ಹೀರೋ ಆಗುವುದಕ್ಕೂ ಮೊದಲು ಗಾರ್ಮೆಂಟ್ನಲ್ಲಿ ಕೆಲಸ; ಈಗ 350 ಕೋಟಿ ರೂ. ಒಡೆಯ
ಅನೇಕರು ಬೀದಿಯಲ್ಲಿ ಮಲಗಿ ದಿನಗಳನ್ನು ಕಳೆದವರಿದ್ದಾರೆ. ಈ ಸಾಲಿನಲ್ಲಿ ಕಾಲಿವುಡ್ನ ಸ್ಟಾರ್ ಹೀರೋ ಕೂಡ ಇದ್ದಾರೆ. ಈಗ ನಾವು ಹೇಳುತ್ತಿರುವ ಹೀರೋನ ಆಸ್ತಿ ಬರೋಬ್ಬರಿ 350 ಕೋಟಿ ರೂಪಾಯಿ! ಆ ಬಗ್ಗೆ ಇಲ್ಲಿದೆ ಮಾಹಿತಿ.
ಸಿನಿಮಾದಲ್ಲಿ ಕೆಲಸ ಮಾಡುತ್ತೇನೆ ಎಂದು ಯೋಚಿಸದೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು ಬಹಳ ಮಂದಿ ಇದ್ದಾರೆ. ಈಗ ಸೂಪರ್ ಸ್ಟಾರ್ ಆದ ಅನೇಕರಿಗೆ ಸಿನಿಮಾ ನೋಡಲು ಟಿಕೆಟ್ ಕೊಳ್ಳುವ ಸ್ಥಿತಿಯೂ ಇರಲಿಲ್ಲ. ಅನೇಕರು ಬೀದಿಯಲ್ಲಿ ಮಲಗಿ ದಿನಗಳನ್ನು ಕಳೆದವರಿದ್ದಾರೆ. ಈ ಸಾಲಿನಲ್ಲಿ ಕಾಲಿವುಡ್ನ ಸ್ಟಾರ್ ಹೀರೋ ಕೂಡ ಇದ್ದಾರೆ. ಈಗ ನಾವು ಹೇಳುತ್ತಿರುವ ಹೀರೋನ ಆಸ್ತಿ ಬರೋಬ್ಬರಿ 350 ಕೋಟಿ ರೂಪಾಯಿ! ಆ ಬಗ್ಗೆ ಇಲ್ಲಿದೆ ಮಾಹಿತಿ.
ನಾವು ಹೇಳುತ್ತಿರೋದು ಬಹಳ ಕಷ್ಟಪಟ್ಟು ಮೇಲೆ ಬಂದ ಓರ್ವ ನಟನ ಬಗ್ಗೆ. ಅವರು ಬೇರಾರೂ ಅಲ್ಲ ಕಾಲಿವುಡ್ ನಟ ಸೂರ್ಯ. ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಇವರು. ಇವರ ಆಸ್ತಿ 350 ಕೋಟಿ ರೂಪಾಯಿ. ಸೂರ್ಯನ ತಂದೆಯೂ ಹೀರೋ. ಸೂರ್ಯ ತಂದೆಯ ಹಾದಿಯಲ್ಲೇ ನಟನೆ ಕ್ಷೇತ್ರದಲ್ಲೂ ತೊಡಗಿಸಿಕೊಂಡರು. ತಾವು ಇಷ್ಟು ದೊಡ್ಡ ಸೂಪರ್‌ಸ್ಟಾರ್ ಆಗುತ್ತಾರೆ ಎಂದು ಅವರು ಭಾವಿಸಿರಲಿಲ್ಲ. ಸೂರ್ಯ ಈ ಮೊದಲು ಗಾರ್ಮೆಂಟ್ಸ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.
ಸೂರ್ಯ 23 ಜುಲೈ 1975 ರಂದು ಚೆನ್ನೈನಲ್ಲಿ ಜನಿಸಿದರು. ಇವರು ತಮಿಳು ನಟ ಶಿವಕುಮಾರ್ ಅವರ ಪುತ್ರ. ಸೂಪರ್ ಸ್ಟಾರ್ ಆಗುತ್ತೇನೆ ಎಂದು ಸೂರ್ಯ ಅಂದುಕೊಂಡಿರಲಿಲ್ಲ. ಅವರು ಈ ಕ್ಷೇತ್ರಕ್ಕೆ ಬರಲು ಸಹ ಸಿದ್ಧರಿರಲಿಲ್ಲ. ಬಿಕಾಂ ಮುಗಿಸಿದ್ದ ಅವರು ನಂತರ ಗಾರ್ಮೆಂಟ್ನಲ್ಲಿ ಮ್ಯಾನೇಜರ್ ಆದರು. ಅವರಿಗೆ ಒಂದು ಕಾಲದಲ್ಲಿ ತಿಂಗಳಿಗೆ ಕೇವಲ 736 ರೂಪಾಯಿ ಸಂಬಳ ಪಡೆಯುತ್ತಿದ್ದರು. ಅದಕ್ಕಾಗಿ ಅವರು 18 ಗಂಟೆಗಳ ಕಾಲ ಕೆಲಸ ಮಾಡಬೇಕಾಯಿತು.
ನಟಿ ಜ್ಯೋತಿಕಾ ನಟ ಸೂರ್ಯ ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ಏಳು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆ. ಅವರ ಮೊದಲ ಚಿತ್ರ 1997ರಲ್ಲಿ ಬಿಡುಗಡೆಯಾದ ‘ನೆರುಕ್ಕು ನೇರ್’.
18 ಗಂಟೆಗಳ ಕೆಲಸ
ಸೂರ್ಯ ಈ ಮೊದಲು ತಮ್ಮ ಮೊದಲ ಸಂಬಳದ ಬಗ್ಗೆ ಮಾಹಿತಿ ನೀಡಿದ್ದರು. ‘ನಾನು ತಿಂಗಳಿಗೆ 736 ರೂ. ದುಡಿಯುತ್ತಿದ್ದೆ. ಅದಕ್ಕಾಗಿ ದಿನಕ್ಕೆ 18 ಗಂಟೆ ಕೆಲಸ ಮಾಡಬೇಕಿತ್ತು. ಜವಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗಲೂ ತಾನು ನಟ ಶಿವಕುಮಾರ್ ಅವರ ಮಗ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ನಾನು ಹೀಗೆ 8 ತಿಂಗಳು ಕೆಲಸ ಮಾಡಿದ್ದೆ’ ಎಂದಿದ್ದರು ಅವರು.
ಇದನ್ನೂ ಓದಿ: ವಯನಾಡ್ ದುರಂತ: ಸೂರ್ಯ ಫ್ಯಾಮಿಲಿ 50 ಲಕ್ಷ ರೂ. ದೇಣಿಗೆ; ಬೇರೆ ಕಲಾವಿದರು ನೀಡಿದ್ದೆಷ್ಟು?
ಸೂರ್ಯ ಇಂದು ದಕ್ಷಿಣ ಚಿತ್ರರಂಗದ ದೊಡ್ಡ ಸ್ಟಾರ್. ಅವನನ್ನು ನೋಡಲು ಜನ ಮುಗಿಬೀಳುತ್ತಾರೆ. ಇಂದು ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಸೂರ್ಯ ಈಗ 350 ಕೋಟಿ ರೂಪಾಯಿ ಒಡೆಯ. ಅವರು 23 ವರ್ಷಗಳಿಂದ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ನಟನೆಯ ‘ಕಂಗುವ’ ಶೀಘ್ರವೇ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.