AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Assembly polls| ಸಿತಾಲಕುಚ್ಚಿಯಲ್ಲಿ ಚುನಾವಣಾ ಹಿಂಸೆ ಮತ್ತು ನಾಲ್ವರ ಸಾವಿಗೆ ಗೃಹಮಂತ್ರಿ ಅಮಿತ್ ಶಾ ಕಾರಣ: ಮಮತಾ ಬ್ಯಾನರ್ಜಿ

ಸಿತಾಲಕುಚ್ಚಿಯಲ್ಲಿನ ಮತಗಟ್ಟೆಯೊಂದರ ಹೊರಭಾಗದಲ್ಲಿ ಗುಂಪೊಂದು ಭದ್ರತಾ ದಳದ ಸಿಬ್ಬಂದಿಯೊಂದಿಗೆ ಕಲಹ ಆರಂಭಿಸಿದ ನಂತರ ಸಿಬ್ಬಂದಿಯು ನಾಲ್ವರನ್ನು ಗುಂಡಿಟ್ಟು ಸಾಯಿಸಿತು. ಪಶ್ಚಿಮ ಬಂಗಾಳ ವಿಧಾನಸಭೆಯ 44 ಕ್ಷೇತ್ರಗಳಿಗೆ ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದಾಗ ಹಿಂಸೆ ತಲೆದೋರಿತು.

West Bengal Assembly polls| ಸಿತಾಲಕುಚ್ಚಿಯಲ್ಲಿ ಚುನಾವಣಾ ಹಿಂಸೆ ಮತ್ತು ನಾಲ್ವರ ಸಾವಿಗೆ ಗೃಹಮಂತ್ರಿ ಅಮಿತ್ ಶಾ ಕಾರಣ: ಮಮತಾ ಬ್ಯಾನರ್ಜಿ
ನಾಲ್ವರು ಗುಂಡಿಗೆ ಬಲಿಯಾದ ಸಿತಾಲಗುಚಿ ಪ್ರದೇಶ ಇದೇ
ಅರುಣ್​ ಕುಮಾರ್​ ಬೆಳ್ಳಿ
|

Updated on: Apr 10, 2021 | 9:00 PM

Share

ಕೋಲ್ಕತಾ:  ಪಶ್ಚಿಮ ಬಂಗಾಳದ ಕೋಚ್​ ಬಿಹಾರ ಜಿಲ್ಲೆಯ ಸಿತಾಲಕುಚ್ಚಿ ಎಂಬ ಸ್ಥಳದಲ್ಲಿ ಶನಿವಾರದಂದು ರಾಜ್ಯ ವಿಧಾನಸಭೆಗೆ ನಾಲ್ಕನೆ ಹಂತದ ಮತದಾನ ನಡೆಯುತ್ತಿದ್ದಾಗ ಶುರುವಾದ ಗಲಭೆ ಮತ್ತು 4 ಜನ ಬಲಿಯಾಗಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರೇ ಕಾರಣ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಸದರಿ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ತಲೆದೋರಿದ್ದರಿಂದ ಚುನಾವಣಾ ಅಯೋಗವು ಮತದಾನವನ್ನು ಸ್ಥಗಿತಗೊಳಿಸಿದೆ.

‘ಇಂದಿನ ಘಟನೆಗೆ ಸಂಪೂರ್ಣವಾಗಿ ಗೃಹ ಸಚಿವ ಅಮಿತ್ ಶಾ ಅವರೇ ಕಾರಣ ಮತ್ತು ಖುದ್ದು ಅವರೇ ಪಿತೂರಿ ನಡೆಸಿ ಗಲಭೆ ಉಂಟಾಗುವ ಪರಿಸ್ಥಿತಿ ನಿರ್ಮಿಸಿದರು. ನಾನು ಕೇಂದ್ರದ ಭದ್ರತಾ ದಳಗಳನ್ನು ದೂಷಿಸುವುದಿಲ್ಲ ಯಾಕೆಂದರೆ ಗೃಹ ಸಚಿವರ ನೀಡುವ ಆಜ್ಞೆಯನ್ನು ಪಾಲಿಸುವುದಷ್ಟೇ ಅವರ ಕೆಲಸ. ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸುತ್ತೇವೆ,’ ಎಂದು ಹೇಳಿದ ಮಮತಾ ಬ್ಯಾನರ್ಜಿ ಅವರು, ‘ನಾಲ್ಕು ಜನರ ಸಾವು ಕೇಂದ್ರ ಭದ್ರತಾ ದಳಗಳು ನಡೆಸಿರುವ ಹತ್ಯೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರವಿವಾರದಂದು ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಲಿದ್ದರೆ, ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಘಟನೆಯ ವಿರುದ್ಧ ಕಪ್ಪು ಪಟ್ಟಿ ಧರಿಸಿ ರಾಜ್ಯದ್ಯಂತ ಪ್ರದರ್ಶನಗಳನ್ನು ನಡೆಸಲಿದ್ದಾರೆ.

ಸಿತಾಲಕುಚ್ಚಿಯಲ್ಲಿನ ಮತಗಟ್ಟೆಯೊಂದರ ಹೊರಭಾಗದಲ್ಲಿ ಗುಂಪೊಂದು ಭದ್ರತಾ ದಳದ ಸಿಬ್ಬಂದಿಯೊಂದಿಗೆ ಕಲಹ ಆರಂಭಿಸಿದ ನಂತರ ಸಿಬ್ಬಂದಿಯು ನಾಲ್ವರನ್ನು ಗುಂಡಿಟ್ಟು ಸಾಯಿಸಿತು. ಪಶ್ಚಿಮ ಬಂಗಾಳ ವಿಧಾನಸಭೆಯ 44 ಕ್ಷೇತ್ರಗಳಿಗೆ ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದಾಗ ಹಿಂಸೆ ತಲೆದೋರಿತು. ಇದು ಆಡಳಿತಾರೂಢ ಟಿ ಎಮ್​ ಸಿ ಮತ್ತು ಈ ಬಾರಿಯ ಚುನಾವಣೆಯಲ್ಲಿ ಅದಕ್ಕೆ ತೀವ್ರ ಸ್ವರೂಪದ ಪೈಪೋಟಿ ನೀಡುತ್ತಿರುವ ಬಿಜೆಪಿ ಪಕ್ಷದ ನಾಯಕರು ಪರಸ್ಪರರ ವಿರುದ್ಧ ದೋಷಾರೋಪಣೆಗಳನ್ನು ಮಾಡಲು ಆಸ್ಪದ ನೀಡಿದೆ.

ರಾಜಧಾನಿ ಕೊಲ್ಕತ್ತಾದಿಂದ 680 ಕಿಲೋ ಮೀಟರ್ ದೂರದಲ್ಲಿರುವ ಸಿತಾಲಕುಚ್ಚಿಯಲ್ಲಿ ಹಿಂಸೆ ತಲೆದೋರಿದ ನಂತರ ಚುನಾವಣಾ ಆಯೋಗವು ಮತದಾನವನ್ನು ಸ್ಥಗಿತಗೊಳಿಸಿ ಘಟನೆಯ ಬಗ್ಗೆ ಕೂಚ್​ ಬಿಹಾರ್ ಜಿಲ್ಲಾಡಳಿತದಿಂದ ಸಂಪೂರ್ಣ ವರದಿಯನ್ನು ಕೇಳಿದೆ.

ಏತನ್ಮಧ್ಯೆ, ಬಂಗಾಳದಲ್ಲಿ ಚುನಾವಣಾ ಱಲಿಯೊಂದರಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಲಭೆಯಲ್ಲಿ ಸತ್ತವರಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಘಟನೆಯ ನಂತರ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷವನ್ನು ತರಾಟಗೆ ತೆಗೆದುಕೊಂಡಿದ್ದಾರೆ.

‘ಕೂಚ್​ ಬಿಹಾರ್​ನಲ್ಲಿ ಇಂದು ನಡೆದಿದ್ದು ಬಹಳ ದುಖಃಕರ ಮತ್ತು ವಿಷಾದನೀಯ ಸಂಗತಿ. ಘಟನೆಯಲ್ಲಿ ಮಡಿದವರ ಕುಟುಂಬಗಳಿಗೆ ನಾನು ಸಂತಾಪಗಳನ್ನು ಸೂಚಿಸಿತ್ತೇನೆ. ಮಮತಾ ದೀದಿ ಮತ್ತು ಅಕೆಯ ಗೂಂಡಾಪಡೆ ಬಂಗಾಳದಲ್ಲಿ ಬಿಜೆಪಿ ಸಿಗುತ್ತಿರುವ ಅಭೂತಪೂರ್ವ ಬೆಂಬಲದಿಂದ ಭೀತಿಗೊಳಗಾಗಿದ್ದಾರೆ,’ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು.

ಪ್ರಧಾನಿ ಅವರ ಟೀಕೆಗೆ ಪ್ರತಿಕ್ರಿಯೆ ನೋಡಿರುವ ಮಮತಾ ಅವರು, ‘ಬಂಗಾಳದಲ್ಲಿ ತಾನು ಗೆಲ್ಲುವುದಿಲ್ಲ ಎನ್ನುವುದು ಬಿಜೆಪಿ ಖಾತ್ರಿಯಾಗಿದೆ, ಹಾಗಾಗೇ, ಅದು ಬಾಂಬ್ ಮತ್ತು ಹಿಂಸೆಯ ಮೊರೆಹೊಕ್ಕಿದೆ.’ ಎಂದಿದ್ದಾರೆ.

ಇದನ್ನೂ ಓದಿ: West Bengal Election 2021: ಬಿಜೆಪಿ ಅಭ್ಯರ್ಥಿ ಪಾಯಲ್​ ಸರ್ಕಾರ್, ಬೆಂಗಾವಲು ಪಡೆ​ ಮೇಲೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರಿಂದ ದಾಳಿ

ಇದನ್ನೂ ಓದಿ: West Bengal Elections 2021: ಹೂಗ್ಲಿಯಲ್ಲಿ ಇಂದು ಮೋದಿ-ದೀದಿ ಮುಖಾಮುಖಿ !- ತಾರಕೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರಿಂದಲೂ ಚುನಾವಣಾ ರ‍್ಯಾಲಿ

Follow Us
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ