ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಕೊವಿಡ್ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ

Mamata Banerjee: ಪ್ರತಿಯೊಬ್ಬ ಭಾರತೀಯನಿಗೂ ವಯಸ್ಸು, ಜಾತಿ, ಸಿದ್ದಾಂತ, ಸ್ಥಳ ಬೇಧವಿಲ್ಲದ ಉಚಿತ ಲಸಿಕೆ ನೀಡಬೇಕಿದೆ. ಕೇಂದ್ರ ಸರ್ಕಾರ ಕೊವಿಡ್ ಲಸಿಕೆಗೆ ಏಕರೂಪದ ಬೆಲೆ ನಿಗದಿ ಮಾಡಬೇಕು. ಅದು ಇಲ್ಲದೇ ಇದ್ದರೆ ಯಾರು ಪಾವತಿಮಾಡುತ್ತಾರೆ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

  • TV9 Web Team
  • Published On - 15:58 PM, 22 Apr 2021
ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಕೊವಿಡ್ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಒಂದು ದೇಶ, ಒಂದು ಪಕ್ಷ, ಒಬ್ಬನೇ ನಾಯಕ ಎಂದು ಬಿಜೆಪಿ ಸದಾ ಹೇಳುತ್ತಲೇ ಇರುತ್ತದೆ. ಆದರೆ ಜನರ ಜೀವ ರಕ್ಷಿಸಲಿರುವ ಲಸಿಕೆಗೆ ಒಂದೇ ಬೆಲೆ ನಿಗದಿ ಮಾಡಿಲ್ಲ ಯಾಕೆ? ಪ್ರತಿಯೊಬ್ಬ ಭಾರತೀಯನಿಗೂ ವಯಸ್ಸು, ಜಾತಿ, ಸಿದ್ದಾಂತ, ಸ್ಥಳ ಬೇಧವಿಲ್ಲದ ಉಚಿತ ಲಸಿಕೆ ನೀಡಬೇಕಿದೆ. ಕೇಂದ್ರ ಸರ್ಕಾರ ಕೊವಿಡ್ ಲಸಿಕೆಗೆ ಏಕರೂಪದ ಬೆಲೆ ನಿಗದಿ ಮಾಡಬೇಕು. ಅದು ಇಲ್ಲದೇ ಇದ್ದರೆ ಯಾರು ಪಾವತಿಮಾಡುತ್ತಾರೆ? ಕೇಂದ್ರ ಸರ್ಕಾರ ಮಾಡುತ್ತದೆಯೇ? ಅಥವಾ ರಾಜ್ಯ ಸರ್ಕಾರಗಳು ಮಾಡಬೇಕೆ? ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಟ್ವೀಟ್ ಮಾಡಿದ್ದಾರೆ.

ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕಾಗಿರುವ ಲಸಿಕೆ ಕೊವಿಶೀಲ್ಡ್ ಉತ್ಪಾದನಾ ಸಂಸ್ಥೆ ಸೆರಂ ಇನ್ಸಿಟ್ಯೂಟ್ ರಾಜ್ಯ ಸರ್ಕಾರಗಳಿಗಾಗಿ 400ರೂ  ಮತ್ತು ದೇಶದಲ್ಲಿರುವ ಖಾಸಗಿ ಆಸ್ಪತ್ರೆಗಳಿಗಾಗಿ ರೂ600ಗೆ ಲಸಿಕೆ ಮಾರಾಟ ಮಾಡುವುದಾಗಿ ಹೇಳಿತ್ತು

ಕೋವಿಡ್ -19 ಲಸಿಕೆ ತಯಾರಕರಿಗೆ ತಮ್ಮ ಲಸಿಕೆಯನ್ನು ಭಾರತದ ಮುಕ್ತ ಮಾರುಕಟ್ಟೆಯಲ್ಲಿ ಪೂರ್ವ ನಿರ್ಧಾರಿತ ದರದಲ್ಲಿ ಮಾರಾಟ ಮಾಡಲು ಕೇಂದ್ರವು ಸೋಮವಾರ ಅನುಮತಿ ನೀಡಿದ ನಂತರ ಸಂಸ್ಥೆ ಈ ಘೋಷಣೆ ಮಾಡಿದೆ. ಬುಧವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಲಸಿಕೆಗಳ ಬೆಲೆಯಲ್ಲಿನ ವ್ಯತ್ಯಾಸದ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವುದಾಗಿ ಹೇಳಿದ್ದು, ಮಧ್ಯಪ್ರವೇಶಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು.


ಲಸಿಕೆಗಳನ್ನು ಕೇಂದ್ರಕ್ಕೆ ₹ 150 ಕ್ಕೆ ಮಾರಾಟ ಮಾಡಲಾಗಿದ್ದು, ಈಗ ರಾಜ್ಯಗಳಿಗೆ ₹ 400 ಕ್ಕೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹ 600 ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು. ತುರ್ತು ಸಮಯದಲ್ಲಿ ನೀವು ಜನರಿಗೆ ಸಹಾಯ ಮಾಡುತ್ತೀರಾ ಅಥವಾ ವ್ಯಾಪಾರ ಮಾಡುತ್ತೀರಾ? ಎಂದು ಮಮತಾ ಪ್ರಶ್ನಿಸಿದ್ದಾರೆ.

ಚುನಾವಣಾ ಫಲಿತಾಂಶಗಳು ಘೋಷಣೆಯಾದ ಕೂಡಲೇ ಮೇ 5 ರಂದು ನಡೆಯಲಿರುವ ಸಾರ್ವತ್ರಿಕ ಲಸಿಕೆ ವಿತರಣೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ₹ 100 ಕೋಟಿ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಈಗಾಗಲೇ ಘೋಷಿಸಿದ್ದಾರೆ.

ಖಾಸಗಿ ತಯಾರಕರು ಉತ್ಪಾದನಾ ವೆಚ್ಚ, ವೈಜ್ಞಾನಿಕ ಮಾಹಿತಿ ಮತ್ತು ಮಾರುಕಟ್ಟೆ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು ಬೆಲೆ ನಿಗದಿಪಡಿಸುತ್ತಾರೆ. ಮುಕ್ತ ಮಾರುಕಟ್ಟೆಯಲ್ಲಿ ತಯಾರಕರು ಅದನ್ನು ನಿರ್ಧರಿಸುವ ಹಕ್ಕು ಹೊಂದಿದ್ದಾರೆ. ಔಷಧಿಗಳಬೆಲೆಯನ್ನು ನಿಗದಿಪಡಿಸುವಲ್ಲಿ ಕೇಂದ್ರವು ಯಾವ ನೆಲೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬುದನ್ನು ಮಮತಾ ಬ್ಯಾನರ್ಜಿ ಹೇಳಲಿ. ಅವರು ಯಾಕೆ ನೇರವಾಗಿ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿಲ್ಲ? ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಜಯ್ ಪ್ರಕಾಶ್ ಮಜುಂದಾರ್ ಪ್ರಶ್ನಿಸಿದ್ದಾರೆ.

ಜಾಗತಿಕವಾಗಿ ಮುಕ್ತ ಮಾರುಕಟ್ಟೆಯಲ್ಲಿನ ಅಮೆರಿಕದ ಲಸಿಕೆಗಳು ಪ್ರಸ್ತುತ ಪ್ರತಿ ಡೋಸ್‌ಗೆ 1,500, ರಷ್ಯಾದ ಮತ್ತು ಚೀನಾದ ಲಸಿಕೆಗಳಿಗೆ ಪ್ರತಿ ಡೋಸ್‌ಗೆ ₹ 750 ದರವನ್ನು ಹೊಂದಿವೆ.

ಉಚಿತ ಲಸಿಕೆ ಪ್ರಾರಂಭಿಸುವುದಕ್ಕಾಗಿ ರಾಜ್ಯಕ್ಕೆ ಲಸಿಕೆಗಳನ್ನು ಖರೀದಿಸಲು ಅವಕಾಶ ನೀಡುವ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.

ಈಗ ಎರಡನೇ ಅಲೆಯಿಂದಾಗಿಕೊವಿಡ್ ಪ್ರಕರಣಗಳ ಸಂಖ್ಯೆಯು ಏರಿಕೆಯಾಗುತ್ತಲೇ ಇದೆ. ಹೀಗಿರುವಾಗ ಕೇಂದ್ರ ಸರ್ಕಾರವು ಕೇವಲ ಬಾಯಿ ಮಾತುಹಗಳಿಂದ ವಿಷಯವನ್ನು ತೇಲಿಸುತ್ತಿದ್ದು ಲಸಿಕೆಗಳನ್ನು ಜನರಿಗೆ ಲಭ್ಯವಾಗುವಂತೆ ಮಾಡುವ ಜವಾಬ್ದಾರಿಯಿಂದ ದೂರ ಸರಿಯುತ್ತಿದೆ ಎಂದು ಮಮತಾ ಅವರು ಮಂಗಳವಾರ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:‘ಕೊರೊನಾ ಬಿಕ್ಕಟ್ಟು.. ಪ್ರಧಾನಿ ಮೋದಿ ನಿರ್ಮಿತ ವಿಪತ್ತು-ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ