AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್​ಗೆ ಬೆಂಬಲಿಸಿ ಬಳಿಕ ಯೂ ಟರ್ನ್ ಹೊಡೆದರಾ ಚಿರಂಜೀವಿ

ಚುನಾವಣೆಗೆ ಸ್ಪರ್ಧಿಸಿರುವ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್​ಗೆ ಚಿರಂಜೀವಿ ಬೆಂಬಲ ಸೂಚಿಸಿದ್ದರು. ಪವನ್​ ಆಶಯಗಳಿಗೆ ಜನ ಬೆಂಬಲಿಸಬೇಕು ಎಂದಿದ್ದರು. ಆದರೆ ಅವರ ಹೊಸ ಹೇಳಿಕೆ ಚಿರಂಜೀವಿ ಯೂ-ಟರ್ನ್ ಹೊಡೆದಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ.

ಪವನ್​ಗೆ ಬೆಂಬಲಿಸಿ ಬಳಿಕ ಯೂ ಟರ್ನ್ ಹೊಡೆದರಾ ಚಿರಂಜೀವಿ
ಪವನ್-ಚಿರು
ಮಂಜುನಾಥ ಸಿ.
|

Updated on: May 11, 2024 | 9:42 AM

Share

ಪವನ್ ಕಲ್ಯಾಣ್ (Pawan Kalyan) ಜನಸೇನಾ ಪಕ್ಷ ಸ್ಥಾಪಿಸಿ ಹತ್ತು ವರ್ಷವಾಗಿದೆ. ಕಳೆದ ಕೆಲವು ಚುನಾವಣೆಗಳಲ್ಲಿ ಪವನ್ ಕಲ್ಯಾಣ್​ಗೆ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಈ ಬಾರಿಯ ಆಂಧ್ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪವನ್ ಪಕ್ಷ ಛಾಪು ಮೂಡಿಸುವ ಸಾಧ್ಯತೆ ಇದೆ. ಪವನ್ ಕಲ್ಯಾಣ್​ಗೆ ಈ ಬಾರಿ ಇತರೆ ರಾಜಕೀಯ ಪಕ್ಷಗಳ ಜೊತೆಗೆ ಸಿನಿಮಾ ರಂಗದ ಸೆಲೆಬ್ರಿಟಿಗಳ ಬೆಂಬಲ ಜೋರಾಗಿಯೇ ದೊರೆತಿದೆ. ಈ ಹಿಂದೆ ಮುನಿಸಿಕೊಂಡಿದ್ದ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಸಹ ಪವನ್ ಕಲ್ಯಾಣ್​ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಬೆಂಬಲ ಸೂಚಿಸಿದ ಕೆಲವೇ ದಿನಗಳಲ್ಲಿ ಚಿರಂಜೀವಿ ಯೂ-ಟರ್ನ್ ಹೊಡೆದರಾ ಎಂಬ ಅನುಮಾನವೂ ಮೂಡಿದೆ.

ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿದ್ದ ಮೆಗಾಸ್ಟಾರ್ ಚಿರಂಜೀವಿ, ಸಹೋದರ ಪವನ್ ಕಲ್ಯಾಣ್ ಪರವಾಗಿ ಮಾತನಾಡಿದ್ದರು. ಪವನ್​ಗೆ ಸಮಾಜ ಸೇವೆ ಮಾಡುವ ಅತೀವ ಆಸೆಯಿದೆಯೆಂದು, ಪವನ್ ಜನಪರ ಕಾಳಜಿ ಇರುವ ವ್ಯಕ್ತಿಯೆಂದು. ಈ ಬಾರಿ ಪವನ್​ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಸಹೋದರ ಪವನ್​ಗೆ ಚಿರಂಜೀವಿ ಬೆಂಬಲ ನೀಡಿದ್ದು ಮೆಗಾಸ್ಟಾರ್ ಅಭಿಮಾನಿಗಳಿಗೆ ಸಂತಸವಾಗಿತ್ತು. ಚಿರಂಜೀವಿ ಮತ್ತೆ ಸಕ್ರಿಯ ರಾಜಕೀಯಕ್ಕೆ ಬಂದರು ಎಂಬ ಸುದ್ದಿ, ಮಾಧ್ಯಮ ವಿಶ್ಲೇಷಣೆಗಳು ಹರಿದಾಡಿದ್ದವು.

ಅದಾದ ಕೆಲವೇ ದಿನಗಳ ಬಳಿಕ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಯ್ತು. ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಹೈದರಾಬಾದ್​ಗೆ ಬಂದ ಚಿರಂಜೀವಿ, ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ತಮಗೆ ಯಾವುದೇ ರಾಜಕೀಯ ಪಕ್ಷದೊಟ್ಟಿಗೆ ಸಂಬಂಧ ಇಲ್ಲವೆಂದು ಚಿರಂಜೀವಿ ಹೇಳಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಪವನ್ ಕಲ್ಯಾಣ್ ಹಾಗೂ ಅವರ ಪಕ್ಷಕ್ಕೆ ಬೆಂಬಲಿಸಿ ಎಂದು ಮನವಿ ಮಾಡಿದ್ದ ಚಿರಂಜೀವಿ, ಈಗ ತಾವು ಯಾವುದೇ ರಾಜಕೀಯ ಪಕ್ಷದೊಟ್ಟಿಗೆ ಗುರುತಿಸಿಕೊಂಡಿಲ್ಲ ಎಂದಿರುವುದು ವೈರುಧ್ಯದ ಹೇಳಿಕೆ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ.

ಇದನ್ನೂ ಓದಿ: ಕಳ್ಳದೊರೆಗಳ ಲೆಕ್ಕ ಸರಿ ಮಾಡಲು ಬಂದ ಪವನ್ ಕಲ್ಯಾಣ್; ಚುನಾವಣೆ ಹೊಸ್ತಿಲಲ್ಲಿ ಪವರ್​ಫುಲ್ ಟೀಸರ್

ಅಸಲಿಗೆ ಚಿರಂಜೀವಿ 2008 ರಲ್ಲಿಯೇ ಪ್ರಜಾರಾಜ್ಯಂ ಪಕ್ಷ ಸ್ಥಾಪಿಸಿದ್ದರು. ಆದರೆ ಅವರಿಗೆ ರಾಜಕೀಯದಲ್ಲಿ ದೊಡ್ಡ ಯಶಸ್ಸು ಸಿಗಲಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದರು. 2012 ರಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆ ಆದರು. ಆದರೆ ಆಂಧ್ರ ಪ್ರದೇಶ ವಿಭಜನೆ ಬಳಿಕ ಚಿರಂಜೀವಿ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡರು. ತಮ್ಮದೇ ಪ್ರಜಾರಾಜ್ಯಂ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿದ್ದ ಪವನ್ ಕಲ್ಯಾಣ್ ಸಹ ಆಗ ಜನಸೇನಾ ಪಕ್ಷ ಸ್ಥಾಪಿಸಿ ಟಿಡಿಪಿ ಹಾಗೂ ಬಿಜೆಪಿ ಪರವಾಗಿ ಪ್ರಚಾರ ಆರಂಭಿಸಿದ ಬಳಿಕವಂತೂ ಚಿರಂಜೀವಿ ರಾಜಕೀಯದಿಂದ ಸಂಪೂರ್ಣವಾಗಿ ವಿಮುಖರಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.

ಪವನ್​ರ ಜನಸೇನಾ ಪಕ್ಷವನ್ನು ಚಿರಂಜೀವಿ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿಂದ ಜೋರಾಗಿ ಹರಿದಾಡಿತ್ತು. ಚಿರಂಜೀವಿ, ಪವನ್ ಪಕ್ಷಕ್ಕೆ ದೇಣಿಗೆ ನೀಡಿದ್ದು ಈ ಅನುಮಾನಗಳಿಗೆ ಪುಷ್ಠಿ ತುಂಬಿತ್ತು. ಆದರೆ ಈಗ ಚಿರಂಜೀವಿ, ತಾವು ರಾಜಕೀಯ ಪಕ್ಷದಿಂದ ದೂರವೇ ಉಳಿಯುವುದಾಗಿ ಹೇಳಿರುವುದು ಪವನ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ