IBPS PO Recruitment: 6 ಸಾವಿರಕ್ಕೂ ಅಧಿಕ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Aug 02, 2022 | 1:04 PM

IBPS PO Exam 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್​ಸೈಟ್ ibps.in. ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

IBPS PO Recruitment: 6 ಸಾವಿರಕ್ಕೂ ಅಧಿಕ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
IBPS PO Recruitment
Follow us on

IBPS PO Recruitment: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪ್ರೊಬೇಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಐಬಿಪಿಎಸ್ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಒಟ್ಟು 6432 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಮೂಲಕ 6 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಪಿಒ / ಮ್ಯಾನೇಜ್‌ಮೆಂಟ್ ಟ್ರೈನಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಆರು ಬ್ಯಾಂಕ್​ಗಳಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗರಿಷ್ಠ ಖಾಲಿ ಹುದ್ದೆಗಳಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್​ಸೈಟ್ ibps.in. ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  • ಬ್ಯಾಂಕ್ ಆಫ್ ಇಂಡಿಯಾ – 535 ಹುದ್ದೆಗಳು
  • ಕೆನರಾ ಬ್ಯಾಂಕ್ – 2500 ಹುದ್ದೆಗಳು
  • ಪಂಜಾಬ್ ನ್ಯಾಷನಲ್ ಬ್ಯಾಂಕ್ – 500 ಹುದ್ದೆಗಳು
  • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ – 253 ಹುದ್ದೆಗಳು
  • UCO ಬ್ಯಾಂಕ್ – 550 ಹುದ್ದೆಗಳು
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – 2094 ಹುದ್ದೆಗಳು

ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ – ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು.

ಇದನ್ನೂ ಓದಿ
Anganwadi Recruitment 2022: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
HAL Recruitment 2022: ಹೆಚ್​ಎಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Coal India MT Recruitment 2022: ಕೋಲ್ ಇಂಡಿಯಾದ 481 ಹುದ್ದೆಗಳಿಗೆ ಅರ್ಜಿ ಆಹ್ವಾನ
BBMP Recruitment 2022: ‘ನಮ್ಮ ಕ್ಲಿನಿಕ್’​ನಲ್ಲಿರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ:
ಈ ಹುದ್ದೆಗಳಿಗೆ 20 ವರ್ಷದಿಂದ 30 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ:
IBPS PO ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 2022 ರಲ್ಲಿ ನಡೆಸುವ ಸಾಧ್ಯತೆಯಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳನ್ನು ಪಿಒ ನೇಮಕಾತಿ ಮುಖ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಈ ಪರೀಕ್ಷೆಯು ನವೆಂಬರ್‌ನಲ್ಲಿ ನಡೆಸುವ ಸಾಧ್ಯತೆಯಿದೆ. ಇದರ ನಂತರ ಸಂದರ್ಶನ ಇರಲಿದ್ದು, ಮೊದಲೆರಡು ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಜನವರಿ/ಫೆಬ್ರವರಿ 2023 ರಲ್ಲಿ ನೇರ ಸಂದರ್ಶನ ಇರಲಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 22, 2022
  • ಪೂರ್ವಭಾವಿ ಪರೀಕ್ಷೆ – ಅಕ್ಟೋಬರ್ 2022
  • ಮುಖ್ಯ ಪರೀಕ್ಷೆ – ನವೆಂಬರ್ 2022
  • ಸಂದರ್ಶನ – ಜನವರಿ / ಫೆಬ್ರವರಿ 2023

ಅರ್ಜಿ ಶುಲ್ಕ:
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಶುಲ್ಕವಾಗಿ 850 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ SC/ST/PWBD ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

Published On - 1:04 pm, Tue, 2 August 22