ಸಂಕಷ್ಟದಲ್ಲಿದ್ದ ಪದ್ಮಶ್ರೀ ಮೊಗಿಲಯ್ಯಗೆ ಜ್ಯೋತಿ ರೈ ಆರ್ಥಿಕ ಸಹಾಯ
ಅಶ್ಲೀಲ ವಿಡಿಯೋ ಪ್ರಕರಣದಿಂದ ಮನನೊಂದಿರುವ ನಟಿ ಜ್ಯೋತಿ ರೈ ಇದೀಗ ಆ ಬೇಸರದಿಂದ ಹೊರಬಂದು, ಕಷ್ಟದಲ್ಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ, ಗಾಯಕ ಮೊಗಿಲಯ್ಯ ಅವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣದಿಂದ ಮನನೊಂದಿರುವ ಕನ್ನಡದ ನಟಿ ಜ್ಯೋತಿ ರೈ (Jyoti Rai) ಬೇಸರದ ನಡುವೆಯೂ ಕಲಾವಿದರೊಬ್ಬರಿಗೆ ಸಹಾಯ ಮಾಡಿ ದೊಡ್ಡತನ ಮೆರೆದಿದ್ದಾರೆ. ತೆಲುಗಿನ ಜನಪ್ರಿಯ ಜನಪದ ಗಾಯಕ. ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮುಗಿಲಯ್ಯ ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಮುಗಿಲಯ್ಯಗೆ ಒದಗಿ ಬಂದಿರುವ ಈ ಪರಿಸ್ಥಿತಿ ನೋಡಿ ಹಲವರು ಅಸಾಮಾಧಾನ ವ್ಯಕ್ತಪಡಿಸಿದ್ದರು. ಈಗ ನಟಿ ಜ್ಯೋತಿ ರೈ, ಮುಗಿಲಯ್ಯನ ನೆರವಿಗೆ ಧಾವಿಸಿದ್ದಾರೆ.
ನಕಲಿ ಅಶ್ಲೀಲ ವಿಡಿಯೋ ಪ್ರಕರಣದಿಂದ ಕಳೆದ ಕೆಲವು ದಿನಗಳಿಂದಲೂ ಸುದ್ದಿಯಲ್ಲಿರುವ ಕರ್ನಾಟಕ ಮೂಲದ ನಟಿ ಜ್ಯೋತಿ ರೈ, ಪದ್ಮಶ್ರೀ ಮೊಗಿಲಯ್ಯ ಅವರನ್ನು ಭೇಟಿಯಾಗಿ ಅವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಮಾಹಿತಿ ಹಂಚಿಕೊಂಡಿದ್ದಾರೆ ನಟಿ ಜ್ಯೋತಿ ರೈ.
ಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ಸಹ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದರು. ನಿನ್ನೆ ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತು. ಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಬೆಳಗಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹಾಗಾಗಿ ಶೀಘ್ರವೇ ಅವರೊಟ್ಟಿಗೆ ಭೋಜನಕೂಟವನ್ನು ಏರ್ಪಿಸಿದೆ. ಅವರಿಗೆ ಸಹಾಯ ಮಾಡಿದೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ಮಾಡೋಣ’ ಎಂದಿದ್ದಾರೆ.
ಇದನ್ನೂ ಓದಿ:ಜ್ಯೋತಿ ರೈ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ವೈರಲ್, ಆಕ್ರೋಶಗೊಂಡ ನಟಿ
ಮುಂದುವರೆದು, ‘ನಿಮಗೆ ಈ ವಿಡಿಯೋವನ್ನು ವೈರಲ್ ಮಾಡುವ ತಾಕತ್ತು ಇದೆಯೇ? ಈ ವಿಡಿಯೋ ನಕಲಿ ಅಲ್ಲ ನಿಜವಾದದ್ದು. ‘ಜಗತ್ತು ನನ್ನೆಡೆಗೆ ಅಂಧಕಾರವನ್ನು ದೂಡಿದಾಗ ನನ್ನೊಳಗಿನ ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ನನ್ನೊಳಿಗಿನ ಬೆಳಕು ಉರಿಯಲು ಕತ್ತಲೇ ಇಂಧನ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏರುತ್ತದೆ. ನಕಾರಾತ್ಮಕ ಶಕ್ತಿಯು ಕೇವಲ ಮೆಟ್ಟಿಲು; ನಾನು ಅದರ ಮೇಲೆ ಸಕಾರಾತ್ಮಕತೆಯ ದಿಗಂತದ ಕಡೆಗೆ ಹಾರುತ್ತೇನೆ’ ಎಂದು ಜ್ಯೋತಿ ರೈ ಬರೆದುಕೊಂಡಿದ್ದಾರೆ.
ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಜ್ಯೋತಿ ರೈ, ಅವು ನಕಲಿ ವಿಡಿಯೋಗಳು ಎಂದಿದ್ದು, ಆ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.
ಪದ್ಮಶ್ರೀ ಮೊಗಿಲಯ್ಯ ಬಹಳ ಒಳ್ಳೆಯ ಜನಪದ ಗಾಯಕರು. ಪವನ್ ಕಲ್ಯಾಣ್ ನಟಿಸಿರುವ ‘ಭೀಮ್ಲಾ ನಾಯಕ್’ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಆ ಹಾಡು ಸೂಪರ್ ಹಿಟ್ ಆಗಿದೆ. ಭೀಮ್ಲಾ ನಾಯಕ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಪವನ್ ಕಲ್ಯಾಣ್, ಮೊಗಿಲಯ್ಯಗೆ ಆರ್ಥಿಕ ಸಹಾಯ ಮಾಡಿದ್ದರು. ಆ ಬಳಿಕ ಅವರಿಗೆ ಪದ್ಮಶ್ರೀ ಸಹ ದೊರಕಿತು. ಆದರೆ ಈಗ ಅವರು ಜೀವನ ನಿರ್ವಹಣೆಗೆ ಕಟ್ಟಡ ಕಾರ್ಮಿಕನ ಕಾರ್ಯ ಮಾಡುತ್ತಿದ್ದರು. ಹೈದರಾಬಾದ್ನಲ್ಲಿ ಕಟ್ಟಡ ಕಾರ್ಮಿಕರಾಗಿ ಮೊಗಿಲಯ್ಯ ಕೆಲಸ ಮಾಡುತ್ತಿದ್ದ ವಿಡಿಯೋ ಚಿತ್ರಗಳು ವೈರಲ್ ಆಗಿದ್ದವು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ