ಹೇಗಿದ್ದಾರೆ ನೋಡಿ ಅಜಿತ್ ಮಗಳು ಅನೌಷ್ಕಾ; ಶೀಘ್ರವೇ ಚಿತ್ರರಂಗಕ್ಕೆ ಎಂಟ್ರಿ?

ಪಿ.ವಿ. ಸಿಂಧು ಅವರ ವಿವಾಹದಲ್ಲಿ ಅಜಿತ್ ಕುಮಾರ್ ಅವರ ಕುಟುಂಬದ ಭಾಗವಹಿಸುವಿಕೆ ಸುದ್ದಿಯಾಗಿದೆ. ಅಜಿತ್ ಅವರ ಮಗಳು ಅನೌಷ್ಕಾ ಅವರ ಭವಿಷ್ಯದ ಸಿನಿಮಾ ವೃತ್ತಿಪರ ಜೀವನದ ಬಗ್ಗೆ ಚರ್ಚೆ ನಡೆಯುತ್ತಿದೆ. ಅನೌಷ್ಕಾ ಅವರು ಪ್ರೊಡಕ್ಷನ್ ಹೌಸ್ ಆರಂಭಿಸಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಹೇಗಿದ್ದಾರೆ ನೋಡಿ ಅಜಿತ್ ಮಗಳು ಅನೌಷ್ಕಾ; ಶೀಘ್ರವೇ ಚಿತ್ರರಂಗಕ್ಕೆ ಎಂಟ್ರಿ?
ಅಜಿತ್ ಕುಟುಂಬ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 26, 2024 | 6:30 AM

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸಮಾರಂಭದಲ್ಲಿ ಹಲವು ಗಣ್ಯರು, ಸಿನಿಮಾ ತಾರೆಯರು ಪಾಲ್ಗೊಂಡಿದ್ದರು. ಅಲ್ಲದೇ ಸ್ಟಾರ್ ಹೀರೋ ಅಜಿತ್ ತಮ್ಮ ಕುಟುಂಬ ಸಮೇತ ಪಿವಿ ಸಿಂಧು ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಜಿತ್ ಅವರು ತಮ್ಮ ಪತ್ನಿ, ಪುತ್ರಿ ಮತ್ತು ಪುತ್ರನೊಂದಿಗೆ ಸಿಂಧು ಮದುವೆಯಲ್ಲಿ ಪಾಲ್ಗೊಂಡಿರುವ ಫೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಅಜಿತ್ ಮಗಳು ನಾಯಕಿ ಆಗಬೇಕು ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ.

ಕಾಲಿವುಡ್‌ನ ಸ್ಟಾರ್ ನಟರಲ್ಲಿ ಅಜಿತ್ ಕೂಡ ಒಬ್ಬರು. ಅಜಿತ್ ಸತತವಾಗಿ ಸಿನಿಮಾ ಮಾಡುವ ಮೂಲಕ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದ್ದಾರೆ. ಅಜಿತ್ ಅಭಿನಯದ ಸಿನಿಮಾಗಳು ತೆಲುಗಿನಲ್ಲೂ ಡಬ್ ಆಗಿದ್ದು ಅಲ್ಲಿನ  ಪ್ರೇಕ್ಷಕರ ಮನಸೂರೆಗೊಳ್ಳುತ್ತಿವೆ. ಈ ಸಿನಿಮಾಗೆ ಅಭಿಮಾನಿಗಳಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದರಿಂದ ಈಗ ಏಕಕಾಲಕ್ಕೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಜಿತ್ ಸಿನಿಮಾಗಳಲ್ಲಿ ನಟಿಸುತ್ತಲೇ ಕಾರ್ ರೇಸಿಂಗ್ ನತ್ತಲೂ ಗಮನ ಹರಿಸುತ್ತಿದ್ದಾರೆ.

ಈ ನಡುವೆ ಅಜಿತ್ ಮಗಳು ಲೇಟೆಸ್ಟ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಅಜಿತ್ ಅವರ ಮಗಳ ಹೆಸರು ಅನೌಷ್ಕಾ. ಸದ್ಯ ಅಜಿತ್ ಮಗಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಸದ್ಯದಲ್ಲೇ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕಾಲಿವುಡ್​ನಲ್ಲಿ ಕೇಳಿ ಬರುತ್ತಿದೆ. ಸಿನಿಮಾ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಅನೌಷ್ಕಾ ಪ್ರೊಡಕ್ಷನ್ ಹೌಸ್ ಆರಂಭಿಸಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಈ ಯುವತಿ ನಿರ್ಮಾಣ ಕ್ಷೇತ್ರವನ್ನು ಪ್ರವೇಶಿಸಲು ಬಯಸಿದ್ದಾರೆ. ಆದರೆ ಈಕೆಯ ಲುಕ್ ಸ್ಟಾರ್ ಹೀರೋಯಿನ್ ಗಳನ್ನು ಮೀರಿಸುವಂತಿದೆ ಎಂದು ಎಲ್ಲರೂ ಬಯಸುತ್ತಾರೆ.

ಇದನ್ನೂ ಓದಿ: 3.5 ಕೋಟಿ ರೂ. ಬೆಲೆಯ ಕಾರು ಖರೀದಿಸಿದ ಅಜಿತ್; ಹೆಮ್ಮೆಯಿಂದ ಫೋಟೋ ಹಂಚಿಕೊಂಡ ಪತ್ನಿ 

ಅಜಿತ್ ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಜಿತ್ ಅವರ ಇತ್ತೀಚಿನ ಚಿತ್ರ ‘ವಿಡಮುಯಾರ್ಚಿ’. ಕಳೆದ ವರ್ಷ ಶುರುವಾದ ಈ ಚಿತ್ರದ ಶೂಟಿಂಗ್ ಕೆಲವು ತಿಂಗಳುಗಳ ಕಾಲ ವೇಗವಾಗಿ ಸಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರೀಕರಣ ಮಧ್ಯದಲ್ಲಿಯೇ ನಿಂತು ಹೋಗಿತ್ತು. ಅದಾದ ಬಳಿಕ ಮತ್ತೆ ಕೆಲ ತಿಂಗಳ ಹಿಂದೆ ಶೂಟಿಂಗ್ ಶುರುವಾಗಿತ್ತು. ಈ ಚಿತ್ರದ ಕೆಲಸಗಳು ನಡೆಯುತ್ತಿರುವಾಗಲೇ ಅಜಿತ್ ಮುಂದಿನ ಚಿತ್ರಕ್ಕೆ ಕಮಿಟ್ ಆಗಿದ್ದರು. ನಿರ್ದೇಶಕ ಅಧಿಕ್ ರವಿಚಂದ್ರನ್ ಸಿನಿಮಾದಲ್ಲಿ ಸೇರಿಕೊಂಡು ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಗಳ ರಿಲೀಸ್ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ಒಂದು ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.