AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Hiring: ಅಮೆಜಾನ್​​ ಕಂಪನಿಯಿಂದ ಮಾರಾಟವಷ್ಟೇ ಅಲ್ಲ; ಭಾರೀ ಉದ್ಯೋಗ ಮೇಳವೂ ನಡೆದಿದೆ, ನೀವೂ ಪಾಲ್ಗೊಳ್ಳೀ

ಅಮೆಜಾನ್​​ ಕಂಪನಿ ಅಂದರೆ ಜಾಗತಿಕ ಮಟ್ಟದ ಬೃಹತ್ ಗ್ರಾಹಕ ಸರಕು​ ಮಾರಾಟ ಕಂಪನಿ ಅಂತಷ್ಟೇ ಅಲ್ಲ; ಆ ಗ್ರಾಹಕ ಸರಕುಗಳನ್ನು ಮಾರಾಟ ಮಾಡಲು ಜನ ಬೇಕು ಅಲ್ಲವಾ? ಅದಕ್ಕೆಂದೇ ಅಮೆಜಾನ್​​ ಕಂಪನಿಯು ದೇ ಸೆಪ್ಟೆಂಬರ್​ ತಿಂಗಳಲ್ಲಿ ಭಾರೀ ಉದ್ಯೋಗ ಮೇಳ ನಡೆಸಿದ್ದು, ತನ್ನ ಮಾರಾಟ ಜಾಲವನ್ನು ವಿಸ್ತರಿಸಿ, ಸದೃಢಗೊಳಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಅವರೇ ತಿಳಿಸಿದ್ದಾರೆ

Amazon Hiring: ಅಮೆಜಾನ್​​ ಕಂಪನಿಯಿಂದ ಮಾರಾಟವಷ್ಟೇ ಅಲ್ಲ; ಭಾರೀ ಉದ್ಯೋಗ ಮೇಳವೂ ನಡೆದಿದೆ, ನೀವೂ ಪಾಲ್ಗೊಳ್ಳೀ
ಭಾರತೀಯರಿಗಾಗಿ ಸೆಪ್ಟೆಂಬರ್​ 16ರಂದು ಅಮೆಜಾನ್ ಕೆರಿಯರ್​ ಡೆ (Amazon Career Day) ನಿಗದಿಯಾಗಿದೆ.
TV9 Web
| Updated By: ಸಾಧು ಶ್ರೀನಾಥ್​|

Updated on:Sep 02, 2021 | 9:50 AM

Share

ಅಮೆಜಾನ್​​ ಕಂಪನಿ ಅಂದರೆ ಜಾಗತಿಕ ಮಟ್ಟದ ಬೃಹತ್ ಗ್ರಾಹಕ ಸರಕು​ ಮಾರಾಟ ಕಂಪನಿ ಅಂತಷ್ಟೇ ಅಲ್ಲ; ಆ ಗ್ರಾಹಕ ಸರಕುಗಳನ್ನು ಮಾರಾಟ ಮಾಡಲು ಜನ ಬೇಕು ಅಲ್ಲವಾ? ಅದಕ್ಕೆಂದೇ ಅಮೆಜಾನ್​​ ಕಂಪನಿಯು ದೇ ಸೆಪ್ಟೆಂಬರ್​ ತಿಂಗಳಲ್ಲಿ ಭಾರೀ ಉದ್ಯೋಗ ಮೇಳ ನಡೆಸಿದ್ದು, ತನ್ನ ಮಾರಾಟ ಜಾಲವನ್ನು ವಿಸ್ತರಿಸಿ, ಸದೃಢಗೊಳಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಅವರೇ ತಿಳಿಸಿದ್ದಾರೆ (Amazon Chief Executive Andy Jassy). ಬನ್ನೀ ಹಾಗಾದರೆ ಅಮೆಜಾನ್​​ ಕಂಪನಿ ಯಾವೆಲ್ಲ ಉದ್ಯೋಗ ಆಫರ್​​ಗಳನ್ನು ನೀಡುತ್ತಿದೆ ತಿಳಿಯೋಣ.

ಗೂಗಲ್ ಕಂಪನಿ (Google), ಫೇಸ್​​ಬುಕ್ (Facebook)​​ ಕಂಪನಿಗಳಿಗೆ ಸರಿಸಮನಾಗಿ ​ಅಮೆಜಾನ್​​ ಕಂಪನಿಯು ಜಾಗತಿಕ ಮಟ್ಟದ ಜನರನ್ನು ನೇಮಕ ಮಾಡಿಕೊಳ್ಳಲಿದೆ. ರೀಟೇಲ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಪ್ರಾಜೆಕ್ಟ್​ ಕ್ಯುಪಿರ್​ (Project Kuiper) ಎಂಬ ಬ್ರಾಡ್​​ಬ್ಯಾಂಡ್​​ ತಂತ್ರಜ್ಞಾನ ಕ್ಷೇತ್ರದಲ್ಲಿ ಟೆಕ್ಕಿಗಳ ಅವಶ್ಯಕತೆಯಿದೆ. ಹಾಗಾಗಿ ಕಂಪನಿ ವತಿಯಿಂದ ನೇಮಕಾತಿಗಳು ನಡೆಯುತ್ತಿವೆ. ಜಾಗತಿಕ ಮಟ್ಟದಲ್ಲಿ ಕಂಪನಿಯಲ್ಲಿ ಈಗಾಗಲೇ 275,000 ಮಂದಿ ಉದ್ಯೋಗಿಗಳು ಇದ್ದಾರೆ. ಈಗ ಕೆರಿಯರ್​ ಡೆ (Career Day) ಮೂಲಕ ಇನ್ನೂ ಶೇ. 20 ರಷ್ಟು (55 ಸಾವಿರ ಮಂದಿ) ಟೆಕ್​ ಮತ್ತು ಕಾರ್ಪೊರೇಟ್​​ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಹೇಳಿದ್ದಾರೆ.

ಇದರಲ್ಲಿ ಭಾರತ, ಜರ್ಮನಿ ಮತ್ತು ಜಪಾನ್​ ದೇಶಗಳಿಂದ 40 ಸಾವಿರ ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ. ಕಳೆದ ವರ್ಷ 22 ಸಾವಿರ ಮಂದಿಯನ್ನು ಭಾರತದಿಂದ ನೇಮಕ ಮಾಡಿಕೊಂಡಿದ್ದೆವು. (www.amazoncareerday.com) ಎಂಜಿನಿಯರಿಂಗ್, ಸಂಶೋಧನಾ ವಿಜ್ಞಾನ, ರೊಬೋಟಿಕ್ಸ್ ಸೇರಿದಂತೆ ನವನಾವಿನ್ಯ ಕ್ಷೇತ್ರಗಳಲ್ಲಿ ಕಂಪನಿಗೆ ಉದ್ಯೋಗಿಗಿ ಬೇಕಾಗಿದ್ದಾರೆ. ಬದಲಾದ ಜಾಗತಿಕ ನಿಯಗಳಿಗೆ ಅನುಸಾರವಾಗಿ ಉದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಅಮೆರಿಕದಲ್ಲಿ ಗರಿಷ್ಠವಾಗಿ ನೇಮಕ ಮಾಡಿಕೊಂಡಿರುವ ಕಂಪನಿಗಳ ಪೈಕಿ ಅಮೆಜಾನ್ ಎರಡನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: Indian Railways: ರೈಲ್ವೇ ಇಲಾಖೆಯ ಉದ್ಯೋಗ ಹುಡುಕುವುದು ಹೇಗೆ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

(Amazon dot com Inc planning to hire for corporate and technology roles Chief Executive Andy Jassy)

Published On - 9:38 am, Thu, 2 September 21