ಒಗ್ಗದ ಜೈಲೂಟ; ದಿನೇ ದಿನೇ ತೂಕ ಕಳೆದುಕೊಳ್ಳುತ್ತಿರುವ ನಟ ದರ್ಶನ್
ಮಂಗಳವಾರ ರಾತ್ರಿ ದರ್ಶನ್ ಬೇಗ ಮಲಗಿದ್ದಾರೆ. ಇಂದು (ಜೂನ್ 26) ಬೆಳಿಗ್ಗೆ ಬೇಗ ಎದ್ದಿದ್ದಾರೆ. ಜೈಲಿನ ಸಿಬ್ಬಂದಿ ಬಳಿ ಬಿಸಿ ನೀರನ್ನು ಕೇಳಿ ದರ್ಶನ್ ಪಡೆದಿದ್ದಾರೆ. ಬಳಿಕ ಕೆಲ ಹೊತ್ತು ಬ್ಯಾರಾಕ್ನಲ್ಲಿಯೇ ನಟ ದರ್ಶನ್ ವಾಕಿಂಗ್ ಮಾಡಿದ್ದಾರೆ. ಕುಟುಂಬದವರ ಭೇಟಿ ಬಳಿಕ ಅವರು ಗೆಲುವಾಗಿದ್ದಾರೆ.
ರೇಣುಕಾ ಸ್ವಾಮಿ (Renuka Swamy) ಹತ್ಯೆ ಕೇಸ್ನಲ್ಲಿ ಹಲವು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನ್ ಅವರು ಈಗ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದಾರೆ. ಎಲ್ಲರಿಗೂ ಸಿಗುತ್ತಿರುವ ವ್ಯವಸ್ಥೆಯೇ ದರ್ಶನ್ಗೂ ಸಿಗುತ್ತಿದೆ. ಅವರಿಗೆ ಜೈಲಿನಲ್ಲಿ ಊಟ ಸೇರುತ್ತಿಲ್ಲ. ಹೀಗಾಗಿ ಹಂತ ಹಂತವಾಗಿ ಅವರು ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ. ಹೀಗೊಂದು ವಿಚಾರ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೂನ್ 25ರ ರಾತ್ರಿ ದರ್ಶನ್ ಬೇಗನೇ ಮಲಗಿದ್ದಾರೆ. ಇಂದು (ಜೂನ್ 26) ಬೆಳಿಗ್ಗೆ 5.30ರ ಸುಮಾರಿಗೆ ಎದ್ದಿದ್ದಾರೆ. ಜೈಲಿನ ಸಿಬ್ಬಂದಿ ಬಳಿ ಬಿಸಿ ನೀರನ್ನು ಕೇಳಿ ದರ್ಶನ್ ಪಡೆದಿದ್ದಾರೆ. ಬಳಿಕ ಕೆಲ ಹೊತ್ತು ಬ್ಯಾರಾಕ್ನಲ್ಲಿಯೇ ನಟ ದರ್ಶನ್ ವಾಕಿಂಗ್ ಮಾಡಿದ್ದಾರೆ. ಜೂನ್ 25ರಂದು ದರ್ಶನ್ ಅವರು ಪತ್ನಿ, ಮಗನ ಭೇಟಿ ಮಾಡಿದ್ದಾರೆ. ಆ ಬಳಿಕ ದರ್ಶನ್ ಸ್ವಲ್ಪ ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದಾರೆ.
ದರ್ಶನ್ಗೆ ಜೈಲೂಟ ಒಗ್ಗುತ್ತಿಲ್ಲ. ಆದಾಗ್ಯೂ ಅನಿವಾರ್ಯವಾಗಿ ಇದನ್ನು ಸೇವಿಸಬೇಕಾದ ಸ್ಥಿತಿ ಬಂದೊದಗಿದೆ. ದಿನೇ ದಿನೇ ಅವರು ತೂಕ ಕಳೆದುಕೊಳ್ಳುತ್ತಿದ್ದಾರೆ. ಸಹ ಬಂಧಿಗಳ ಜತೆ ಅಷ್ಟಾಗಿ ಬೆರೆಯದೆ ದರ್ಶನ್ ಒಂಟಿಯಾಗಿ ಕುಳಿತಿದ್ದಾರೆ.
ಪವಿತ್ರಾ ಕಥೆ ಏನು?
ಮಗಳನ್ನ ಕಂಡು ಪವಿತ್ರಾ ಗೌಡ ಕೊಂಚ ನಿರಾಳವಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಅವರು ಕುಗ್ಗಿ ಹೋಗಿದ್ದರು. ಜೂನ್ 25ರಂದು ಪವಿತ್ರಾ ಗೌಡ ಭೇಟಿಗೆ ಅವರ ಮಗಳು ಖುಷಿ ಮೊದಲಾದವರು ಆಗಮಿಸಿದ್ದರು. ಸದ್ಯ ಪವಿತ್ರಾ ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಬ್ಯಾರಕ್ನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸುತ್ತಿದ್ದರು. ಮಗಳು ಖುಷಿ ಭೇಟಿ ಬಳಿಕ ಪವಿತ್ರಾ ಗೌಡ ಮನಸ್ಸು ಕೊಂಚ ಹಗುರವಾಗಿದೆ. ಜೈಲು ಸಿಬ್ಬಂದಿ ನೀಡಿದ್ದ ಮುದ್ದೆ, ಅನ್ನ, ಚಪಾತಿ, ಸಾಂಬರ್, ಮಜ್ಜಿಗೆ ಊಟ ಮಾಡಿ ಮಲಗಿದ್ದರು. ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ನಿದ್ರೆಯಿಂದ ಪವಿತ್ರಾ ಎದ್ದಿದ್ದಾರೆ. ಬ್ಯಾರಕ್ನಲ್ಲಿಯೇ ಕೆಲ ಹೊತ್ತು ವಾಕಿಂಗ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.