Recruitment 2021: ವಿಪ್ರೋದಲ್ಲಿ ಉದ್ಯೋಗಾವಕಾಶ: ವೇತನ ಬರೋಬ್ಬರಿ 3.5 ಲಕ್ಷ ರೂ.

Wipro Recruitment 2021: ಕಳೆದ ಆರು ತಿಂಗಳಲ್ಲಿ ವಿಪ್ರೋ ಕಂಪೆನಿಯ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಪ್ರಸ್ತುತ ನೇಮಕಾತಿ ಕಾರ್ಯಕ್ರಮಕ್ಕೆ ಅರ್ಹರಾಗಿರುವುದಿಲ್ಲ.

Recruitment 2021: ವಿಪ್ರೋದಲ್ಲಿ ಉದ್ಯೋಗಾವಕಾಶ: ವೇತನ ಬರೋಬ್ಬರಿ 3.5 ಲಕ್ಷ ರೂ.
Wipro
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 28, 2021 | 5:20 PM

Recruitment 2021: ದೇಶದ ಪ್ರಮುಖ ಐಟಿ ಕಂಪೆನಿ ವಿಪ್ರೋ ಎಲೈಟ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಅಡಿಯಲ್ಲಿ ಹೊಸ ನೇಮಕಾತಿ ಪ್ರಕಟಣೆ (Wipro Recruitment 2021) ಹೊರಡಿಸಿದೆ. ಈ ಉದ್ಯೋಗಗಳಿಗಾಗಿ ಹೊಸದಾಗಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಪದವೀಧರರು ಅರ್ಜಿ ಸಲ್ಲಿಸಬಹುದು. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, BE / B. Tech (ಕಡ್ಡಾಯ ಪದವಿ) / ME / M. ಟೆಕ್ (5-ವರ್ಷದ ಸಮಗ್ರ ಕೋರ್ಸ್) ಪದವಿ ಮುಗಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗೆಯೇ ಫ್ಯಾಷನ್ ಟೆಕ್ನಾಲಜಿ, ಟೆಕ್ಸ್​ಟೈಲ್ ಎಂಜಿನಿಯರಿಂಗ್, ಅಗ್ರಿಕಲ್ಚರ್ ಮತ್ತು ಫುಡ್​ ಟೆಕ್ನಾಲಜಿ ಪದವಿ ಪಡೆದವರೂ ಸಹ ಅರ್ಜಿ ಸಲ್ಲಿಸಬಹುದು ಎಂದು ವಿಪ್ರೋ ಕಂಪೆನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಹತೆ: ಈ ನೇಮಕಾತಿಗೆ ಎಂಜಿನಿಯರಿಂಗ್ ಪದವಿ ಮುಗಿಸಿರುವ ಪದವೀಧರಿಂದ ಅರ್ಜಿ ಆಹ್ವಾನಿಸಿದರೂ, ಅದಕ್ಕೂ ಕೆಲ ಮಾನದಂಡಗಳನ್ನು ಸೂಚಿಸಿದೆ. ಅದರಂತೆ ಅರ್ಜಿದಾರರು ಹತ್ತನೇ ತರಗತಿ, 12 ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಶೇ 60 ರಷ್ಟು ಅಂಕಗಳನ್ನು ಪಡೆದಿರಬೇಕಾಗುತ್ತದೆ. ಹಾಗೆಯೇ ಶಿಕ್ಷಣದಲ್ಲಿ ಮೂರು ವರ್ಷಗಳ ಅಂತರವನ್ನು ಸಹ ಅನುಮತಿಸಲಾಗಿದೆ.

ವಯೋಮಿತಿ: ಶೈಕ್ಷಣಿಕ ಮಾನದಂಡಗಳ ಹೊರತಾಗಿ, ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ಅರ್ಜಿದಾರನ ವಯಸ್ಸು 25 ವರ್ಷ ಮೀರಿರಬಾರದು.

ಅನರ್ಹರು: ಕಳೆದ ಆರು ತಿಂಗಳಲ್ಲಿ ವಿಪ್ರೋ ಕಂಪೆನಿಯ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಪ್ರಸ್ತುತ ನೇಮಕಾತಿ ಕಾರ್ಯಕ್ರಮಕ್ಕೆ ಅರ್ಹರಾಗಿರುವುದಿಲ್ಲ ಎಂದು ಕಂಪೆನಿ ತಿಳಿಸಿದೆ.

ನೇಮಕಾತಿ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಆಯ್ಕೆ ಮಾಡಲು, ವಿಪ್ರೋ ಮೂರು ವಿಭಾಗಗಳನ್ನು ಒಳಗೊಂಡಿರುವ ಆನ್‌ಲೈನ್ ಮೌಲ್ಯಮಾಪನವನ್ನು ನಡೆಸುತ್ತದೆ. 1-ಸಾಮರ್ಥ್ಯ ಪರೀಕ್ಷೆ (Aptitude Test) 2-ಲಿಖಿತ ಸಂವಹನ ಪರೀಕ್ಷೆ (Written Communication Test) 3-ಆನ್‌ಲೈನ್ ಪ್ರೋಗ್ರಾಮಿಂಗ್ ಪರೀಕ್ಷೆ (Online Programming Test)

ವೇತನ: ಆಯ್ಕೆಯಾದ ‘ಪ್ರಾಜೆಕ್ಟ್ ಎಂಜಿನಿಯರ್’ಗಳಿಗೆ ಕಂಪೆನಿಯು ವಾರ್ಷಿಕ 3.5 ಲಕ್ಷ ರೂ. ವೇತನ ನೀಡಲಿದೆ.

ಪ್ರಮುಖ ದಿನಾಂಕ: ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15, 2021 ಕೊನೆಯ ದಿನಾಂಕ. ಹಾಗೆಯೇ ಆನ್​ಲೈನ್ ಇಂಟರ್​ವ್ಯೂ ಅನ್ನು ಸೆಪ್ಟೆಂಬರ್ 25 ಮತ್ತು 27 ರ ನಡುವೆ ನಡೆಸುವುದಾಗಿ ಕಂಪೆನಿ ತಿಳಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಪ್ರೋ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು ( ಇಲ್ಲಿ ಕ್ಲಿಕ್ ಮಾಡಿ ).

ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ( ಇಲ್ಲಿ ಕ್ಲಿಕ್ ಮಾಡಿ ).

ಈ ನೇಮಕಾತಿ ಕುರಿತಾದ ಯಾವುದೇ ಸಹಾಯಕ್ಕಾಗಿ, “Elite NTH 2022” ವಿಷಯದೊಂದಿಗೆ Manager.campus@wipro.com ಮೂಲಕ ಸಂಪರ್ಕಿಸಬಹುದು.

ಇದನ್ನೂ ಓದಿ: T20 ವಿಶ್ವಕಪ್ ಅರ್ಹತಾ​ ಪಂದ್ಯ: 20 ಓವರ್​ನಲ್ಲಿ ಕೇವಲ 32 ರನ್​..!

ಇದನ್ನೂ ಓದಿ: India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

(Wipro Company invites applications for fresher’s hiring program)