AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಕಿರಣ್​ ರಾಜ್​ ಪರಿಚಯಿಸಿದ್ರು ಹೊಸ ಬಟ್ಟೆ ಬ್ರ್ಯಾಂಡ್​; ಇದರ ಹಿಂದಿದೆ ಒಂದೊಳ್ಳೆಯ ಉದ್ದೇಶ

ಕೊವಿಡ್​ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಈಗ ಆರಂಭಿಸಿರೋ ಬಟ್ಟೆ ಬ್ರ್ಯಾಂಡ್​ನಿಂದ ಒಂದಷ್ಟು ಜನರಿಗೆ ಉದ್ಯೋಗ ಸಿಗಲಿದೆ ಅನ್ನೋದು ಕಿರಣ್​ ರಾಜ್​ ಅಭಿಪ್ರಾಯ.

ನಟ ಕಿರಣ್​ ರಾಜ್​ ಪರಿಚಯಿಸಿದ್ರು ಹೊಸ ಬಟ್ಟೆ ಬ್ರ್ಯಾಂಡ್​; ಇದರ ಹಿಂದಿದೆ ಒಂದೊಳ್ಳೆಯ ಉದ್ದೇಶ
ಕಿರಣ್​ ರಾಜ್​
ರಾಜೇಶ್ ದುಗ್ಗುಮನೆ
|

Updated on:Jul 05, 2021 | 3:06 PM

Share

ಧಾರಾವಾಹಿ ಮೂಲಕ ಚಿರಪರಿಚಿತರಾಗಿರುವ ಕಿರಣ್​ ರಾಜ್ ಈಗ KINGS RAMPAGE ಹೆಸರಿನ ಬಟ್ಟೆ ಬ್ರ್ಯಾಂಡ್ ಪರಿಚಯಿಸಿದ್ದಾರೆ. ಇಂದು (ಜುಲೈ 5) ಕಿರಣ್​ ರಾಜ್​ ಜನ್ಮದಿನ. ಈ ವಿಶೇಷ ದಿನದಂದು KINGS RAMPAGE ಬಟ್ಟೆ ಬ್ರ್ಯಾಂಡ್ ಅನಾವರಣಗೊಂಡಿದೆ​. ಕಿರಣ್​ ರಾಜ್​ ಅವರ ವೆಬ್​ ಸೈಟ್​ನಲ್ಲೇ ಈ ಬ್ರ್ಯಾಂಡ್  ಬಟ್ಟೆ ಖರೀದಿಸಬಹುದು. ಅಂದಹಾಗೆ, ಈ ಬ್ರ್ಯಾಂಡ್​ ಪರಿಚಯಿಸುವುದರ ಹಿಂದೆ ಒಂದು ಒಳ್ಳೆಯ ಉದ್ದೇಶವಿದೆ.

ಕೊವಿಡ್​ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಈಗ ಆರಂಭಿಸಿರೋ ಬಟ್ಟೆ ಬ್ರ್ಯಾಂಡ್​ನಿಂದ ಒಂದಷ್ಟು ಜನರಿಗೆ ಉದ್ಯೋಗ ಸಿಗಲಿದೆ ಅನ್ನೋದು ಕಿರಣ್​ ರಾಜ್​ ಅಭಿಪ್ರಾಯ. ‘ಕೊರೊನಾ​ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯಾರಿಗಾದರೂ ಕೆಲಸ ಕೊಡಿಸಿದರೆ ಅದಕ್ಕಿಂತ ದೊಡ್ಡ ಸಹಾಯ ಮತ್ತೊಂದಿಲ್ಲ. ಅನೇಕರು ನಮಗೆ ಫುಡ್​ಕಿಟ್​ ಬೇಡ ಕೆಲಸ ಕೊಡಿಸಿ ಎಂದು ಕೇಳುತ್ತಾರೆ. KINGS RAMPAGE ಬ್ರ್ಯಾಂಡ್​ನಿಂದ ಒಂದಷ್ಟು ಜನರಿಗೆ ಉದ್ಯೋಗ ದೊರೆಯುತ್ತಿದೆ’ ಎನ್ನುತ್ತಾರೆ ಕಿರಣ್​ ರಾಜ್​.

‘ನಾವು ಒಂದಷ್ಟು ಶಾಲೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಪ್ರತಿ ಬಟ್ಟೆ ಖರೀದಿಗೆ ನಾವು ನಿಗದಿಪಡಿಸಿದ ಶಾಲೆಯ ಮಕ್ಕಳಿಗೆ ಒಂದು ಪೆನ್​ ಹಾಗೂ ಬುಕ್​ ಗಿಫ್ಟ್​ ಸಿಗಲಿದೆ. ಈ ಬಟ್ಟೆಯ ಬ್ರ್ಯಾಂಡ್​ನಿಂದ ಬಂದ ಲಾಭ ಸಂಪೂರ್ಣವಾಗಿ ಚ್ಯಾರಿಟಿಗೆ ಹೋಗಲಿದೆ’ ಎನ್ನುತ್ತಾರೆ ಅವರು.

View this post on Instagram

A post shared by Kiran Raj (@itskiranraj)

ಕಿರಣ್ ರಾಜ್ ಜನ್ಮದಿನದ ನಿಮಿತ್ತ ಅವರ ನಟನೆಯ ‘ಬಹದ್ದೂರ್ ಗಂಡು’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್​​​ನಲ್ಲಿ ಕಿರಣ್ ಆ್ಯಕ್ಷನ್ ದೃಶ್ಯಗಳ ಮೂಲಕ ಮಿಂಚಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಪ್ರಸಿದ್ಧ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಯಶಾ ಶಿವಕುಮಾರ್ ಚಿತ್ರದ ನಾಯಕಿ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಈ ಸಿನಿಮಾಗಿದೆ. ಪ್ರಸಿದ್ಧ್ ಸಿನಿಮಾಸ್ ಹಾಗೂ ರಮೇಶ್ ರೆಡ್ಡಿ ಬಹದ್ದೂರ್ ಗಂಡು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: ಅಮ್ಮನ ಮಾತು ಕೇಳಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ‘ಕನ್ನಡತಿ’ ಹೀರೋ ಕಿರಣ್​ ರಾಜ್​!

Happy Birthday Kiran Raj: ಸಖತ್​ ಆ್ಯಕ್ಷನ್​ನಲ್ಲಿ ಮಿಂಚುತ್ತಿದ್ದಾರೆ ಕಿರಣ್​ ರಾಜ್; ಇದಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ

(Actor Kiran Raj Introduce KINGS RAMPAGE Cloth Brand for a good Reason)

Published On - 1:02 pm, Mon, 5 July 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More