ಇಟಲಿಯಲ್ಲಿ ವಿಲ್ಲಾ ಹೊಂದಿದ್ದಾರೆ ಪ್ರಭಾಸ್; ತಿಂಗಳಿಗೆ ಇದರಿಂದ ಬರುವ ಆದಾಯ ಇಷ್ಟೊಂದಾ?

ಪ್ರಭಾಸ್ ಕೂಡ ಇಟಲಿಯಲ್ಲಿ ವಿಲ್ಲಾ ಹೊಂದಿದ್ದಾರೆ. ಇದು ಸಾಕಷ್ಟು ಐಷಾರಾಮಿ ಆಗಿದ್ದು, ಇದರಿಂದ ಅವರಿಗೆ ತಿಂಗಳಿಗೆ ಬಹುದೊಡ್ಡ ಹಣ ಬರುತ್ತಿದೆ.

ಇಟಲಿಯಲ್ಲಿ ವಿಲ್ಲಾ ಹೊಂದಿದ್ದಾರೆ ಪ್ರಭಾಸ್; ತಿಂಗಳಿಗೆ ಇದರಿಂದ ಬರುವ ಆದಾಯ ಇಷ್ಟೊಂದಾ?
ಪ್ರಭಾಸ್
Follow us
ರಾಜೇಶ್ ದುಗ್ಗುಮನೆ
|

Updated on: Jun 24, 2023 | 8:56 AM

ಪ್ರಭಾಸ್ (Prabhas) ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಫೇಮಸ್ ಆಗಿದ್ದಾರೆ. ‘ಬಾಹುಬಲಿ 2’ ಬಳಿಕ ತೆರೆಗೆ ಬಂದ ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ (Adipurush Movie) ಸಿನಿಮಾಗಳು ಕೆಟ್ಟ ವಿಮರ್ಶೆ ಪಡೆದವು. ಆದರೂ ಪ್ರಭಾಸ್​ಗೆ ಬೇಡಿಕೆ ಕಡಿಮೆ ಆಗಿಲ್ಲ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಈ ಮಧ್ಯೆ ಅಚ್ಚರಿಯ ವಿಚಾರ ಒಂದು ಹೊರ ಬಿದ್ದಿದೆ. ಪ್ರಭಾಸ್ ಅವರು ದೂರದ ಇಟಲಿಯಲ್ಲಿ ಐಷಾರಾಮಿ ವಿಲ್ಲಾ ಹೊಂದಿದ್ದಾರಂತೆ. ಇದರಿಂದ ಪ್ರಭಾಸ್​ಗೆ ಭರ್ಜರಿ ಬಾಡಿಗೆ ಬರುತ್ತಿದೆ. ಬಾಡಿಗೆಯ ಮೊತ್ತ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಸ್ಟಾರ್ ಹೀರೋಗಳು ಆಗಾಗ ವಿದೇಶ ಪ್ರಯಾಣ ಮಾಡುತ್ತಾರೆ. ಕೆಲ ಹೀರೋಗಳಿಗೆ ಫೇವರಿಟ್ ಜಾಗ ಇರುತ್ತದೆ. ಅಲ್ಲಿ ಪದೇ ಪದೇ ಭೇಟಿ ನೀಡುತ್ತಾರೆ. ಈ ಕಾರಣಕ್ಕೆ ಅಲ್ಲಿ ಮನೆ ಅಥವಾ ವಿಲ್ಲಾ ಖರೀದಿ ಮಾಡಿರುತ್ತಾರೆ. ಅದೇ ರೀತಿ ಪ್ರಭಾಸ್ ಕೂಡ ಇಟಲಿಯಲ್ಲಿ ವಿಲ್ಲಾ ಹೊಂದಿದ್ದಾರೆ. ಇದು ಸಾಕಷ್ಟು ಐಷಾರಾಮಿ ಆಗಿದ್ದು, ಇದರಿಂದ ಅವರಿಗೆ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ಬಾಡಿಗೆ ಬರುತ್ತದೆ.

ಪ್ರಭಾಸ್ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಪ್ರತಿ ಚಿತ್ರಕ್ಕೆ ದೊಡ್ಡ ಸಂಭಾವನೆ ಪಡೆಯುತ್ತಾರೆ. ತಮ್ಮ ಸೇವಿಂಗ್ಸ್​ನಲ್ಲಿ ಸ್ವಲ್ಪ ಹಣವನ್ನು ಅವರು ಇದರ ಮೇಲೆ ಹೂಡಿಕೆ ಮಾಡಿದ್ದಾರೆ. ಈ ವಿಲ್ಲಾನ ಅವರು ಕೆಲ ವರ್ಷಗಳ ಹಿಂದೆಯೇ ಖರೀದಿ ಮಾಡಿದ್ದರು. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಾಗ ಅವರು ಇಟಲಿಗೆ ಭೇಟಿ ನೀಡುತ್ತಾರೆ. ಆಗ ಅವರು ಇಲ್ಲಿ ಉಳಿದುಕೊಳ್ಳುತ್ತಾರಂತೆ.

ಇದನ್ನೂ ಓದಿ: ‘ಆದಿಪುರುಷ್’ ಸಿನಿಮಾ ನೋಡಲು 5,500 ಕಿಮೀ ಪ್ರಯಾಣಿಸಿದ ಪ್ರಭಾಸ್ ಮಹಿಳಾ ಅಭಿಮಾನಿ

ಪ್ರಭಾಸ್ ಇಲ್ಲದ ಸಮಯದಲ್ಲಿ ಈ ವಿಲ್ಲಾವನ್ನು ಅಲ್ಲಿಗೆ ಬರುವ ಪ್ರವಾಸಿಗರಿಗೆ ಬಾಡಿಗೆಗೆ ನೀಡಲಾಗುತ್ತದೆ. ಇದಕ್ಕಾಗಿ ಅವರು ದೊಡ್ಡ ಮೊತ್ತದ ಚಾರ್ಜ್ ಮಾಡುತ್ತಾರೆ. ತಿಂಗಳಿಗೆ ಸರಾಸರಿ 40 ಲಕ್ಷ ರೂಪಾಯಿ ಆದಾಯ ಇದರಿಂದ ಬರುತ್ತಿದೆ. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ.

ಸದ್ಯ ಪ್ರಭಾಸ್ ಅವರು ‘ಆದಿಪುರುಷ್’ ಸೋಲಿನ ಬೇಸರದಲ್ಲಿದ್ದಾರೆ. ‘ಸಲಾರ್’ ಸಿನಿಮಾ ಸೆಪ್ಟೆಂಬರ್​ನಲ್ಲಿ ತೆರೆಗೆ ಬರುತ್ತಿದ್ದು ಈ ಚಿತ್ರದ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್