Mudhol Election Result: ಮುಧೋಳ ವಿಧಾನಸಭಾ ಎಲೆಕ್ಷನ್ 2023 ರಿಸಲ್ಟ್: ಕಾರಜೋಳ ಗೆಲುವಿಗೆ ಬ್ರೇಕ್ ಬೀಳುತ್ತಾ?
Mudhol Assembly Election Result 2023 Live Counting Updates: ಈ ಬಾರಿಯೂ ಸಹ ಬಿಜೆಪಿಯಿಂದ ಗೋವಿಂದ್ ಕಾರಜೋಳ ಕಣದಲ್ಲಿದ್ದು, ಕಾಂಗ್ರೆಸ್ನಿಂದ ಆರ್.ಬಿ.ತಿಮ್ಮಾಪುರ ಸ್ಪರ್ಧಿಸಿದ್ದರೆ, ಜೆಡಿಎಸ್ನಿಂದ ಸುರೇಶ್ ಅರ್ಜುನ್ ಮಡಿವಾಳರ್ ಅಖಾಡದಲ್ಲಿದ್ದಾರೆ. ಇನ್ನು ಈ ಬಾರಿಯಾದರೂ ಕಾರಜೋಳ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್ ಬ್ರೇಕ್ ಹಾಕುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.

Mudhol Assembly Election Result 2023: ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರ ಮುಧೋಳ. ಘಟಪ್ರಭಾ ನದಿ ತೀರದಲ್ಲಿರುವ ಈ ‘ಮುಧೋಳ’ ಎಂದಾಕ್ಷಣ ನಮಗೆ ಥಟ್ ಅಂತ ನೆನಪಿಗೆ ಬರುವುದೇ ಇಲ್ಲಿನ ನಾಯಿ ತಳಿ. ಹಾಗೂ ಕವಿ ಚಕ್ರವರ್ತಿ ರನ್ನ ಜನಿಸಿದ ನಾಡು ಮುಧೋಳ. ಈ ಮುಧೋಳ ನಾಯಿಯ ತಳಿಗೂ ಕ್ಷೇತ್ರ ಪ್ರಸಿದ್ಧಿ ಪಡೆದಿದ್ದು, ಭಾರತೀಯ ಸೇನೆಯಲ್ಲಿಯೂ ನಾಯಿಗಳು ಸೇವೆ ಸಲ್ಲಿಸುತ್ತಿವೆ.
ರಾಜಕೀಯವಾಗಿ 1952ರಿಂದ 15 ಸಾರ್ವತ್ರಿಕ ವಿಧಾನಸಭಾ ಚುನಾವಣೆ ಎದುರಿಸಿರುವ ಮುಧೋಳ ಕ್ಷೇತ್ರದಲ್ಲಿ ಎಂಟು ಬಾರಿ ಕಾಂಗ್ರೆಸ್, ನಾಲ್ಕು ಬಾರಿ ಬಿಜೆಪಿ ಗೆಲುವು ಕಂಡಿದೆ. ಸ್ವತಂತ್ರ ಪಾರ್ಟಿ, ಜನತಾ ಪಕ್ಷ ಹಾಗೂ ಜೆಡಿಎಸ್ ತಲಾ ಒಂದು ಅವಧಿಗೆ ಈ ಕ್ಷೇತ್ರದಲ್ಲಿ ಗೆಲವು ಸಾಧಿಸಿವೆ. 1978ರ ಚುನಾವಣೆ ಹೊತ್ತಿಗೆ ಮುಧೋಳ ವಿಧಾನಸಭಾ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಬಾಗಲಕೋಟೆ ಜಿಲ್ಲೆಯಲ್ಲಿ ಒಂದೇ ಒಂದು ಎಸ್.ಟಿ.ಮೀಸಲಾತಿ ಹೊಂದಿರುವ ಕ್ಷೇತ್ರವಿದು. 2008ರಿಂದ 2018ರ ಅವಧಿಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಎದುರಾಳಿಗಳು ಬದಲಾದರೂ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತ್ರ ಗೆಲವು ಕಾಣುತ್ತ ಬಂದಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಪಕ್ಷದ ಆರ್.ಬಿ.ತಿಮ್ಮಾಪುರ ಸತತ ಮೂರು ಬಾರಿ ಸೋಲು ಕಂಡಿದ್ದಾರೆ.
ಜಾತಿ ಲೆಕ್ಕಾಚಾರ
ಗೋವಿಂದ ಕಾರಜೋಳ ಮತ್ತು ಆರ್ ಬಿ ತಿಮ್ಮಾಪುರ ಇಬ್ಬರೂ ಮಾದಿಗ ಸಮುದಾಯಕ್ಕೆ ಸೇರಿದವರು. ಮಾದಿಗ ಮತಗಳೇ ನಿರ್ಣಾಯಕವಾಗಿರುವ ಮುಧೋಳ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ನಾಯಕರೇ ಹೆಚ್ಚಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿಎಸ್‌ಸಿ, ಎಸ್‌ಟಿ ಮತಗಳು ಅಧಿಕವಾಗಿದ್ದು, ಸಹಜವಾಗಿ ಮತ ಗಳಿಕೆಗೆ ಪೈಪೋಟಿ ನಡೆಯುತ್ತದೆ. ಲಿಂಗಾಯತ ಹಾಗೂ ರಡ್ಡಿ ಮತಗಳೂ ಸಾಕಷ್ಟುಸಂಖ್ಯೆಯಲ್ಲಿದ್ದು, ಈ ಸಮುದಾಯಗಳು ಯಾರನ್ನು ಬೆಂಬಲಿಸುತ್ತವೆ ಎಂಬುದರ ಮೇಲೆ ಅಭ್ಯರ್ಥಿಯ ಗೆಲುವು ಇಲ್ಲಿ ನಿರ್ಧಾರವಾಗಲಿದೆ. ಕುರುಬ, ಮುಸ್ಲಿಂ ಮತಗಳು ನಂತರದ ಸ್ಥಾನಗಳಲ್ಲಿವೆ.
ಈ ಬಾರಿಯೂ ಸಹ ಬಿಜೆಪಿಯಿಂದ ಗೋವಿಂದ್ ಕಾರಜೋಳ ಕಣದಲ್ಲಿದ್ದು, ಕಾಂಗ್ರೆಸ್ನಿಂದ ಆರ್.ಬಿ.ತಿಮ್ಮಾಪುರ ಸ್ಪರ್ಧಿಸಿದ್ದರೆ, ಜೆಡಿಎಸ್ನಿಂದ ಸುರೇಶ್ ಅರ್ಜುನ್ ಮಡಿವಾಳರ್ ಅಖಾಡದಲ್ಲಿದ್ದಾರೆ. ಇನ್ನು ಈ ಬಾರಿಯಾದರೂ ಕಾರಜೋಳ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್ ಬ್ರೇಕ್ ಹಾಕುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.




