ಪರೀಕ್ಷಾ ಪ್ರವೇಶ ಪತ್ರದ ಮೇಲೆ ಐಶ್ವರ್ಯಾ ರೈ ಭಾವಚಿತ್ರ; ಫೋಟೋ ಕಂಡು ವಿದ್ಯಾರ್ಥಿನಿ ಶಾಕ್  

ಪರೀಕ್ಷೆ ಸಮೀಪಿಸಿದ್ದರಿಂದ ಹಾಲ್​ಟಿಕೆಟ್ ತರಲು ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರು. ವಿವಿಯವರು ನೀಡಿದ ಪರೀಕ್ಷಾ ಪ್ರವೇಶಪತ್ರ ನೋಡಿ ವಿದ್ಯಾರ್ಥಿನಿ ಶಾಕ್​ಗೆ ಒಳಗಾಗಿದ್ದಾರೆ.

ಪರೀಕ್ಷಾ ಪ್ರವೇಶ ಪತ್ರದ ಮೇಲೆ ಐಶ್ವರ್ಯಾ ರೈ ಭಾವಚಿತ್ರ; ಫೋಟೋ ಕಂಡು ವಿದ್ಯಾರ್ಥಿನಿ ಶಾಕ್  
ಐಶ್ವರ್ಯಾ ರೈ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 11, 2022 | 2:57 PM

ಪ್ರವೇಶ ಪತ್ರ, ಮಾರ್ಕ್ಸ್ ಕಾರ್ಡ್ ಮೇಲೆ ನಟ-ನಟಿಯರ ಫೋಟೋ ಪ್ರಿಂಟ್​ ಆಗಿ ಅದ್ವಾನ ಆಗೋದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಈ ಮೊದಲು ಅನೇಕ ಕಡೆಗಳಲ್ಲಿ ಈ ರೀತಿಯ ತೊಂದರೆಗಳು ಉಂಟಾದ ಉದಾಹರಣೆ ಇದೆ. ಈಗ ಮತ್ತದೇ ಘಟನೆ ಮರುಕಳಿಸಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೊಬ್ಬಳ ಪರೀಕ್ಷಾ ಪ್ರವೇಶ ಪತ್ರದಲ್ಲಿ ಬಾಲಿವುಡ್​ ನಟಿ ಐಶ್ವರ್ಯಾ ರೈ (Aishwarya Rai) ಫೋಟೋ ಇತ್ತು. ಈ ಪರೀಕ್ಷಾ ಹಾಲ್​ಟಿಕೆಟ್​ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಈ ಕೆಲಸದ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಬಿಹಾರದ ಕೊಯಲಾಂಚಲ್ ವಿಶ್ವವಿದ್ಯಾನಿಲಯದ ಕಾಜಲ್ ಕುಮಾರಿ ಅವರು ಉನ್ನತ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಪರೀಕ್ಷೆ ಸಮೀಪಿಸಿದ್ದರಿಂದ ಹಾಲ್​ಟಿಕೆಟ್ ತರಲು ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರು. ವಿವಿಯವರು ನೀಡಿದ ಪರೀಕ್ಷಾ ಪ್ರವೇಶಪತ್ರ ನೋಡಿ ವಿದ್ಯಾರ್ಥಿನಿ ಶಾಕ್​ಗೆ ಒಳಗಾಗಿದ್ದಾರೆ. ಪರಿಹಾರ ನೀಡುವಂತೆ ವಿವಿ ಕುಲಪತಿ ಎಸ್​​ಕೆ ಬಾರನ್ವಾಲ್​ ಬಳಿ ಕೋರಿದ್ದಾರೆ.

ಈ ಕೆಲಸವನ್ನು ವಿಶ್ವವಿದ್ಯಾನಿಲಯದವರು ಮಾಡಿಲ್ಲ ಎಂದು ಎಸ್​ಕೆ ಬಾರನ್ವಾಲ್​ ಸ್ಪಷ್ಟಪಡಿಸಿದ್ದಾರೆ. ‘ವಿವಿಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಯಾರೋ ಈ ರೀತಿ ಮಾಡಿದ್ದಾರೆ. ವಿದ್ಯಾರ್ಥಿನಿ ನೀಡಿದ ಮಾಹಿತಿ ಆಧರಿಸಿ ನಾವು ಅಡ್ಮಿಟ್ ಕಾರ್ಡ್ ನೀಡಿದ್ದೇವೆ. ತಾಂತ್ರಿಕ ದೋಷದಿಂದ ಈ ರೀತಿ ಆಗಿರಬಹುದು’ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋಗೆ ವಿವಿಧ ರೀತಿಯಲ್ಲಿ ಕಮೆಂಟ್​ಗಳು ಬರುತ್ತಿವೆ. ಅನೇಕರು ನಾನಾ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ. ‘ಐಶ್ವರ್ಯಾ ರೈ ಫೋಟೋ ಇದೆ. ಹೀಗಾಗಿ, ಅವರೇ ಬಂದು ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಬರಬಹುದು’ ಎಂದು ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: Anupama Gowda: ಬಿಗ್ ಬಾಸ್ ಮನೆಯಲ್ಲಿ ಮಿಂಚಿದ ಅನುಪಮಾ ಗೌಡ

ಸಿನಿಮಾ ವಿಚಾರಕ್ಕೆ ಬರೋದಾದರೆ ಐಶ್ವರ್ಯಾ ರೈ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅವರು ತುಂಬಾನೇ ಯೋಚಿಸಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ತಮಿಳಿನ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದೆ. ಮಣಿರತ್ನಂ ನಿರ್ದೇಶನದ ಈ ಸಿನಿಮಾದಿಂದ ಐಶ್ವರ್ಯಾ ದೊಡ್ಡ ಮಟ್ಟದ ಗೆಲುವು ಕಂಡರು.

Published On - 2:50 pm, Tue, 11 October 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್