AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nippani Election 2023 Winner: ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ವಿಜಯಭೇರಿ

Shashikala Annasaheb Jolle: 1999ರಿಂದ ಗೆದ್ದು ಬೀಗುತ್ತಿದ್ದ ಕಾಂಗ್ರೆಸ್‌ನ ಕಾಕಾಸಾಹೇಬ ಪಾಂಡುರಂಗ ಪಾಟೀಲ 2008ರ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದರು. 2013ರಲ್ಲಿ ಬಿಜೆಪಿಯಿಂದ ಸ್ಪರ್ದಿಸಿದ್ದ ಶಶಿಕಲಾ ಜೊಲ್ಲೆ ಗೆಲುವಿನ ಮೂಲಕ ಬಿಜೆಪಿ ಇಲ್ಲಿ ಖಾತೆ ತೆರೆಯಿತು. 2013ರಲ್ಲಿಯೂ ಗೆಲುವು ಬಿಜೆಪಿ ಪಾಲಾಯಿತು

Nippani Election 2023 Winner: ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ವಿಜಯಭೇರಿ
ಶಶಿಕಲಾ ಜೊಲ್ಲೆ
ರಶ್ಮಿ ಕಲ್ಲಕಟ್ಟ
|

Updated on: May 13, 2023 | 3:23 PM

Share

ನಿಪ್ಪಾಣಿ ವಿಧಾನಸಭಾ (Nippani Assembly Constituency  ) ಕ್ಷೇತ್ರದಲ್ಲಿ ಮೂರನೇ ಬಾರಿ ಬಿಜೆಪಿಯ ಶಶಿಕಲಾ ಜೊಲ್ಲೆ (Shashikala Annasaheb Jolle) ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಚುನಾವಣಾ ಕಣದಲ್ಲಿ ಕಾಕಾ ಸಾಹೇಬ್ ಪಟೇಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು, ರಾಜು ಮಾರುತಿ ಪವಾರ್ ಜೆಡಿಎಸ್, ರಾಜೇಶ ಅಣ್ಣಾಸಾಹೇಬ ಬಸವಣ್ಣ (ಎಎಪಿ) ಇದ್ದರು. ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಈ ಕ್ಷೇತ್ರದಲ್ಲಿಯೂ ಮರಾಠಿ ಮಾತನಾಡುವವರ ಸಂಖ್ಯೆ ಹೆಚ್ಚು ಇದೆ. ನಿಪ್ಪಾಣಿ ಕ್ಷೇತ್ರದಲ್ಲಿ ಮರಾಠಿಗರ ಜೊತೆಗೆ ಲಿಂಗಾಯತ ಮತದಾರರೇ ನಿರ್ಣಾಯಕ. ಈ ಕ್ಷೇತ್ರದಲ್ಲಿ 1962ರಲ್ಲಿ ಮಾತ್ರ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಅಭ್ಯರ್ಥಿ ಗೆದ್ದಿದ್ದರು.

ಅಲ್ಯೂಮಿನಿಯಂ, ಮಡಕೆ ಕಾರ್ಖಾನೆ, ಬೀಡಿ ಕಾರ್ಖಾನೆಗಳು, ಜವಳಿ ವ್ಯಾಪಾರ, ಮರದ ವ್ಯವಹಾರಗಳಿಗೆ ಹೆಸರು ವಾಸಿಯಾದ ತಾಲೂಕು ನಿಪ್ಪಾಣಿ. 2018ರಲ್ಲಿ ಹೊಸ ತಾಲೂಕಾಗಿ ರಚನೆಯಾದ ನಿಪ್ಪಾಣಿ, 1957ರಿಂದ ವಿಧಾನಸಭಾ ಕ್ಷೇತ್ರವಾಯಿತು.

1999ರಿಂದ ಗೆದ್ದು ಬೀಗುತ್ತಿದ್ದ ಕಾಂಗ್ರೆಸ್‌ನ ಕಾಕಾಸಾಹೇಬ ಪಾಂಡುರಂಗ ಪಾಟೀಲ 2008ರ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದರು. 2013ರಲ್ಲಿ ಬಿಜೆಪಿಯಿಂದ ಸ್ಪರ್ದಿಸಿದ್ದ ಶಶಿಕಲಾ ಜೊಲ್ಲೆ ಗೆಲುವಿನ ಮೂಲಕ ಬಿಜೆಪಿ ಇಲ್ಲಿ ಖಾತೆ ತೆರೆಯಿತು. 2013ರಲ್ಲಿಯೂ ಗೆಲುವು ಬಿಜೆಪಿ ಪಾಲಾಯಿತು, ಪ್ರಸ್ತುತ ಸಚಿವೆ ಶಶಿಕಲಾ ಜೊಲ್ಲೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯನ್ನು ಭೇದಿಸಿ ಶಶಿಕಲಾ ಜೊಲ್ಲೆ ನಿರಂತರ ಎರಡು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ಸಚಿವೆಯಾಗಿದ್ದರು. ಈಗ ಮೂರನೇ ಬಾರಿ ಗೆದ್ದು Hatrick ಗೆಲುವು ಸಾಧಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

2018ರ ಚುನಾವಣೆಯಲ್ಲಿಯೂ ಬಿಜೆಪಿಯ ಶಶಿಕಲಾ ಜೊಲ್ಲೆ ಎರಡನೇ ಬಾರಿಗೆ ಗೆಲುವು ಸಾಧಿಸಿದರು. ಅವರು 87,006 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಕಾಕಾಸಾಹೇಬ್ ಪಾಂಡುರಂಗ ಪಾಟೀಲ್‌ 78,500 ಮತಗಳನ್ನು ಪಡೆದು ಪರಾಭವಗೊಂಡರು. ಈ ಚುನಾವಣೆಯಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿಲ್ಲ.

ಚುನಾವಣೆ ಫಲಿತಾಂಶ ಲೈವ್​ ಅಪ್ಡೇಟ್​ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ