3.5 ಕೋಟಿ ರೂ. ಬೆಲೆಯ ಕಾರು ಖರೀದಿಸಿದ ಅಜಿತ್; ಹೆಮ್ಮೆಯಿಂದ ಫೋಟೋ ಹಂಚಿಕೊಂಡ ಪತ್ನಿ
ಕಾರುಗಳ ಬಗ್ಗೆ ನಟ ಅಜಿತ್ ಕುಮಾರ್ ಅವರಿಗೆ ವಿಶೇಷ ಕ್ರೇಜ್ ಇದೆ. ಅವರು ಈಗ 3.5 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಈ ಖುಷಿಯ ಕ್ಷಣದ ಫೋಟೋವನ್ನು ಪತ್ನಿ ಶಾಲಿನಿ ಅವರು ಹಂಚಿಕೊಂಡಿದ್ದಾರೆ. ಅಜಿತ್ ಅವರ ಹೊಸ ಕಾರನ್ನು ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಫ್ಯಾನ್ಸ್ ಖಾತೆಗಳಲ್ಲಿ ಈ ಫೋಟೋ ವೈರಲ್ ಆಗಿದೆ.
ಕಾಲಿವುಡ್ ನಟ ಅಜಿತ್ ಕುಮಾರ್ ಅವರಿಗೆ ಕಾರು ಮತ್ತು ಬೈಕ್ ಬಗ್ಗೆ ಎಲ್ಲಿಲ್ಲದ ಕ್ರೇಜ್. ಅವರ ಅಭಿಮಾನಿಗಳಿಗೆ ಈ ವಿಚಾರ ಚೆನ್ನಾಗಿ ಗೊತ್ತು. ಅಜಿತ್ ಬಳಿ ಈಗಾಗಲೇ ಅನೇಕ ಕಾರುಗಳ ಕಲೆಕ್ಷನ್ ಇದೆ. ಈಗ ಅವರ ಐಷಾರಾಮಿ ಕಾರುಗಳ ಪಟ್ಟಿಗೆ ಹೊಸ ಕಾರು ಸೇರ್ಪಡೆ ಆಗಿದೆ. ಈ ಕಾರಿನ ಬೆಲೆ ಬರೋಬ್ಬರಿ 3.5 ಕೋಟಿ ರೂಪಾಯಿ. ಹೊಸ ಕಾರಿನ ಜೊತೆ ನಿಂತು ಅಜಿತ್ ಅವರು ಖುಷಿಯಿಂದ ಪೋಸ್ ನೀಡಿದ್ದಾರೆ. ಆ ಕ್ಷಣದ ಫೋಟೋವನ್ನು ಕ್ಲಿಕ್ಕಿಸಿದ ಪತ್ನಿ ಶಾಲಿನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅಜಿತ್ಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಶಾಲಿನಿ ಅವರು ಈ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಅಜಿತ್ ಖರೀದಿಸಿರುವುದು ಹೊಸ ಪೋರ್ಶಾ 911 GT3 RS ಕಾರು. ಇದರ ಬೆಲೆ ಅಂದಾಜು 3.5 ಕೋಟಿ ರೂಪಾಯಿ. ಪಳಪಳ ಹೊಳೆಯುವ ಕಾರಿನ ಫೋಟೋವನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಇವರ ಕಾರ್ ಕ್ರೇಜ್ ಎಂದಿಗೂ ಕೊನೆ ಆಗುವುದೇ ಇಲ್ಲ’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ‘ಇವರು ತಮ್ಮ ಪ್ಯಾಷನ್ ಮತ್ತು ಫ್ಯಾಮಿಲಿ ಮೇಲೆ ಗಮನ ಹರಿಸುತ್ತಿದ್ದಾರೆ. ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂಬ ಕಮೆಂಟ್ ಕೂಡ ಬಂದಿದೆ.
View this post on Instagram
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಜಿತ್ ಅವರು ತೊಡಗಿಕೊಂಡಿದ್ದಾರೆ. ಆ್ಯಕ್ಷನ್ ಕಥಾಹಂದರ ಇರುವ ‘ವಿದಾಮುಯರ್ಚಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಬಹಳ ದೊಡ್ಡದು. ಈ ಸಿನಿಮಾದಲ್ಲಿ ಕೂಡ ಕಾರಿನ ಆ್ಯಕ್ಷನ್ ಸೀನ್ಗಳು ಇರಲಿವೆ. ಅದರ ಶೂಟಿಂಗ್ ವೇಳೆ ಅಜಿತ್ ಕಾರು ಪಲ್ಟಿ ಆಗಿತ್ತು. ಅದರ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಎಲ್ಲ ಕಾರಣಗಳಿಂದ ‘ವಿದಾಮುಯರ್ಚಿ’ ಹೈಪ್ ಕ್ರಿಯೇಟ್ ಮಾಡಿದೆ.
ಇದನ್ನೂ ಓದಿ: ಶೂಟಿಂಗ್ ವೇಳೆ ನಟ ಅಜಿತ್ ಕಾರು ಅಪಘಾತ; ಭಯಾನಕ ವಿಡಿಯೋ ವೈರಲ್
ಒಂದಷ್ಟು ದಿನಗಳ ಹಿಂದೆ ಅಜಿತ್ ಪತ್ನಿ ಶಾಲಿನಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಗಂಡನ ಜೊತೆ ಇರುವ ಫೋಟೋ ಹಂಚಿಕೊಂಡ ಅವರು ‘ಲವ್ ಯೂ ಫಾರೆವರ್’ ಎಂದು ಕ್ಯಾಪ್ಷನ್ ನೀಡಿದ್ದರು. ಆ ಫೋಟೋ ನೋಡಿ ಅಭಿಮಾನಿಗಳಿಗೆ ಸ್ವಲ್ಪ ಚಿಂತೆ ಆಗಿತ್ತು. ಆದರೆ ಶಾಲಿನಿ ಅವರು ಈಗ ಗುಣಮುಖರಾಗಿದ್ದಾರೆ. ಇತ್ತೀಚೆಗೆ ಶಾಲಿನಿ ಅವರು ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸಿದರು. ಆ ಫೋಟೋವನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.