AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ESIC Recruitment 2022: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗಾವಕಾಶ

ESIC Recruitment 2022: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ESIC Recruitment 2022: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗಾವಕಾಶ
ESIC Recruitment 2022
TV9 Web
| Updated By: ಝಾಹಿರ್ ಯೂಸುಫ್|

Updated on: Mar 12, 2022 | 10:39 PM

Share

ESIC Social Security Officer Recruitment 2022: ನವ ದೆಹಲಿಯಲ್ಲಿರುವ ನೌಕರರ ರಾಜ್ಯ ವಿಮಾ ನಿಗಮ (ESIC), ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಸೂಚನೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.

ESIC Recruitment 2022: ಒಟ್ಟು ಹುದ್ದೆಗಳ ಸಂಖ್ಯೆ: 93 ಹುದ್ದೆಗಳು

ESIC Recruitment 2022: ಹುದ್ದೆಗಳ ವಿವರ: ಸಾಮಾಜಿಕ ಭದ್ರತಾ ಅಧಿಕಾರಿ / ಮ್ಯಾನೇಜರ್ ಗ್ರೇಡ್ 2 / ಸೂಪರಿಂಟೆಂಡೆಂಟ್ ಹುದ್ದೆಗಳು

ESIC Recruitment 2022: ವಯೋಮಿತಿ: ಅಭ್ಯರ್ಥಿಗಳು ಏಪ್ರಿಲ್ 12, 2022 ರ ವೇಳೆಗೆ 21 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.

ESIC Recruitment 2022: ವೇತನ ಶ್ರೇಣಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 44,900 ರೂ.ನಿಂದ 1,42,400 ರೂ.ವರೆಗೆ ವೇತನ ಸಿಗಲಿದೆ.

ESIC Recruitment 2022 ವಿದ್ಯಾರ್ಹತೆಗಳು: ಅಧಿಸೂಚನೆಯಲ್ಲಿ ಸೂಚಿಸಿರುವ ಸಂಬಂಧಿತ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. ವಾಣಿಜ್ಯ / ಕಾನೂನು / ನಿರ್ವಹಣೆ ಪದವೀಧರರಿಗೆ ಆದ್ಯತೆ ನೀಡಲಾಗುವುದು. ಜೊತೆಗೆ ಕಂಪ್ಯೂಟರ್ ಜ್ಞಾನ ಅಗತ್ಯ.

ESIC Recruitment 2022 ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (ಪ್ರಿಲಿಮಿನರಿ, ಮೇನ್ಸ್), ಕೌಶಲ್ಯ ಮತ್ತು ವಿವರಣಾತ್ಮಕ ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ESIC Recruitment 2022 ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ESIC Recruitment 2022 ಅರ್ಜಿ ಶುಲ್ಕ: ಸಾಮಾನ್ಯ / OBC ಅಭ್ಯರ್ಥಿಗಳಿಗೆ: Rs.500 SC / ST / PWD ಅಭ್ಯರ್ಥಿಗಳಿಗೆ: ರೂ.250

ESIC Recruitment 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 13, 2022

ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(ESIC Recruitment 2022 for 93 Social Security Officer Posts)