Updated on: Jan 07, 2023 | 3:58 PM
‘ಧಮಾಕ’ ಸಿನಿಮಾದಿಂದ ಶ್ರೀಲೀಲಾ ಬೇಡಿಕೆ ಹೆಚ್ಚಿದೆ. ರವಿತೇಜ ಅವರ ವೃತ್ತಿಜೀವನದಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ಸಿನಿಮಾ ಇದು ಎಂಬ ಖ್ಯಾತಿ ಈ ಚಿತ್ರಕ್ಕಿದೆ.
‘ಧಮಾಕ’ ಚಿತ್ರ ಶ್ರೀಲೀಲಾ ತೆಲುಗಿನಲ್ಲಿ ನಟಿಸಿದ ಎರಡನೇ ಸಿನಿಮಾ. ಈ ಸಿನಿಮಾದಿಂದ ಅವರಿಗೆ ತೆಲುಗಿನಲ್ಲಿ ಸಾಕಷ್ಟು ಆಫರ್ಗಳು ಬರೋಕೆ ಆರಂಭಿಸಿವೆ.
ಮಹೇಶ್ ಬಾಬು ಅವರ 28ನೇ ಸಿನಿಮಾಗೆ ತ್ರಿವಿಕ್ರಂ ಶ್ರೀನಿವಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಈ ಚಿತ್ರದಲ್ಲಿ ಎರಡನೇ ಹೀರೋಯಿನ್ ಆಗಿ ನಟಿಸಲು ಶ್ರೀಲೀಲಾಗೆ ಆಫರ್ ಬಂದಿತ್ತು.
ಶ್ರೀಲೀಲಾ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದರು. ಆದರೆ, ಈಗ ಅವರು ಈ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ‘ಧಮಾಕ’ ಚಿತ್ರದಿಂದ ಶ್ರೀಲೀಲಾ ಖ್ಯಾತಿ ಹೆಚ್ಚಿದೆ. ಈ ಕಾರಣಕ್ಕೆ ಅವರು ಎರಡನೇ ನಾಯಕಿ ಆಗಿ ನಟಿಸಲು ನೋ ಎಂದಿದ್ದಾರೆ.
ಶ್ರೀಲೀಲಾ ತೆಲುಗು ನಾಡಿಗೆ ತೆರಳಿದರೂ ಕನ್ನಡದ ಬಗೆಗಿನ ಪ್ರೀತಿ ಮರೆತಿಲ್ಲ. ಅವರು ಅಲ್ಲಿಯೂ ಕನ್ನಡದ ಭಾಷೆ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು.