿ ಎಲ್ಲರೂ ಹೆಚ್​.ಡಿ.ಕುಮಾರಸ್ವಾಮಿ ಪರ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಹಿಂದೆ ಎಂದೂ‌ ಇಷ್ಟು ಜನವನ್ನು ಈ ಕ್ಷೇತ್ರದಲ್ಲಿ ನೋಡಿಲ್ಲ

ಊರಿ ಬಿಸಿಲಲ್ಲೂ ಜನಸ್ಸಾಗರವಿದೆ. ನಾನೇ ಹಿಂದೆ ಇಷ್ಟು ಉರಿಬಿಸಿಲಿನಲ್ಲಿ ಇಷ್ಟು ಜನ ನೋಡಿರಲಿಲ್ಲ. ಮುಂದೆನೂ ಈ ರೀತಿಯ‌ ಸಭೆ ನೋಡಲು ಸಾಧ್ಯವಿಲ್ಲ. ನಿಮ್ಮ ಮುಂದೆ ಕೈಜೋಡಿಸಿ ಮನವಿ ಮಾಡುತ್ತೇನೆ. ಕುಮಾರಸ್ವಾಮಿ ಮೇ 13 ಕ್ಕೆ ಸಿಎಂ ಆಗುತ್ತಾರೆ. ಅಂದು ರಾಜಗೋಪಾಲ್ ರೆಡ್ಡಿ ಶಾಸಕರಾಗಬೇಕು. ಯಾವ ಜಾತಿಗೂ ದ್ರೋಹ ಮಾಡಿಲ್ಲ. ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದೇವೆ. ಎಲ್ಲೂ ನಿಂತೂ ಮಾತಾಡಿಲ್ಲ. ಇಂದು ಮನಸ್ಸಿನ ಮೇಲೆ ಪ್ರೇರಣೆ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: Doddaballapura: ಮೂರು ಬಾರಿ ಸೋತು, ನಾಲ್ಕನೇ ಭಾರಿ ಅಗ್ನಿ ಪರೀಕ್ಷೆಗಿಳಿದ ಜೆಡಿಎಸ್​ ಅಭ್ಯರ್ಥಿ; ಈ ಬಾರಿಯಾದರೂ ಗೆಲ್ಲಿಸಿ ಎಂದು ಪತ್ನಿಯಿಂದ ಕಣ್ಣೀರ ಪಾಲಿಟಿಕ್ಸ್

ಒಂದೆಡೆ ಚನ್ನಪಟ್ಟಣದಲ್ಲಿ ಪುತ್ರನ ಪರ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಪ್ರಚಾರ ಮಾಡಿದರೆ, ಮತ್ತೊಂದೆಡೆ ರಾಮನಗರ ಜೆಡಿಎಸ್ ಅಭ್ಯರ್ಥಿ, ಪುತ್ರ ನಿಖಿಲ್​ ಪರ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಮತಯಾಚನೆ ಮಾಡಿದರು. ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ,‌ ಮರಳವಾಡಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಮೂಲಕ ಪ್ರಚಾರ ಮಾಡಲಾಯಿತು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ವಿಜಯಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: ತಲೆಕೆಳಗಾದ ಬಿಜೆಪಿ ಅಭ್ಯರ್ಥಿ ಯತ್ನಾಳ್​ ಲೆಕ್ಕಾಚಾರ

ನಿನ್ನೆ(ಏ.29) ಜೆಡಿಎಸ್ ಅಭ್ಯರ್ಥಿ ಪರ ಮತ ಕೇಳಲು ಬಂದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮಕ್ಕೆ ಆಗಮಿಸಿದ್ರು. ಈ ವೇಳೆ ದೇವೇಗೌಡರ ಮುಂದೆಯೂ ಕಣ್ನೀರಾಕುತ್ತಲೆ ಪತಿಯ ಪರ ಮತಯಾಚನೆ ಮಾಡಿದ್ರು. ದೇವೇಗೌಡರು ಕೂತಿದ್ದ ವೇದಿಕೆ ಮೇಲೆಯೆ ಮಾತನಾಡುತ್ತಾ ಸೆರಗೊಡ್ಡಿ ಮತಯಾಚಿಸಿದ ಪದ್ಮಾವತಿ. ಈ ಭಾರಿ ದೇವೇಗೌಡರು ಸಹ ನಮ್ಮ ಪರ ಮತಯಾಚನೆಗೆ ಬಂದಿದ್ದು, ಕೈಕೊಡಬೇಡಿ ನಮ್ಮನ್ನ ಗೆಲ್ಲಿಸಿ ಎಂದು ಅಂಗಲಾಚಿದ್ರು. ಇನ್ನು ಇದೇ ವೇಳೆ ಮೂರು ಬಾರಿ ಮುನೇಗೌಡ ಸೋತಿದ್ದು, ಈ ಭಾರಿಯಾದ್ರು ಗೆಲ್ಲಿಸಿ ಎಂದು ಅಭ್ಯರ್ಥಿ ಪರ ದೇವೇಗೌಡರು ಸಹ ಕ್ಯಾಂಪೇನ್ ನಡೆಸಿದ್ರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವುದು ತಪ್ಪಿಲ್ಲ ಎಂದ ಹೆಚ್​​ಡಿಕೆ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಹೆಚ್​ಡಿ ಕುಮಾರಸ್ವಾಮಿ ಧ್ವನಿಗೂಡಿಸಿದ್ದಾರೆ. JDS, ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಆಗುತ್ತೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವುದು ತಪ್ಪಿಲ್ಲ. ಬಿಜೆಪಿಯಲ್ಲಿ ಇಡಿ ಮೋರ್ಚಾ ಹಾಗೂ ಐಟಿ ಮೋರ್ಚಾ ಇದೆ ಎಂದು ಆದಿಚುಂಚನಗಿರಿ ಮಠದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:58 pm, Sun, 30 April 23