AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Employment Gap: ಕರಿಯರ್‌ ಬ್ರೇಕ್ ಪಡೆದ ಬಳಿಕ ಮತ್ತೆ ಉದ್ಯೋಗ ಪಡೆಯಲು ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್​​​

ಕರಿಯರ್‌ ಬ್ರೇಕ್‌ ಪಡೆದ ವರ್ಷಗಳ ಬಳಿಕ ಮತ್ತೆ ಕೆಲಸಕ್ಕೆ ಮರಳಲು ಬಯಸಿದರೆ ಸಂದರ್ಶನದ ಬಗ್ಗೆಆತಂಕ ಬೇಡ. ಗರ್ಭಧಾರಣೆ, ಆರೈಕೆ, ಅನಾರೋಗ್ಯ, ಅಥವಾ ಉನ್ನತ ಶಿಕ್ಷಣದಂತಹ ಪ್ರಮುಖ ಕಾರಣಗಳಿದ್ದರೆ ಪ್ರಾಮಾಣಿಕವಾಗಿ ವಿವರಿಸಿ. ಕೌಶಲ್ಯಗಳನ್ನು ಉಳಿಸಿಕೊಳ್ಳಲು ಆನ್‌ಲೈನ್ ಕೋರ್ಸ್‌ಗಳು, ಫ್ರೀಲಾನ್ಸಿಂಗ್ ಅಥವಾ ಸ್ವಯಂ ಅಧ್ಯಯನ ಮಾಡಿ. ನಿಮ್ಮ ನೆಟ್‌ವರ್ಕ್ ಅನ್ನು ಬಲಪಡಿಸಿ ಮತ್ತು ವೃತ್ತಿಪರ ವೆಬ್‌ಸೈಟ್‌ಗಳಲ್ಲಿ ಸಕ್ರಿಯರಾಗಿರಿ. ಪ್ರಾಮಾಣಿಕತೆ ಮತ್ತು ಶ್ರಮ ನಿಮ್ಮೊಂದಿಗಿದ್ದರೆ ಜಾಬ್​ ಆಫರ್ ನಿಮ್ಮ ಪಾಲಾಗುವುದಂತೂ ಖಂಡಿತಾ.

Employment Gap: ಕರಿಯರ್‌ ಬ್ರೇಕ್ ಪಡೆದ ಬಳಿಕ ಮತ್ತೆ ಉದ್ಯೋಗ ಪಡೆಯಲು ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್​​​
Employment Gap
ಅಕ್ಷತಾ ವರ್ಕಾಡಿ
|

Updated on: Jun 12, 2025 | 7:33 AM

Share

ಸಾಕಷ್ಟು ಜನರು ಕರಿಯರ್‌ ಬ್ರೇಕ್‌ ಪಡೆದ ವರ್ಷಗಳ ಬಳಿಕ ಮತ್ತೆ ಕೆಲಸಕ್ಕೆ ಮರಳಲು ತುಂಬಾ ಕಷ್ಟ ಪಡುತ್ತಿರುತ್ತಾರೆ. ರೆಸ್ಯೂಮ್‌ನಲ್ಲಿ ಉದ್ಯೋಗ ಅಂತರವಿರುವುದರಿಂದ ಸಂದರ್ಶನ ನೀಡಲು ಹಿಂದೇಟು ಹಾಕುತ್ತಿರುತ್ತಾರೆ. ಆದರೆ ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮಲ್ಲಿ ಉದ್ಯೋಗಕ್ಕೆ ಅಂತರವೇಕೆ ಎಂಬುದಕ್ಕೆ ಸರಿಯಾದ ಉತ್ತರವಿದ್ದರೆ ಹೆದರುವ ಅಗತ್ಯವಿಲ್ಲ. ಬದಲಾಗಿ ನೀವು ಕೆಲಸಕ್ಕೆ ಸೇರಲು ಬೇಕಾದ ಪೂರ್ವ ತಯಾರಿಯನ್ನು ನಡೆಸುವುದು ಅಗತ್ಯ.

ನೀವು ಯಾವುದೇ ಕಂಪನಿಯ ಸಂದರ್ಶನದಲ್ಲಿ ಭಾಗಿಯಾದರೂ ಕೂಡ ಬ್ರೇಕ್‌ ತೆಗೆದುಕೊಂಡಿರುವುದು ಏಕೆ ಎಂಬುದನ್ನೇ ಮೊದಲು ಕೇಳುತ್ತಾರೆ. ಆ ಸಮಯದಲ್ಲಿ ಸ್ಪಷ್ಟವಾಗಿ ಪ್ರಾಮಾಣಿಕತೆಯಿಂದ 1 ನಿಮಿಷದಲ್ಲಿ ಅವರಿಗೆ ಉತ್ತರ ನೀಡಿದರೆ ಉದ್ಯೋಗದ ಆಫರ್ ನಿಮ್ಮ ಪಾಲಾಗುವುದಂತೂ ಖಂಡಿತಾ.

ಕೆಲಸದಿಂದ ಬ್ರೇಕ್​ ಪಡೆಯಲು ಮುಖ್ಯ ಕಾರಣ:

  • ಗರ್ಭಧಾರಣೆ ಹಾಗೂ ಮಗುವಿನ ಲಾಲನೆ ಪಾಲನೆ
  • ಸಿಟಿ ಬಿಟ್ಟು ಹಳ್ಳಿ ಜೀವನಕ್ಕಾಗಿ
  • ತಂದೆ ತಾಯಿಯ ಅನಾರೋಗ್ಯದ ಕಾರಣ
  • ಉನ್ನತ ಶಿಕ್ಷಣಕ್ಕಾಗಿ

ಸಂಪೂರ್ಣವಾಗಿ ವೃತ್ತಿಜೀವನವನ್ನು ಮರೆಯಬೇಡಿ:

ನೀವು ಈ ಮೇಲಿನ ಕಾರಣಕ್ಕಾಗಿ ಕೆಲಸದಿಂದ ಬ್ರೇಕ್​ ತೆಗೆದುಕೊಂಡು ಮತ್ತೆ ಕೆಲಸ ಪಡೆಯಲು ಬಯಸಿದರೆ ಪೂರ್ವ ತಯಾರಿ ತುಂಬಾ ಅಗತ್ಯ. ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದರೂ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಕೋರ್ಸ್‌ಗಳು, ಫ್ರೀಲಾನ್ಸ್ ಪ್ರಾಜೆಕ್ಟ್, ಸ್ವಯಂ ಅಧ್ಯಯನ, ಪಾರ್ಟ್-ಟೈಮ್ ಕೆಲಸ ಮಾಡುತ್ತಿರಿ. ಮುಖ್ಯವಾಗಿ ಆ ಕ್ಷೇತ್ರದಲ್ಲಿನ ಇತ್ತೀಚಿನ ತಂತ್ರಜ್ಞಾನ ಮತ್ತು ಟ್ರೆಂಡ್‌ಗಳ ಬಗ್ಗೆ ಅಪ್ಡೇಟ್​​ ತಿಳಿದಿರಲಿ.

ಸ್ನೇಹಿತರೊಂದಿಗೆ ಸಂಪರ್ಕ ಬೆಳೆಸಿ:

ನೀವು ಒಂದು ಕಂಪನಿಯಲ್ಲಿ ಕೆಲಸ ತೊರೆದರೂ ಕೂಡ ಅಲ್ಲಿನ ಸಹೋದ್ಯೋಗಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಕೆಲಸದ ಬಗ್ಗೆ ಕರೆ ಮಾಡಿದಾಗೆಲ್ಲಾ ಮಾತನಾಡುತ್ತಿರಿ. ಇದರಿಂದ ಆ ಕಂಪನಿಯ ಜೊತೆಗೆ ಬೇರೆ ಎಲ್ಲಾದರೂ ಉದ್ಯೋಗಾವಕಾಶವಿದೆಯೇ ಎಂಬ ಮಾಹಿತಿಯನ್ನು ನೀವು ಮನೆಯಲ್ಲಿ ಕುಳಿತು ಪಡೆಯಬಹುದು.

ವೆಬ್‌ಸೈಟ್‌ಗಳಲ್ಲಿ ಆಕ್ಟೀವ್​ ಆಗಿರಿ:

ಕರಿಯರ್‌ ಬ್ರೇಕ್‌ ಪಡೆದ ವರ್ಷಗಳ ಬಳಿಕ ಮತ್ತೆ ಕೆಲಸಕ್ಕೆ ಮರಳಲು ಬಯಸಿದರೆ ಮೊದಲು ಜಾಬ್ಸ್‌ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ಗಳಲ್ಲಿ ಸಾಕಷ್ಟು ಆಕ್ಟೀವ್​ ಆಗಿರಿ. ಅದಕ್ಕಾಗಿ ಲಿಂಕ್ಡ್‌ಇನ್‌, ಟೈಮ್ಸ್‌ಜಾಬ್ಸ್‌ನಂತಹ ಕರಿಯರ್‌ ವೆಬ್‌ಸೈಟ್‌ಗಳಲ್ಲಿ ನಿಮ್ಮ ಪ್ರೊಫೈಲ್​​ ಅನ್ನು ಅಪ್ಡೇಟ್​​​​ ಮಾಡಿ. ಇತ್ತೀಚಿನ ತಂತ್ರಜ್ಞಾನ ಮತ್ತು ಟ್ರೆಂಡ್‌ಗಳ ಬಗ್ಗೆ ನಿಮಗೆ ತಿಳಿದುರುವುದನ್ನು ನಿಮ್ಮ ಪ್ರೊಫೈಲ್​​ ನಲ್ಲಿ ಸೇರಿಸಿಕೊಳ್ಳಿ.

ವೈರಲ್​ ಪೋಸ್ಟ್​​:

ಇತ್ತೀಚಿಗಷ್ಟೇ ದೆಹಲಿಯ ವ್ಯಕ್ತಿಯೊಬ್ಬರು ಕರಿಯರ್‌ ಬ್ರೇಕ್‌ ಬಗ್ಗೆ ಪೋಸ್ಟ್​​ ಒಂದನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಬರೆದಿರುವಂತೆ, “ಇತ್ತೀಚೆಗೆ ನಾನು 26 ವರ್ಷದ ಅಭ್ಯರ್ಥಿಯನ್ನು ಸಂದರ್ಶಿಸಿದೆ. ಅವರ ಕೆಲಸದಲ್ಲಿ 15 ತಿಂಗಳ ಅಂತರವಿತ್ತು, ನಂತರ ನಾನು ಕೇಳಿದೆ ನಿಮ್ಮ ರೆಸ್ಯೂಮ್‌ನಲ್ಲಿ ಉದ್ಯೋಗ ಅಂತರ ಏಕೆ ಇದೆ ಎಂದು ನಿಮ್ಮ ಹಿಂದಿನ ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾರೆಯೇ? ಎಂದು ಆಗ ಆತ “ಇಲ್ಲ, ನನ್ನ ತಂದೆಯ ಅನಾರೋಗ್ಯದ ಕಾರಣ ನಾನು ಕೆಲಸವನ್ನು ತೊರೆದಿದ್ದೇನೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಅವರನ್ನು ನೋಡಿಕೊಳ್ಳಬೇಕಾಗಿತ್ತು, ಆದ್ದರಿಂದ ನಾನು ನನ್ನ ಊರಿಗೆ ಸ್ಥಳಾಂತರಗೊಂಡೆ” ಎಂದು ಉತ್ತರಿಸಿದರು.

ಇದನ್ನೂ ಓದಿ: ವಿದೇಶದಲ್ಲಿ MBBS ಓದುವ ಭಾರತೀಯರ ಗಮನಕ್ಕೆ, ಈ ವಿಷ್ಯ ಗೊತ್ತಿಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ

ಇದರ ನಂತರ ಸಂದರ್ಶನ ನಡೆಸುವವರು ಅವರನ್ನು “ನಿಮ್ಮ ತಂದೆ ಈಗ ಚೆನ್ನಾಗಿದ್ದಾರೆಯೇ, ಅವರಿಗೆ ಏನಾಯಿತು?” ಎಂದು ಕೇಳಿದರು. ಅಭ್ಯರ್ಥಿಯು “ಇಲ್ಲ,  ತಂದೆ ಕೆಲವು ತಿಂಗಳ ಹಿಂದೆ ನಿಧನರಾದರು” ಎಂದು ಉತ್ತರಿಸಿದರು. ಅಭ್ಯರ್ಥಿಯು ತನ್ನ ತಂದೆಯೊಂದಿಗೆ ಕೊನೆಯ ದಿನಗಳಲ್ಲಿ ಸಮಯ ಕಳೆಯಲು ಕೆಲಸವನ್ನು ತೊರೆದಿದ್ದೇನೆ ಎಂದು ಹೇಳಿದರು. ಆ ಅಭ್ಯರ್ಥಿಯು, “ಉದ್ಯೋಗವನ್ನು ತೊರೆದಾಗ ನನಗೆ ವಿಷಾದವಿಲ್ಲ ಮತ್ತು ನನ್ನ ರೆಸ್ಯೂಮ್‌ನಲ್ಲಿನ ಉದ್ಯೋಗ ಅಂತರದ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದರು. ಅಭ್ಯರ್ಥಿಯ ನೇರ ನುಡಿಯಿಂದಾಗಿ ಕಂಪನಿ ತಕ್ಷಣವೇ ಅವರಿಗೆ ಕೆಲಸವನ್ನು ನೀಡಲು ನಿರ್ಧರಿಸಿತು.

ಆದ್ದರಿಂದ ನೀವು 6 ತಿಂಗಳು ಅಥವಾ 1,2 ವರ್ಷ ಕರಿಯರ್‌ ಬ್ರೇಕ್‌ ತೆಗೆದುಕೊಂಡಿದ್ದರೂ ಕೂಡ ಕಾರಣವನ್ನು ಸರಿಯಾಗಿ ತಿಳಿಸಿ. ಸಂದರ್ಶನದಲ್ಲಿ ಈ ವಿಚಾರವೇ ನಿಮಗೆ ಪ್ರಮುಖ ನೆಗೆಟಿವ್‌ ಅಂಶವಾಗಿದ್ದರೂ ಕೂಡ ನೀವು ಯಾವುದೇ ಕಾರಣಕ್ಕೆ ಭರವಸೆ ಕಳೆದುಕೊಳ್ಳಬೇಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?