ಇಡೀ ವಿಶ್ವವೇ ಒಂದು ಭಾರಿ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ ಚಿತ್ರವೆಂದರೆ ಅದು ‘ಕಾಂತಾರ’ (Kantara) ಚಿತ್ರ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶರಾಗಿ ಕಮಾಲ್ ಮಾಡಿದ ಚಿತ್ರ. ‘ಕಾಂತಾರ’ ಚಿತ್ರದ ಕ್ರೆಜ್ ಇನ್ನು ನಿಂತಿಲ್ಲ. ಈ ಚಿತ್ರದಿಂದ ನಟ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಆಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಪಂಚದಾದ್ಯಂತ ಸಿನಿ ಪ್ರೇಕ್ಷಕರು ‘ಕಾಂತಾರ’ ಚಿತ್ರವನ್ನು ತಮ್ಮ ಮಡಿಲಿಗೆ ಹಾಕಿಕೊಂಡಾಗಿದೆ. ಸದ್ಯ ‘ಕಾಂತಾರ’ ಚಿತ್ರ ಬಿಡುಗಡೆಯಾಗಿ ಇಂದಿಗೆ 100 ದಿನ ಪೂರ್ಣಗೊಳಿಸಿದೆ. ಇಡೀ ‘ಕಾಂತಾರ’ ಚಿತ್ರತಂಡ ಶತ ದಿನೋತ್ಸವದ ಸಂಭ್ರಮದಲ್ಲಿದೆ.
‘ಕಾಂತಾರ’ ಚಿತ್ರ 2022 ಸೆಪ್ಟಂಬರ್ 30 ರಂದು ರಾಜ್ಯಾದ್ಯಂತ ರಿಲೀಸ್ ಆಯಿತು. ಬಳಿಕ ವಿಶ್ವದಾದ್ಯಂತ ಹಂತ ಹಂತವಾಗಿ ರಿಲೀಸ್ ಮಾಡಲಾಯಿತು. ಅತ್ಯಂತ ಕಡಿಮೆ ಬಜೆಟ್ನಲ್ಲಿ ತಯಾರಾದ ಚಿತ್ರ ‘ಕಾಂತಾರ’ ಬರೋಬ್ಬರಿ 400 ಕೋಟಿ. ರೂ. ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲು ಕನ್ನಡದಲ್ಲಿ ತೆರೆಗೆ ಬಂದ ‘ಕಾಂತಾರ’ ಚಿತ್ರ ಬಳಿಕ ಹಿಂದಿ, ತೆಲಗು, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಬಿಡುಗಡೆಯಾಗಿ ಚಿತ್ರ ಸಕ್ಸಸ್ ಕಂಡಿತು. ಈ ಮೂಲಕ ‘ಕಾಂತಾರ’ ಚಿತ್ರ 2022ರ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇದನ್ನೂ ಓದಿ: Kishore: ‘ನಾನು ಕೆಜಿಎಫ್ 2 ಸಿನಿಮಾ ನೋಡಿಲ್ಲ’; ಕಾರಣ ತಿಳಿಸಿದ ‘ಕಾಂತಾರ’ ನಟ ಕಿಶೋರ್
‘ಕಾಂತಾರ’ ಚಿತ್ರದ ಶತ ದಿನೋತ್ಸವದ ಸಂಭ್ರಮವನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಬೆಳಕು..!! ಆದರೆ ಇದು ಬೆಳಕಲ್ಲ 100 ದಿನದ ದರ್ಶನ. ಈ ಪ್ರಯಾಣದುದ್ದಕ್ಕೂ ನಮ್ಮನ್ನೊಂದಿಗೆ ನಿಂತಿದ್ದಕ್ಕೆ ಮತ್ತು ದೈವತ್ವವನ್ನು ಕಂಡುಕೊಂಡಿದ್ದಕ್ಕಾಗಿ ಧನ್ಯವಾದಗಳು. ನಾವು ಯಾವಾಗಲೂ ಪ್ರೀತಿಸುವ ಒಂದು ಚಿತ್ರ. ಅದು ಸಂಪ್ರದಾಯಗಳ ಬಗ್ಗೆ ನಮ್ಮನ್ನು ವಿಸ್ಮಯಗೊಳಿಸಿದೆ. ಈ ವಿಸ್ಮಯಕ್ಕೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ನಾನು ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
‘ಕಾಂತಾರ’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಹೊಂಬಾಳೆ ಪ್ರೊಡಕ್ಷನ್ಸ್ ಕೂಡ ಚಿತ್ರದ ಶತ ದಿನೋತ್ಸವವನ್ನು ಸಂಭ್ರಮಿಸಿದೆ. ಚಿತ್ರದಲ್ಲಿ ದೊಡ್ಡ ತಾರಾ ಬಳಗವೆ ಇದೆ. ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ‘ಕಾಂತಾರ’ ಚಿತ್ರ ಕಂಬಳ, ಪಂಜುರ್ಲಿ ದೈವದ ಗೆಜ್ಜೆ ನಾದ, ಕಾಡು, ಕಾಮಿಡಿ ಹೀಗೆ ಹಲವು ವಿಚಾರಕ್ಕೆ ವಿಶೇಷವೆನಿಸಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:10 pm, Sat, 7 January 23