ಉತ್ತರ ಕನ್ನಡ ಲೋಕಸಭಾ ಚುನಾವಣೆ 2024 ಫಲಿತಾಂಶ: ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು

Uttara Kannada Lok Sabha Election Results 2024: 2024ರ ಲೋಕಸಭಾ ಚುನಾವಣಾ (Lok Sabha Election) ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಕಟವಾಗಲಿದೆ. ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಗೆಲುವಾಗಿದೆ. ಕಾಂಗ್ರೆಸ್​ನ ಅಂಜಲಿ ನಿಂಬಾಳ್ಕರ್​ ಅವರಿಗೆ ಸೋಲಾಗಿದೆ.

ಉತ್ತರ ಕನ್ನಡ ಲೋಕಸಭಾ ಚುನಾವಣೆ 2024 ಫಲಿತಾಂಶ: ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು
ವಿಶ್ವೇಶ್ವರ ಹೆಗಡೆ ಕಾಗೇರಿ-ಅಂಜಲಿ ನಿಂಬಾಳ್ಕರ್
Follow us
| Updated By: ವಿವೇಕ ಬಿರಾದಾರ

Updated on:Jun 04, 2024 | 4:29 PM

ಉತ್ತರ ಕನ್ನಡ ಅಥವಾ ಕೆನರಾ ಲೋಕಸಭೆ ಕ್ಷೇತ್ರದಲ್ಲಿ (Uttara Kannada Lok Sabha) ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಗೆಲುವಾಗಿದೆ. ಕಾಂಗ್ರೆಸ್​ನ ಅಂಜಲಿ ನಿಂಬಾಳ್ಕರ್​ ಅವರಿಗೆ ಸೋಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಫೈರ್‌ ಬ್ರಾಂಡ್‌ ಖ್ಯಾತಿಯ ಅನಂತ್‌ ಕುಮಾರ್‌ ಹೆಗಡೆ ಕಾರಣದಿಂದ ಸದ್ದು ಮಾಡಿದರೆ, ಆರಂಭಿಕ ದಿನಗಳಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ ಎಂದು ಎನಿಸಿಕೊಂಡಿತ್ತು. 1996ರವರೆಗೆ ಒಮ್ಮೆ ಮಾತ್ರ ಕಾಂಗ್ರೆಸ್ಸೇತರ ಸಂಸದರನ್ನು ಉತ್ತರ ಕನ್ನಡ ಮತದಾರರು ನೀಡಿದ್ದರು.

ಆಗಲೂ ಕೂಡ ಹಿರಿಯ ಸಾಹಿತಿ ದಿನಕರ ದೇಸಾಯಿ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದೆಲ್ಲದರ ಮಧ್ಯೆ ಸಾಹಿತ್ಯ ಹಾಗೂ ಸಿನೆಮಾ ರಂಗದಲ್ಲಿ ಕನ್ನಡಿಗರ ಧ್ವನಿ ಎನಿಸಿಕೊಂಡಿರುವ ಶಿವರಾಮ್‌ ಕಾರಂತ್‌, ಅನಂತ್‌ನಾಗ್‌ ಕೂಡ ಒಮ್ಮೆ ಇಲ್ಲಿಂದ ಸ್ಪರ್ಧಿಸಿ ಸೋತಿದ್ದರು. ದೇಸಾಯಿ ಅವರನ್ನು ಗೆಲ್ಲಿಸಿದ್ದ ಇದೇ ಮತದಾರರು, ಕಾರಂತಜ್ಜರಿಗೆ ಮಣೆ ಹಾಕಿರಲಿಲ್ಲ.

ಮತ್ತಷ್ಟು ಓದಿ: Karnataka Lok Sabha Election 2024:ರಾಜ್ಯದಲ್ಲಿ ಜೂ.4ರಂದು ಅಭ್ಯರ್ಥಿಗಳ ಭವಿಷ್ಯ ನಿಧಾರ

1996ರವರೆಗೆ ಕೇವಲ ಒಮ್ಮೆ ಸೋತಿದ್ದ ಕಾಂಗ್ರೆಸ್‌, ಆ ಬಳಿಕ ಗೆದ್ದಿದ್ದು ಕೂಡ ಒಮ್ಮೆ ಮಾತ್ರ. 1999ರಲ್ಲಿ ಮಾರ್ಗರೇಟ್‌ ಆಳ್ವಾ ಗೆದ್ದಿದ್ದು ಬಿಟ್ಟರೆ ಪ್ರತಿ ಚುನಾವಣೆಯಲ್ಲೂ ಅನಂತ್‌ಕುಮಾರ್‌ ಹೆಗಡೆ ಗೆಲುವು ಸಾಧಿಸಿದ್ದಾರೆ. ದಾಖಲೆಯ ಆರು ಬಾರಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅಂದ್ಹಾಗೆ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಇಲ್ಲಿ ಗೆದ್ದವರು ಹೆಗಡೆ ಮಾತ್ರ.

ವಿಶ್ವೇಶ್ವರ ಹೆಗಡೆ ಕಾಗೇರಿ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ 1994-99, 1999-04 ಹಾಗೂ 2004-2008 ಹಾಗೂ ಶಿರಸಿ ಕ್ಷೇತ್ರದಲ್ಲಿ 2008, 2013 ಹಾಗೂ 2018ರಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಎರಡು ಬಾರಿಯ ಫಲಿತಾಂಶವನ್ನು ಅವಲೋಕಿಸಿದಾಗ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಬದಲಿಸಿದೆಯೇ ಹೊರತು ಫಲಿತಾಂಶದಲ್ಲಿ ಬದಲಾವಣೆಯಾಗಿಲ್ಲ. ಕಾಂಗ್ರೆಸ್‌ ಹಿರಿಯ ಮುಖಂಡ ಆರ್‌.ವಿ ದೇಶಪಾಂಡೆ ಪುತ್ರ ಪ್ರಶಾಂತ್‌ ಅವರು 2014ರಲ್ಲಿ ಹೆಗಡೆ ವಿರುದ್ಧ ಸ್ಪರ್ಧಿಸಿ 1.40 ಲಕ್ಷ ಮತಗಳಿಂದ ಸೋತಿದ್ದರು. 2019ರಲ್ಲಿ ದಾಖಲೆಯ 4.80 ಲಕ್ಷ ಮತಗಳಿಂದ ಅನಂತ್‌ಕುಮಾರ್‌ ಹೆಗಡೆ ವಿಜಯ ಸಾಧಿಸಿದ್ದರು. ಈ ಮೂಲಕ ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣವು ಶೇ.68.15ರಷ್ಟಿತ್ತು.

ಆದರೆ ಈ ಬಾರಿ ಉತ್ತರ ಕನ್ನಡವು ಹೊಸ ರಾಜಕೀಯ ಹೋರಾಟಕ್ಕೆ ಸಾಕ್ಷಿಯಾಗಿದೆ. ಮೊದಲ ಬಾರಿಗೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಬರುವ ಕಿತ್ತೂರು-ಖಾನಾಪುರ ಭಾಗದವರಾದ ಅಂಜಲಿ ನಿಂಬಾಳ್ಕರ್‌ಗೆ ಕಾಂಗ್ರೆಸ್‌ ಮಣೆ ಹಾಕಿದೆ. ಇತ್ತ ಬಿಜೆಪಿಯು ಹಾಲಿ ಹಾಗೂ ಆರು ಬಾರು ಸಂಸದರಾಗಿದ್ದ ಅನಂತ್‌ಕುಮಾರ್‌ ಹೆಗಡೆಗೆ ಕೊಕ್‌ ನೀಡಿ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಕಣಕ್ಕಿಳಿಸಿದೆ.

ಅಂದ್ಹಾಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 13 ತಾಲೂಕುಗಳನ್ನೊಳಗೊಂಡ ಶಿರಸಿ, ಯಲ್ಲಾಪುರ, ಕಾರವಾರ, ಕುಮಟಾ, ಭಟ್ಕಳ, ಹಳಿಯಾಳ, ಕಿತ್ತೂರು, ಖಾನಾಪುರ ವಿಧಾನಭೆ ಕ್ಷೇತ್ರಗಳು ಬರುತ್ತವೆ. ಒಟ್ಟು 15,48,891 ಮತದಾರರಿದ್ದು, ಶೇ.76.53ರಷ್ಟು ಮತದಾನವಾಗಿದೆ.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:50 am, Tue, 4 June 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್