- Kannada News Photo gallery Cricket photos SRH Dominates IPL 2026: Head, Abhishek Sharma Set New Powerplay Record in Mullanpur
PBKS vs SRH: ಅಭಿಷೇಕ್- ಹೆಡ್ ಆರಂಭಿಕ ಸುನಾಮಿಗೆ ಮತ್ತೊಂದು ದಾಖಲೆ ಸೃಷ್ಟಿ
SRH Dominates IPL 2026:ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2026 ರ ಪಂದ್ಯದಲ್ಲಿ, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಐತಿಹಾಸಿಕ ಆರಂಭ ನೀಡಿದರು. ಪವರ್‌ಪ್ಲೇನಲ್ಲಿ 105 ರನ್ ಗಳಿಸಿ ಹೊಸ ದಾಖಲೆ ಬರೆದರು. ಕೇವಲ 5.5 ಓವರ್‌ಗಳಲ್ಲಿ 100 ರನ್ ಪೂರೈಸಿದ SRH, ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಈ ಸಾಧನೆ ಮಾಡಿತು. ಇದು ಅವರ ಐದನೇ ಶತಕದ ಜೊತೆಯಾಟ.
Updated on: Apr 11, 2026 | 6:27 PM

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2026 ರ 17ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕರಾಗಿರುವ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಪಂಜಾಬ್ ಬೌಲರ್‌ಗಳನ್ನು ದುಃಸ್ವಪ್ನರಾಗಿ ಕಾಡಿದರು. ಇವರಿಬ್ಬರ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೆ ಪವರ್ಪ್ಲೇನಲ್ಲೇ ಸನ್‌ರೈಸರ್ಸ್ ತಂಡ 100 ರನ್‌ಗಳ ಗಡಿ ದಾಟಿತು. ಈ ಮೂಲಕ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆಯೂ ಸೃಷ್ಟಿಯಾಯಿತು.

ಈ ಜೋಡಿ ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 105 ರನ್ ಕಲೆಹಾಕಿದರು. ಈ ಮೂಲಕ ಈ ಮೈದಾನದಲ್ಲಿ ಪವರ್ ಪ್ಲೇ ಅತ್ಯಧಿಕ ಮೊತ್ತ ದಾಖಲಿಸಿದ ದಾಖಲೆಯನ್ನು ನಿರ್ಮಿಸಿದರು. ಈ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಕೇವಲ 5.5 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ಈ ಮೂಲಕ ಹೈದರಾಬಾದ್ ಮೂರನೇ ಬಾರಗೆ ಐಪಿಎಲ್ ಇತಿಹಾಸದಲ್ಲಿ ವೇಗವಾಗಿ ನೂರು ರನ್ ಗಳಿಸಿದ ತಂಡವೆಂಬ ದಾಖಲೆ ಬರೆಯಿತು.

ಸನ್‌ರೈಸರ್ಸ್ ತಂಡದ ಆರಂಭಿಕರು ಈ ಹಿಂದಿನ ಆವೃತ್ತಿಗಳಲ್ಲಿ ದೆಹಲಿ ಮತ್ತು ಲಕ್ನೋ ವಿರುದ್ಧವೂ ಇದೇ ರೀತಿಯ ಪ್ರದರ್ಶನ ನೀಡಿದ್ದರು. ಈ ಶತಕದ ಜೊತೆಯಾಟದ ಮೂಲಕ ಅಭಿಷೇಕ್-ಹೆಡ್ ಜೋಡಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳ ಆರಂಭಿಕ ಪಾಲುದಾರಿಕೆಯನ್ನು ಗಳಿಸಿದ ಜೋಡಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇದು ಇವರಿಬ್ಬರ ಐದನೇ ಶತಕದ ಪಾಲುದಾರಿಕೆಯಾಗಿದೆ.

ಇದರೊಂದಿಗೆ, ಅವರು ವಿರಾಟ್ ಕೊಹ್ಲಿ-ಫಾಫ್ ಡು ಪ್ಲೆಸಿಸ್ ಮತ್ತು ವಾರ್ನರ್-ಬೈರ್‌ಸ್ಟೋವ್ ಅವರ ದಾಖಲೆಗಳನ್ನು ಸರಿಗಟ್ಟಿದ್ದಾರೆ. ಈ ಜೋಡಿ ಇನ್ನೂ ಒಂದು ಶತಕದ ಪಾಲುದಾರಿಕೆಯನ್ನು ನಿರ್ಮಿಸಿದರೆ, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಅವರ ಆರು ಶತಕಗಳ ಪಾಲುದಾರಿಕೆಯ ಸಾರ್ವಕಾಲಿಕ ದಾಖಲೆಯನ್ನು ಮುರಿಯಲಿದೆ.

ಆರಂಭಿಕರ ಈ ಅಬ್ಬರದ ಪ್ರದರ್ಶನದ ಹೊರತಾಗಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡ 250 ರನ್ ದಾಖಲಿಸುವಲ್ಲಿ ಎಡವಿತು. ಆರಂಭಿಕರ ವಿಕೆಟ್ ಪತನದ ಬಳಿಕ ಬಂದವರು ಹೆಚ್ಚು ಪರಿಣಾಮಕಾರಿಯಾಗಲಿಲ್ಲ. ಹೀಗಾಗಿ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 219 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More
