IBPS PO Recruitment: 6 ಸಾವಿರಕ್ಕೂ ಅಧಿಕ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
IBPS PO Exam 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್ಸೈಟ್ ibps.in. ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
IBPS PO Recruitment: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪ್ರೊಬೇಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಐಬಿಪಿಎಸ್ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಒಟ್ಟು 6432 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಮೂಲಕ 6 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಪಿಒ / ಮ್ಯಾನೇಜ್‌ಮೆಂಟ್ ಟ್ರೈನಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಆರು ಬ್ಯಾಂಕ್‌ಗಳಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗರಿಷ್ಠ ಖಾಲಿ ಹುದ್ದೆಗಳಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್ಸೈಟ್ ibps.in. ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
- ಬ್ಯಾಂಕ್ ಆಫ್ ಇಂಡಿಯಾ – 535 ಹುದ್ದೆಗಳು
- ಕೆನರಾ ಬ್ಯಾಂಕ್ – 2500 ಹುದ್ದೆಗಳು
- ಪಂಜಾಬ್ ನ್ಯಾಷನಲ್ ಬ್ಯಾಂಕ್ – 500 ಹುದ್ದೆಗಳು
- ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ – 253 ಹುದ್ದೆಗಳು
- UCO ಬ್ಯಾಂಕ್ – 550 ಹುದ್ದೆಗಳು
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – 2094 ಹುದ್ದೆಗಳು
ಅರ್ಹತಾ ಮಾನದಂಡಗಳು: ಶೈಕ್ಷಣಿಕ ಅರ್ಹತೆ – ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು.
ವಯೋಮಿತಿ: ಈ ಹುದ್ದೆಗಳಿಗೆ 20 ವರ್ಷದಿಂದ 30 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ: IBPS PO ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 2022 ರಲ್ಲಿ ನಡೆಸುವ ಸಾಧ್ಯತೆಯಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳನ್ನು ಪಿಒ ನೇಮಕಾತಿ ಮುಖ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಈ ಪರೀಕ್ಷೆಯು ನವೆಂಬರ್‌ನಲ್ಲಿ ನಡೆಸುವ ಸಾಧ್ಯತೆಯಿದೆ. ಇದರ ನಂತರ ಸಂದರ್ಶನ ಇರಲಿದ್ದು, ಮೊದಲೆರಡು ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಜನವರಿ/ಫೆಬ್ರವರಿ 2023 ರಲ್ಲಿ ನೇರ ಸಂದರ್ಶನ ಇರಲಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 22, 2022
- ಪೂರ್ವಭಾವಿ ಪರೀಕ್ಷೆ – ಅಕ್ಟೋಬರ್ 2022
- ಮುಖ್ಯ ಪರೀಕ್ಷೆ – ನವೆಂಬರ್ 2022
- ಸಂದರ್ಶನ – ಜನವರಿ / ಫೆಬ್ರವರಿ 2023
ಅರ್ಜಿ ಶುಲ್ಕ: ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಶುಲ್ಕವಾಗಿ 850 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ SC/ST/PWBD ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 1:04 pm, Tue, 2 August 22