ರಾತ್ರೋರಾತ್ರಿ ಅಂಬಾನಿ, ಅಡಾನಿ ಬಯ್ಯೋದು ನಿಲ್ಲಿಸಿದ್ರಿ; ಎಷ್ಟು ಕಪ್ಪುಹಣ ತಗೊಂಡ್ರಿ?: ರಾಹುಲ್ ಗಾಂಧಿಗೆ ಮೋದಿ ಪ್ರಶ್ನೆ

PM Narendra Modi at Telangana: ಕಳೆದ ಐದು ವರ್ಷದಿಂದ ರಾಹುಲ್ ಗಾಂಧಿ ಅವರದ್ದು ಐವರು ಉದ್ಯಮಿಗಳು ಎಂದು ಜಪ ಮಾಡುತ್ತಿದ್ದರು. ಬಳಿಕ ಅಂಬಾನಿ ಅಡಾನಿ ಅಂತ ಹೇಳೋಕೆ ಶುರು ಮಾಡಿದ್ರು. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅಂಬಾನಿ ಅಡಾಣಿಯನ್ನು ಬಯ್ಯೋದನ್ನು ನಿಲ್ಲಿಸಿಬಿಟ್ರಲ್ಲ ಯಾಕೆ? ಅವರಿಂದ ಟೆಂಪೋ ತುಂಬ ಕಪ್ಪು ಹಣ ಪಡೆದುಕೊಂಡಿದ್ದಾರಾ? ಎಂದು ರಾಹುಲ್ ಗಾಂಧಿ ಅವರನ್ನು ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಭಾಷಣದ ವೇಳೆ ರಾಹುಲ್ ಗಾಂಧಿ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾತ್ರೋರಾತ್ರಿ ಅಂಬಾನಿ, ಅಡಾನಿ ಬಯ್ಯೋದು ನಿಲ್ಲಿಸಿದ್ರಿ; ಎಷ್ಟು ಕಪ್ಪುಹಣ ತಗೊಂಡ್ರಿ?: ರಾಹುಲ್ ಗಾಂಧಿಗೆ ಮೋದಿ ಪ್ರಶ್ನೆ
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 08, 2024 | 12:23 PM

ಹೈದರಾಬಾದ್, ಮೇ 8: ಐದು ವರ್ಷದಿಂದ ಅಂಬಾನಿ ಮತ್ತು ಅಡಾನಿಯನ್ನು ಬಯ್ಯುತ್ತಲೇ ಬಂದಿದ್ದ ಕಾಂಗ್ರೆಸ್ ಶಹಜಾದೆ (ರಾಹುಲ್ ಗಾಂಧಿ) ರಾತ್ರೋರಾತ್ರಿ ಬಯ್ಯೋದನ್ನೇ ನಿಲ್ಲಿಸಿದ್ದಾರೆ. ಅವರಿಂದ ಎಷ್ಟು ಕಪ್ಪು ಹಣ ಇವರಿಗೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಶ್ನೆ ಮಾಡಿದ್ದಾರೆ. ತೆಲಂಗಾಣದ ರಾಜನ್ನ ಸಿರಿಸಿಲ್ಲ (Rajanna Circilla) ಜಿಲ್ಲೆಯ ವೇಮುಲವಾಡ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅಂಬಾನಿ, ಅಡಾನಿ ಜಪ ಮಾಡುವುದನ್ನು ರಾಹುಲ್ ಗಾಂಧಿ ನಿಲ್ಲಿಸಿದ್ದು ಯಾಕೆ ಎಂದು ಕೇಳಿದ್ದಾರೆ. ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಬಳುಸತ್ತಿದ್ದಿ ಅಂಬಾನಿ, ಅದಾನಿ ಅಸ್ತ್ರವನ್ನು ಅವರಿಗೇ ತಿರುಗಿಸಿದ್ದಾರೆ ನರೇಂದ್ರ ಮೋದಿ.

“ಕಾಂಗ್ರೆಸ್​ನ ಶಹಜಾದೆ ಕಳೆದ 5 ವರ್ಷದಿಂದ ಬೆಳಗ್ಗೆಯಾದರೆ ಜಪ ಮಾಡುತ್ತಿದ್ದ ರಫೇಲ್ ವಿಚಾರ ಬಿದ್ದುಹೋಯಿತು…. ಐವರು ಉದ್ಯಮಿಗಳು, ಐವರು ಉದ್ಯಮಿಗಳು, ಐವರು ಉದ್ಯಮಿಗಳು ಎಂದು ಐದು ವರ್ಷದಿಂದ ಒಂದೇ ಜಪ ಮಾಡುತ್ತಿದ್ದರು. ಬಳಿಕ ಅಂಬಾನಿ ಅಡಾನಿ, ಅಂಬಾನಿ ಅಡಾಣಿ, ಅಂಬಾನಿ ಅಡಾಣಿ ಅಂತ ಹೇಳೋಕೆ ಶುರು ಮಾಡಿದ್ರು…

“ಚುನಾವಣೆ ಘೋಷಣೆ ಆದ ಬಳಿಕ ಅಂಬಾನಿ ಅಡಾಣಿ ಅವರನ್ನು ಬಯ್ಯೋದು ನಿಲ್ಲಿಸಿ ಬಿಟ್ರು. ತೆಲಂಗಾಣದ ಈ ನೆಲದಿಂದ ಒಂದು ಪ್ರಶ್ನೆ ಕೇಳುತ್ತೇನೆ. ಅಂಬಾನಿ, ಅಡಾಣಿಯಿಂದ ನೀವು ಎಷ್ಟು ಹಣ ಪಡೆದಿದ್ದೀರಿ ಹೇಳಿ? ರಾತ್ರೋರಾತ್ರಿ ಇವರು ಅಂಬಾನಿ ಅಡಾಣಿ ಬಯ್ಯೋದನ್ನು ನಿಲ್ಲಿಸಿದ್ದಾರೆಂದರೆ ಏನೋ ಇರಬೇಕು. ಯಾವುದೋ ಕಳ್ಳ ಮಾಲು ಟೆಂಪೋದೊಳಗೆ ತುಂಬಿ ಬಂದಿರಬೇಕು” ಎಂದು ನರೇಂದ್ರ ಮೋದಿ ಶಂಕಿಸಿದ್ದಾರೆ.

ಇದನ್ನೂ ಓದಿ: ಮೇಲ್ವರ್ಗದವರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಿಂದ ದಲಿತ ಮಕ್ಕಳು ಪರೀಕ್ಷೆಗಳಲ್ಲಿ ಫೇಲ್ ಆಗ್ತಿದ್ದಾರೆ​: ರಾಹುಲ್​ ವಿವಾದ

ಪ್ರಧಾನಿ ಮೋದಿ ಅವರು ರಾಜನ್ನ ಸಿರಿಸಿಲ್ಲ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ವೇಮುಲವಾಡದ ರಾಜನ್ನ ದೇವಸ್ಥಾನದಲ್ಲಿ ನಂದಿಯ ದರ್ಶನ ಮಾಡಿದರು. ಹೈದರಾಬಾದ್​ನಿಂದ ಇಲ್ಲಿಗೆ ಬಂದ ಮೋದಿ, ಬಳಿಕ ರಾಜಂಪೇಟಾಗೆ ತೆರಳಲಿದ್ದಾರೆ.

ಬಳಿಕ ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆ ಮತ್ತು ವಿಜಯವಾಡ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಂದು ಬುಧವಾರ ತೆಲಂಗಾಣದಲ್ಲಿ ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ಸಭೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ