ಅಭಿಮಾನಿಗಳಿಗೆ ನಿರಾಸೆ: ಅಜಿತ್​-ಪ್ರಶಾಂತ್​ ನೀಲ್​ ಸದ್ಯಕ್ಕೆ ಸಿನಿಮಾ ಮಾಡಲ್ಲ ಎಂದ ಮ್ಯಾನೇಜರ್

ಕಾಲಿವುಡ್​ನ ಸ್ಟಾರ್​ ನಟ ಅಜಿತ್​ ಕುಮಾರ್​ ಅವರು ‘ಕೆಜಿಎಫ್​ 2’ ಡೈರೆಕ್ಟರ್​ ಪ್ರಶಾಂತ್​ ನೀಲ್​ ಜೊತೆ ಕೈ ಜೋಡಿಸುತ್ತಾರೆ ಎಂಬ ಸುದ್ದಿ ಹರಡಿದಾಗ ಅಭಿಮಾನಿಗಳಿಗೆ ಖುಷಿ ಆಗಿತ್ತು. ಆದರೆ ಈಗ ಬೇಸರದ ಸುದ್ದಿ ತಿಳಿದುಬಂದಿದೆ. ಸಿನಿಮಾ ಮಾಡುವ ಬಗ್ಗೆ ಅವರಿಬ್ಬರು ಯಾವುದೇ ಮಾತುಕಥೆ ಮಾಡಿಲ್ಲ ಎಂದು ಆಪ್ತರು ತಿಳಿಸಿದ್ದಾರೆ. ಆದರೆ ಭೇಟಿ ನಡೆದಿದ್ದು ನಿಜ ಎಂದು ಹೇಳಿರುವುದಾಗಿ ವರದಿ ಪ್ರಕಟಗೊಂಡಿದೆ.

ಅಭಿಮಾನಿಗಳಿಗೆ ನಿರಾಸೆ: ಅಜಿತ್​-ಪ್ರಶಾಂತ್​ ನೀಲ್​ ಸದ್ಯಕ್ಕೆ ಸಿನಿಮಾ ಮಾಡಲ್ಲ ಎಂದ ಮ್ಯಾನೇಜರ್
ಅಜಿತ್​ ಕುಮಾರ್​, ಪ್ರಶಾಂತ್​ ನೀಲ್​
Follow us
ಮದನ್​ ಕುಮಾರ್​
|

Updated on: Jul 26, 2024 | 6:02 PM

ಕೆಲವೇ ದಿನಗಳ ಹಿಂದೆ ಅಜಿತ್​ ಕುಮಾರ್​ ಮತ್ತು ಪ್ರಶಾಂತ್​ ನೀಲ್​ ಬಗ್ಗೆ ಒಂದು ನ್ಯೂಸ್​ ಹರಡಿತ್ತು. ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು. ಆ ನ್ಯೂಸ್​ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದರು. ಆದರೆ ಈಗ ಆ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಅಜಿತ್​ ಕುಮಾರ್​ ಹಾಗೂ ಪ್ರಶಾಂತ್​ ನೀಲ್​ ಅವರು ಸಿನಿಮಾ ಮಾಡುವ ಸುಲವಾಗಿ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದು ಅಜಿತ್​ ಅವರ ಮ್ಯಾನೇಜರ್​ ಸುರೇಶ್​ ಚಂದ್ರ ಅವರು ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಭೇಟಿ ಆಗಿದ್ದು ನಿಜ: ಅಂದಹಾಗೆ, ಈ ಗಾಸಿಪ್ ಹರಡಲು ಕಾರಣ ಆಗಿದ್ದು ಅಜಿತ್​ ಕುಮಾರ್​ ಮತ್ತು ಪ್ರಶಾಂತ್​ ನೀಲ್​ ಅವರ ಭೇಟಿ. ಈ ಸೆಲೆಬ್ರಿಟಿಗಳಿಬ್ಬರು ಇತ್ತೀಚೆಗೆ ಭೇಟಿ ಆಗಿದ್ದು ಆಗಿದ್ದು ಹೌದು. ಆದರೆ ಆ ಭೇಟಿಯ ಸಂದರ್ಭದಲ್ಲಿ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಯಲಿಲ್ಲವಂತೆ. ಸದ್ಯಕ್ಕಂತೂ ಅವರಿಬ್ಬರು ಜೊತೆಯಾಗಿ ಸಿನಿಮಾ ಮಾಡುವ ಆಲೋಚನೆ ಹೊಂದಿಲ್ಲ. ಭೇಟಿಯ ವೇಳೆ ಒಬ್ಬರಿಗೊಬ್ಬರು ಪ್ರಶಂಸೆ ವ್ಯಕ್ತಪಡಿಸಿದರು ಎನ್ನಲಾಗಿದೆ.

ಏನದು ಗಾಸಿಪ್​?

ಅಜಿತ್​ ಕುಮಾರ್​ ಅವರು ಪ್ರಶಾಂತ್​ ನೀಲ್​ ಜೊತೆ ಹೊಸ ಸಿನಿಮಾ ಮಾಡಲಿದ್ದು, ಆ ಚಿತ್ರದ ಕಥೆ ‘ಕೆಜಿಎಫ್​ 2’ ಜೊತೆ ಲಿಂಕ್​ ಹೊಂದಿರಲಿದೆ. ಈ ಸಿನಿಮಾವನ್ನು ವಿಜಯ್​ ಕಿರಗಂದೂರು ಅವರು ನಿರ್ಮಾಣ ಮಾಡಲಿದ್ದಾರೆ ಎಂದು ಗಾಸಿಪ್​ ಹರಡಿತ್ತು. ಹಾಗಾಗಿ ಅಭಿಮಾನಿಗಳಿಗೆ ಸಖತ್​ ಖುಷಿ ಆಗಿತ್ತು. ಆದರೆ ಈಗ ನಟನ ಮ್ಯಾನೇಜರ್​ ಕಡೆಯಿಂದ ಸ್ಪಷ್ಟನೆ ಬಂದಿದ್ದು, ಅಜಿತ್​ ಹಾಗೂ ಪ್ರಶಾಂತ್​ ನೀಲ್​ ಒಟ್ಟಿಗೆ ಸಿನಿಮಾ ಮಾಡುತ್ತಿಲ್ಲ ಎಂಬ ವಿಷಯ ತಿಳಿದು ಫ್ಯಾನ್ಸ್​ಗೆ ನಿರಾಸೆ ಆಗಿದೆ.

ಪ್ರಶಾಂತ್​ ನೀಲ್​ಗೆ ಬೇಡಿಕೆ:

ಕನ್ನಡದ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ‘ಉಗ್ರಂ’ ಸಿನಿಮಾದಲ್ಲಿ ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತುಪಡಿಸಿದರು. ನಂತರ ಅವರು ನಿರ್ದೇಶಿಸಿದ ‘ಕೆಜಿಎಫ್​: ಚಾಪ್ಟರ್​ 1’, ‘ಕೆಜಿಎಫ್​: ಚಾಪ್ಟರ್​ 2’ ಹಾಗೂ ‘ಸಲಾರ್’ ಸಿನಿಮಾಗಳಿಂದಾಗಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದರು. ಪ್ರಶಾಂತ್​ ನೀಲ್​ ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದೆ ಎಂಬ ಕಾರಣಕ್ಕೆ ಅವರಿಗೆ ಪರಭಾಷೆಯಲ್ಲೂ ಭಾರಿ ಬೇಡಿಕೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.