ಎಲ್ಲಾ ಬಿಟ್ಟು ಇನ್​ಸ್ಟಾಗ್ರಾಮ್​ ಬಗ್ಗೆ ಕೆಂಡಕಾರಿದ ನಟಿ ಕಂಗನಾ ರಣಾವತ್

ಕಂಗನಾ ರಣಾವತ್(kangana ranaut) ಒಂದಿಲ್ಲೊಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರು ಅನೇಕರ ಬಗ್ಗೆ ಟೀಕೆ ಮಾಡಿದ್ದಿದಿದೆ. ಈಗ ​ ಅವರು ಇನ್​ಸ್ಟಾಗ್ರಾಮ್​ ಬಗ್ಗೆ ಕಿಡಿಕಾರಿದ್ದಾರೆ. ಇದೊಂದು ಮೂಕ ಪ್ಲಾಟ್​ಫಾರ್ಮ್​ ಎಂದಿದ್ದಾರೆ. ಇದರಲ್ಲಿ ಹಂಚಿಕೊಂಡ ವಿಚಾರಗಳು ಮರುದಿನ ಕಣ್ಮರೆಯಾಗುತ್ತದೆ ಎಂದು ಟೀಕಿಸಿದ್ದಾರೆ.

ಎಲ್ಲಾ ಬಿಟ್ಟು ಇನ್​ಸ್ಟಾಗ್ರಾಮ್​ ಬಗ್ಗೆ ಕೆಂಡಕಾರಿದ ನಟಿ ಕಂಗನಾ ರಣಾವತ್
ಕಂಗನಾ ರಣಾವತ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 11, 2022 | 6:41 PM

ಕಂಗನಾ ರಣಾವತ್(kangana ranaut) ಅವರ ಟ್ವಿಟರ್ ಖಾತೆ ಬ್ಲಾಕ್ ಆಗಿದೆ. ಈ ಕಾರಣಕ್ಕೆ ಇನ್​ಸ್ಟಾಗ್ರಾಮ್​ನಲ್ಲಿ ಅವರು ಸಕ್ರಿಯರಾಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ ಸ್ಟೇಟಸ್​​ಗಳು ನಾಳೆಗೆ ಮಾಯವಾಗುತ್ತದೆ. ಆ ಬಗ್ಗೆ ಅವರು ಅಪಸ್ವರ ತೆಗೆದಿದ್ದಾರೆ. ಟ್ವಿಟರ್​ ಅನ್ನು ಅತ್ಯುತ್ತಮ ಸಾಮಾಜಿಕ ವೇದಿಕೆ ಎಂದು ಕರೆದ ಕೆಲವು ದಿನಗಳ ನಂತರ, ಇದೀಗ ಇನ್​ಸ್ಟಾಗ್ರಾಮ್​ ಕುರಿತು ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ.

‘ಇನ್​​ಸ್ಟಾಗ್ರಾಮ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಿಡುವುದಿಲ್ಲ, ಪೋಸ್ಟ್​ಗಳ ಬಗ್ಗೆ ಬರೆದ ಕಮೆಂಟ್​ಗಳು ಮಾರನೇ ದಿನ ಮಾಯವಾಗುತ್ತದೆ. ನನ್ನಂತಹ ಜನರು ತಮ್ಮ ಆಲೋಚನೆಗಳನ್ನು ಸರಿಯಾಗಿ ದಾಖಲಿಸಲು ಬಯಸುತ್ತಾರೆ. ಆದರೆ ಅದಕ್ಕೆ ಇನ್​ಸ್ಟಾಗ್ರಾಮ್​ ಸೂಕ್ತವಲ್ಲ’ ಎಂದಿದ್ದಾರೆ ಅವರು.

ಕಂಗನಾ ರಣಾವತ್​ ಅವರ ಟ್ವಿಟರ್​ ಖಾತೆಯನ್ನ 2021ರಲ್ಲಿ ಅಮಾನತುಗೊಳಿಸಲಾಗಿದೆ. ‘ಟ್ವಿಟರ್ ಖಾತೆಯನ್ನ ನಿರ್ವಹಿಸಲು ನಿರ್ದಿಷ್ಟ ಮೊತ್ತವನ್ನು ನೀಡಬೇಕು. ಇದರಿಂದ ನಮ್ಮ ಖಾತೆಯು ಸೇಫ್​ ಆಗಿರುತ್ತದೆ. ಜಗತ್ತಿನಲ್ಲಿ ಎಲ್ಲಿಯು ಉಚಿತ ಊಟಗಳಿಲ್ಲ. ನೀವು ಮುಕ್ತವಾಗಿ ಬಳಸುವ ಎಲ್ಲಾ ಪ್ಲಾಟ್​ಫಾರ್ಮ್​ಗಳು ನಿಮ್ಮ ಡಾಟಾವನ್ನು ಕದಿಯುತ್ತವೆ’ ಎಂದಿರುವ ಅವರು ಟ್ವಿಟರ್​ ಕೈಗೊಂಡಿರುವ ಬದಲಾವಣೆಗಳನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ಕಂಗನಾ ರಣಾವತ್: ‘ಮಾಜಿ ಟ್ವಿಟ್ಟರ್​ ಮುಖ್ಯಸ್ಥನ ವಿನಾಶವನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ’

ಕಂಗನಾ ರಣಾವತ್​ ‘ಎಮರ್ಜೆನ್ಸಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್​ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಈ ಸಿನಿಮಾದಲ್ಲಿ ಅನುಪಮ್​ ಖೇರ್​, ಮಹಿಮಾ ಚೌಧರಿ, ವಿಶಾಕ್​ ನಾಯರ್​ ಮತ್ತು ಶ್ರೇಯಸ್​ ತಲ್ಪಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ