AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KMF Recruitment 2023: ಕೆಎಂಎಫ್ ನೇಮಕಾತಿ: SSLC ಪಾಸಾದವರಿಗೆ ಉದ್ಯೋಗಾವಕಾಶ

KMF VIMUL Recruitment 2023: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಆಯ್ಕೆಯಾದರೆ ಸಿಗುವ ಮಾಸಿಕ ವೇತನ ಎಷ್ಟು? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಈ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

KMF Recruitment 2023: ಕೆಎಂಎಫ್ ನೇಮಕಾತಿ: SSLC ಪಾಸಾದವರಿಗೆ ಉದ್ಯೋಗಾವಕಾಶ
KMF Recruitment 2023
TV9 Web
| Edited By: |

Updated on: Mar 28, 2023 | 12:08 AM

Share

KMF VIMUL Recruitment 2023: ಕರ್ನಾಟಕ ಹಾಲು ಒಕ್ಕೂಟದ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್​ನ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಜೂನಿಯರ್ ಟೆಕ್ನಿಷಿಯನ್, ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಅಧಿಕೃತ ವೆಬ್​ಸೈಟ್ bimul.deltainfo.in ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಆಯ್ಕೆಯಾದರೆ ಸಿಗುವ ಮಾಸಿಕ ವೇತನ ಎಷ್ಟು? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಈ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಸಂಸ್ಥೆಯ ಹೆಸರು : KMF ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF VIMUL)
  • ಹುದ್ದೆಗಳ ಸಂಖ್ಯೆ: 40
  • ಉದ್ಯೋಗ ಸ್ಥಳ: ವಿಜಯಪುರ – ಬಾಗಲಕೋಟ
  • ಹುದ್ದೆಗಳ ಹೆಸರು: ಜೂನಿಯರ್ ಟೆಕ್ನಿಷಿಯನ್, ವಿಸ್ತರಣಾ ಅಧಿಕಾರಿ

ಹುದ್ದೆಗಳ ವಿಭಾಗವಾರು ಮಾಹಿತಿ:

  • ಸಹಾಯಕ ವ್ಯವಸ್ಥಾಪಕ- 6 ಹುದ್ದೆಗಳು
  • ತಾಂತ್ರಿಕ ಅಧಿಕಾರಿ- 2 ಹುದ್ದೆಗಳು
  • ವಿಸ್ತರಣಾಧಿಕಾರಿ ಗ್ರೇಡ್3- 8 ಹುದ್ದೆಗಳು
  • ರಸಾಯನಶಾಸ್ತ್ರಜ್ಞ ಗ್ರೇಡ್2- 3 ಹುದ್ದೆಗಳು
  • ಜೂನಿಯರ್ ಸಿಸ್ಟಮ್ ಆಪರೇಟರ್- 3 ಹುದ್ದೆಗಳು
  • ಆಡಳಿತ ಸಹಾಯಕ ಗ್ರೇಡ್2- 2 ಹುದ್ದೆಗಳು
  • ಮಾರ್ಕೆಟಿಂಗ್ ಸಹಾಯಕ ಗ್ರೇಡ್2- 2 ಹುದ್ದೆಗಳು
  • ಜೂನಿಯರ್ ತಂತ್ರಜ್ಞ- 8 ಹುದ್ದೆಗಳು
  • ಮಿಲ್ಕ್ ಕೊರಿಯರ್ಸ್- 6 ಹುದ್ದೆಗಳು

ಶೈಕ್ಷಣಿಕ ಅರ್ಹತೆಗಳು:

  • ಸಹಾಯಕ ವ್ಯವಸ್ಥಾಪಕ – B.V.Sc
  • ತಾಂತ್ರಿಕ ಅಧಿಕಾರಿ- B.Sc , B.Tech (DT)
  • ವಿಸ್ತರಣಾಧಿಕಾರಿ ಗ್ರೇಡ್3- ಯಾವುದೇ ಪದವಿ
  • ರಸಾಯನಶಾಸ್ತ್ರಜ್ಞ ಗ್ರೇಡ್2- B.Sc
  • ಜೂನಿಯರ್ ಸಿಸ್ಟಮ್ ಆಪರೇಟರ್- B.Sc, BCA
  • ಆಡಳಿತ ಸಹಾಯಕ ಗ್ರೇಡ್2- ಯಾವುದೇ ಪದವಿ
  • ಮಾರ್ಕೆಟಿಂಗ್ ಸಹಾಯಕ ಗ್ರೇಡ್2- ಬಿ.ಕಾಂ, ಬಿ.ಬಿ.ಎ
  • ಜೂನಿಯರ್ ತಂತ್ರಜ್ಞ- ಎಸ್.ಎಸ್.ಎಲ್.ಸಿ., ಐ.ಟಿ.ಐ
  • ಮಿಲ್ಕ್ ಕೊರಿಯರ್ಸ್​- ಎಸ್.ಎಸ್.ಎಲ್.ಸಿ

ವಯೋಮಿತಿ:

KMF ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:

  • SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷಗಳು
  • Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷಗಳು

ಅರ್ಜಿ ಶುಲ್ಕ:

  • SC/ST/Cat-I/PH ಅಭ್ಯರ್ಥಿಗಳಿಗೆ: ರೂ.500/-
  • ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.1000/-

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವೇತನ:

  • ಸಹಾಯಕ ವ್ಯವಸ್ಥಾಪಕ – ರೂ.52650 ರಿಂದ 97100/-
  • ತಾಂತ್ರಿಕ ಅಧಿಕಾರಿ- ರೂ.43100 ರಿಂದ 83900/-
  • ವಿಸ್ತರಣಾಧಿಕಾರಿ ಗ್ರೇಡ್-3- ರೂ.33450 ರಿಂದ 62600/-
  • ರಸಾಯನಶಾಸ್ತ್ರಜ್ಞ ಗ್ರೇಡ್-2- ರೂ.27650 ರಿಂದ 52650/-
  • ಜೂನಿಯರ್ ಸಿಸ್ಟಮ್ ಆಪರೇಟರ್- ರೂ.27650 ರಿಂದ 52650/-
  • ಆಡಳಿತ ಸಹಾಯಕ ಗ್ರೇಡ್2- ರೂ.27650 ರಿಂದ 52650/-
  • ಮಾರ್ಕೆಟಿಂಗ್ ಸಹಾಯಕ ಗ್ರೇಡ್2- ರೂ.27650 ರಿಂದ 52650/-
  • ಜೂನಿಯರ್ ತಂತ್ರಜ್ಞ- ರೂ.21400 ರಿಂದ 42000/-

ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್​ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕ:

ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಏಪ್ರಿಲ್ 25, 2023

ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್‌ಗಳು:

Follow Us
Web contact
Web contact

TV9 Kannada

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ