KLA Recruitment 2024 : ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ಕರ್ನಾಟಕ ವಿಧಾನ ಸಭೆ ಕಾರ್ಯಾಲಯವು 2024ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಜೂನಿಯರ್ ಸಹಾಯಕ, ಕಂಪ್ಯೂಟರ್ ಆಪರೇಟರ್ ಮತ್ತು ಇತರ ಹುದ್ದೆಗಳಿಗೆ ಒಟ್ಟು 37 ಹುದ್ದೆಗಳ ಪ್ರಕಟಣೆ ಹೊರಡಿಸಿದೆ. ಈ ಮೇಲಿನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳ ವಿವರ, ವೇತನ ಹಾಗೂ ಅರ್ಹತಾ ಮಾನದಂಡಗಳು ಸೇರಿದಂತೆ ವಿವಿಧ ಮಾಹಿತಿಗಳು ಇಲ್ಲಿದೆ.

KLA Recruitment 2024 : ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2024 | 11:21 AM

ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್, ಕಿರಿಯ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳ ಸದರಿ ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳಿಗೆ ಇದೇ ತಿಂಗಳ ನವೆಂಬರ್ 25 ರೊಳಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

* ಜ್ಯೂನಿಯರ್ ಪ್ರೋಗ್ರಾಮರ್ – 1

* ಕನ್ನಡ ವರದಿಗಾರರು – 3

* ಆಂಗ್ಲ ವರದಿಗಾರರು – 1

* ಕಂಪ್ಯೂಟರ್ ಆಪರೇಟರ್ – 3

* ಕಿರಿಯ ಸಹಾಯಕರು – 1

* ಕಿರಿಯ ಗ್ರಂಥಾಲಯ ಸಹಾಯಕರು – 1

* ಮಸಾಜರ್ – 1

* ಬಡಗಿ – 1

* ದಲಾಯತ್ – 16 ಹುದ್ದೆಗಳು

* ಸ್ವೀಪರ್ – 1 ಹುದ್ದೆ

ಅಭ್ಯರ್ಥಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆಗಳು

* ಜ್ಯೂನಿಯರ್ ಪ್ರೋಗ್ರಾಮರ್ ಹುದ್ದೆಗೆ ಕಂಪ್ಯೂಟರ್ ಸೈನ್ಸ್/ ಮಾಹಿತಿ ವಿಜ್ಞಾನ/ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವೀಧರರಾಗಿರಬೇಕು ಅಥವಾ ಎಂ.ಸಿ.ಎ ಪದವಿ ಹೊಂದಿರಬೇಕು.

* ವರದಿಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಪದವಿ ಪಡೆದಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿರುವ ಪ್ರವೀಣ ದರ್ಜೆಯ ಕನ್ನಡ ಶೀಘ್ರಲಿಪಿ ಹಾಗೂ ಪ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.

* ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕ ಪದವಿ (ಬಿ.ಸಿ.ಎ) ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ನಲ್ಲಿ ಬಿಎಸ್ಸಿ ಪದವಿ ಪಡೆದಿರಬೇಕು.

* ಕಿರಿಯ ಸಹಾಯಕರು ಹಾಗೂ ಕಿರಿಯ ಗ್ರಂಥಾಲಯ ಸಹಾಯಕರು ಹುದ್ದೆಗೆ ಪದವಿ ಅಥವಾ ಗಣಕಯಂತ್ರದ ಸಾಮಾನ್ಯ ಜ್ಞಾನ ಹೊಂದಿರಬೇಕು. ಗ್ರಂಥಾಲಯ ಸಹಾಯಕರಾಗಿ ಕೆಲಸ ಮಾಡಲು ಆಸಕ್ತಿಯಿರುವವರು ಲೈಬ್ರರಿ ಸೈನ್ಸ್ ನಲ್ಲಿ ಪದವಿ ಹೊಂದಿರಬೇಕು.

* ಮಸಾಜರ್ ಹುದ್ದೆಗೆ 7ನೇ ತರಗತಿ ಉತ್ತೀರ್ಣರಾಗಿದ್ದು ಅನುಭವ ಹೊಂದಿರಬೇಕು.

* ಬಡಗಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.

* ದಲಾಯತ್ ಹಾಗೂ ಸ್ವೀಪರ್ ಹುದ್ದೆಗೆ 7ನೇ ತರಗತಿಯಲ್ಲಿ ಉತ್ತೀರ್ಣ ಮತ್ತು 4ನೇ ತರಗತಿ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್​​​ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ

* ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.

* ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು.

* 2ಎ, 2ಬಿ, 3ಎ, 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಗರಿಷ್ಠ ವಯಸ್ಸು 38 ಮೀರಿರಬಾರದು.

* ಪ.ಜಾತಿ/ ಪ.ಪಂ/ ಪ್ರವರ್ಗ 1ರ ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ಮೀರಿರಬಾರದು.

ಆಯ್ಕೆ ಪ್ರಕ್ರಿಯೆಗಳು

* ಲಿಖಿತ ಪರೀಕ್ಷೆ

* ನೇರ ಸಂದರ್ಶನ

ಅರ್ಜಿ ಸಲ್ಲಿಸುವ ವಿಳಾಸ

ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಮೊದಲನೆ ಮಹಡಿ, ವಿಧಾನಸೌಧ, ಬೆಂಗಳೂರು – 560001 ಇವರ ಹೆಸರಿನಲ್ಲಿ ಈ ಹುದ್ದೆಗಳ ಅರ್ಜಿಗಳನ್ನು ಖರೀದಿಸಿಕೊಳ್ಳಿ. ಇದೇ ವಿಳಾಸಕ್ಕೆ ಭರ್ತಿ ಮಾಡಲಾದ ಸಲ್ಲಿಸಬೇಕು.

ಶುಲ್ಕ ಪಾವತಿ ವಿವರ

ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿಯಿದ್ದು, ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಶುಲ್ಕವಿದೆ. ಈ ಅರ್ಜಿ ಶುಲ್ಕವನ್ನು ಇಂಡಿಯನ್​ ಪೋಸ್ಟಲ್​ ಆರ್ಡರ್​ ಮೂಲಕ ಪಾವತಿ ಮಾಡಬೇಕು.

ಪ್ರಮುಖ ದಿನಾಂಕಗಳು

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಅಕ್ಟೋಬರ್ 25, 2024

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 25, 2024

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ಪರಂಪರೆ ಮುಂದುವರಿಸಿದ ನಿಖಿಲ್
ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ಪರಂಪರೆ ಮುಂದುವರಿಸಿದ ನಿಖಿಲ್
ಹಾಸನಾಂಬ ದರ್ಶನ ಮುಗಿಸಿ ಹೋಗುತ್ತಿದ್ದವರಿಗೆ ಕಾರು ಡಿಕ್ಕಿ: ಇಬ್ಬರು ಸಾವು
ಹಾಸನಾಂಬ ದರ್ಶನ ಮುಗಿಸಿ ಹೋಗುತ್ತಿದ್ದವರಿಗೆ ಕಾರು ಡಿಕ್ಕಿ: ಇಬ್ಬರು ಸಾವು
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೇರ ಪ್ರಸಾರ ಇಲ್ಲಿ ನೋಡಿ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೇರ ಪ್ರಸಾರ ಇಲ್ಲಿ ನೋಡಿ
ಮೋಕ್ಷಿತಾ ಜೊತೆ ಕುಟುಂಬದವರ ವಿಡಿಯೋ ಕಾಲ್; ಇದು ದೀಪಾವಳಿ ಗಿಫ್ಟ್
ಮೋಕ್ಷಿತಾ ಜೊತೆ ಕುಟುಂಬದವರ ವಿಡಿಯೋ ಕಾಲ್; ಇದು ದೀಪಾವಳಿ ಗಿಫ್ಟ್
ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ
ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ
ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ
ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ
ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್​ ಅದಾಲತ್ ಮಾಡಿದ್ದೇನೆ: ಜಮೀರ್ ಸ್ಪಷ್ಟನೆ
ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್​ ಅದಾಲತ್ ಮಾಡಿದ್ದೇನೆ: ಜಮೀರ್ ಸ್ಪಷ್ಟನೆ
ಬಿಗಿ ಭದ್ರತೆಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ದೀಪಾವಳಿ ಸಂಭ್ರಮಾಚರಣೆ
ಬಿಗಿ ಭದ್ರತೆಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ದೀಪಾವಳಿ ಸಂಭ್ರಮಾಚರಣೆ
ಪೊಲೀಸ್​ಗಾಗಿ ಗಂಡ, ಪ್ರೇಮಿಯ ನಡುವೆ ಕಿತ್ತಾಟ; ರೈಲು ನಿಲ್ದಾಣದಲ್ಲೇ ಹೈಡ್ರಾಮ
ಪೊಲೀಸ್​ಗಾಗಿ ಗಂಡ, ಪ್ರೇಮಿಯ ನಡುವೆ ಕಿತ್ತಾಟ; ರೈಲು ನಿಲ್ದಾಣದಲ್ಲೇ ಹೈಡ್ರಾಮ
ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?