2020ನೇ ಸಾಲಿನ ಸಿನಿಮಾಗಳಿಗೆ ಶುಕ್ರವಾರ (ಜುಲೈ 22) ರಾಷ್ಟ್ರ ಪ್ರಶಸ್ತಿ (National Film Awards) ಘೋಷಿಸಲಾಗಿದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ (68th National Film Awards) 30 ಭಾಷೆಗಳ 300 ಫೀಚರ್ ಫಿಲ್ಮ್, 150 ನಾನ್-ಫೀಚರ್ ಫಿಲ್ಮ್ ಸೇರಿ 400ಕ್ಕೂ ಅಧಿಕ ಸಿನಿಮಾಗಳು ಅರ್ಜಿ ಸಲ್ಲಿಸಿದ್ದವು. ‘ಡೊಳ್ಳು’ (Dollu Kannada Cinema) ಸಿನಿಮಾ ‘ಕನ್ನಡದ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದಿದೆ. ಈ ಚಿತ್ರಕ್ಕೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ನಿರ್ಮಾಣ ಮಾಡಿದ್ದಾರೆ. ‘ದ ಲಾಂಗೆಸ್ಟ್ ಕಿಸ್’ ಪುಸ್ತಕಕ್ಕೆ ‘ಸಿನಿಮಾ ಕುರಿತು ಅತ್ಯುತ್ತಮ ಕೃತಿ’ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.
ಅಜಯ್ ದೇವಗನ್ (ತಾನಾಜಿ: ದಿ ಅನ್ಸಂಗ್ ಹೀರೋ) ಹಾಗೂ ಸೂರ್ಯ (ಸೂರರೈ ಪೋಟ್ರು) ‘ಅತ್ಯುತ್ತಮ ನಟ’ ಪ್ರಶಸ್ತಿ ಹಂಚಿಕೊಂಡಿದ್ದಾರೆ. ‘ಸೂರರೈ ಪೋಟ್ರು’ ಚಿತ್ರದಲ್ಲಿನ ನಟನೆಗಾಗಿ ಅಪರ್ಣಾ ಬಾಲಮುರಳಿ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಅಯ್ಯಪ್ಪನುಮ್ ಕೋಶಿಯುಂ’ ಚಿತ್ರದಲ್ಲಿನ ಅಭಿನಯಕ್ಕೆ ಬಿಜು ಮೆನನ್ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಿಳು ನಟಿ ಲಕ್ಷ್ಮೀ ಪ್ರಿಯಾ ಚಂದ್ರಮೌಳಿ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ನೀಡಲಾಗಿದೆ.
ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಚಿತ್ರಕ್ಕೆ ‘ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಿನಿಮಾದಲ್ಲಿ ವಿಜಯ್ ಅವರು ಭಿನ್ನವಾದ ಪಾತ್ರ ಮಾಡಿದ್ದಾರೆ. ಅವರು ಈ ಹಿಂದೆ ನಟಿಸಿದ್ದ ‘ನಾತಿಚರಾಮಿ’, ‘ಹರಿವು’ ಸಿನಿಮಾಗಳು ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದವು. ಅಂಥ ನಟ ಇಂದು ನಮ್ಮೊಂದಿಗೆ ಇಲ್ಲ ಎಂಬುದು ನೋವಿನ ಸಂಗತಿ.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ:
ಅತ್ಯುತ್ತಮ ನಟ: ಅಜಯ್ ದೇವಗನ್ ಮತ್ತು ಸೂರ್ಯ
ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ
ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು
ಅತ್ಯುತ್ತಮ ಕಥಾಚಿತ್ರ: ಸೂರರೈ ಪೋಟ್ರು
ಅತ್ಯುತ್ತಮ ಜನಪ್ರಿಯ ಚಿತ್ರ: ತಾನಾಜಿ
ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್ ಕೆ.ಆರ್.
ಅತ್ಯುತ್ತಮ ಸಿನಿಮಾಸ್ನೇಹಿ ರಾಜ್ಯ: ಮಧ್ಯ ಪ್ರದೇಶ
ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು ಕನ್ನಡ ಸಿನಿಮಾ
ಅತ್ಯುತ್ತಮ ಚಿತ್ರಕಥೆ: ಶಾಲಿನಿ ಉಷಾ ನಾಯರ್, ಸುಧಾ ಕೊಂಗರು (ಸೂರರೈ ಪೋಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ (ಅಯ್ಯಪ್ಪನುಂ ಕೋಶಿಯುಂ)
ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್ ದೇಶಪಾಂಡೆ (ಮಿ ವಸಂತ್ ರಾವ್)
ಅತ್ಯುತ್ತಮ ಮಕ್ಕಳ ಸಿನಿಮಾ: ಸುಮಿ (ಮರಾಠಿ)
ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)
ಅತ್ಯುತ್ತಮ ತುಳು ಸಿನಿಮಾ: ಜೀಟಿಗೆ
Published On - 4:46 pm, Fri, 22 July 22