ಶ್ರೀಯಾ ಶರಣ್​ ಮಗಳಿಗೆ ರಾಧಾ ಎಂದು ಹೆಸರು ಇಟ್ಟಿದ್ದೇಕೆ? ಇದಕ್ಕಿದೆ ರಷ್ಯಾದ ಕನೆಕ್ಷನ್​

ಶ್ರೀಯಾ ಶರಣ್​ ಅವರು ತಮಗೆ ಹೆಣ್ಣು ಮಗು ಜನಿಸಿದ ವಿಚಾರವನ್ನು ಒಂದೂವರೆ ವರ್ಷಗಳ ಕಾಲ ಮುಚ್ಚಿಟ್ಟಿದ್ದರೂ ಕೂಡ ಈಗ ಆ ಕುರಿತು​ ಮನಬಿಚ್ಚಿ ಮಾತನಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತ, ಮಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಶ್ರೀಯಾ ಶರಣ್​ ಮಗಳಿಗೆ ರಾಧಾ ಎಂದು ಹೆಸರು ಇಟ್ಟಿದ್ದೇಕೆ? ಇದಕ್ಕಿದೆ ರಷ್ಯಾದ ಕನೆಕ್ಷನ್​
ಶ್ರೀಯಾ ಶರಣ್

ಖ್ಯಾತ ನಟಿ ಶ್ರೀಯಾ ಶರಣ್​ ಅವರು ಗುಟ್ಟಾಗಿ ಮುಗು ಮಾಡಿಕೊಂಡರು. ತಾವು ಪ್ರೆಗ್ನೆಂಟ್​ ಆಗಿರುವ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ಹೆಣ್ಣು ಮಗು ಜನಿಸಿ ಒಂದೂವರೆ ವರ್ಷ ಆಗುವವರೆಗೂ ಅವರು ಈ ರಹಸ್ಯವನ್ನು ಕಾಯ್ದುಕೊಂಡಿದ್ದರು. ಇತ್ತೀಚೆಗಷ್ಟೇ ವಿಷಯ ಬಹಿರಂಗ ಆಯಿತು. ವಿಶೇಷ ಏನೆಂದರೆ ತಮ್ಮ ಮಗುವಿಗೆ ರಾಧಾ ಶರಣ್​ ಕೊಸ್ವೀವ್​ ಎಂದು ನಾಮಕರಣ ಮಾಡಿದ್ದಾರೆ. ಹೀಗೆ ಹೆಸರು ಇಡಲು ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ರಾಧಾ ಎಂಬ ಹೆಸರಿಗೆ ರಷ್ಯಾದ ಕನೆಕ್ಷನ್​ ಸಹ ಇದೆ.

ಶ್ರೀಯಾ ಶರಣ್​ ಮದುವೆ ಆಗಿರುವುದು ರಷ್ಯಾದ ಟೆನಿಸ್​ ಆಟಗಾರ ಆಂಡ್ರೀ ಕೊಸ್ಚೀವ್​ ಅವರನ್ನು. ‘ನಮಗೆ ಹೆಣ್ಣು ಮಗು ಜನಿಸಿದೆ ಎಂಬ ವಿಷಯ ನಮ್ಮ ತಾಯಿಗೆ ಗೊತ್ತಾದ ತಕ್ಷಣ ರಾಧಾ ರಾಣಿ ಬರುತ್ತಿದ್ದಾಳೆ ಎಂದು ಅವರು ಹೇಳಿದರು. ಆಗ ನನ್ನ ಪತಿ ಆಂಡ್ರೀಗೆ ಅಚ್ಚರಿ ಆಯಿತು. ನಿಮ್ಮ ತಾಯಿ ಯಾಕೆ ರಷ್ಯಾದ ಹೆಸರನ್ನು ಹೇಳುತ್ತಿದ್ದಾರೆ ಅಂತ ಅವರು ನನ್ನನ್ನು ಕೇಳಿದರು. ರಾಧಾ ಎಂದರೆ ರಷ್ಯಾದ ಹೆಸರಲ್ಲ ಅಂತ ನಾನು ಹೇಳಿದೆ. ರಾಧಾ ಎಂದರೆ ರಷ್ಯನ್​ ಭಾಷೆಯಲ್ಲಿ ಖುಷಿ ಎಂದರ್ಥ ಎಂದು ಅವರು ಹೇಳಿದರು. ಹಾಗಾಗಿ ನಾವು ಅದೇ ಹೆಸರನ್ನು ಮಗಳಿಗೆ ಇಡಲು ನಿರ್ಧರಿಸಿದೆವು. ರಾಧಾ ಶರಣ್​​ ಕೊಸ್ಚೀವ್​ ಎಂಬುದು ನಮ್ಮ ಮಗಳ ಪೂರ್ಣ ಹೆಸರು’ ಎಂದು ಶ್ರೀಯಾ ಶರಣ್​ ಹೇಳಿದ್ದಾರೆ.

ಶ್ರೀಯಾ ಶರಣ್​ ಅವರು ತಮಗೆ ಹೆಣ್ಣು ಮಗು ಜನಿಸಿದ ವಿಚಾರವನ್ನು ಒಂದೂವರೆ ವರ್ಷಗಳ ಕಾಲ ಮುಚ್ಚಿಟ್ಟಿದ್ದರೂ ಕೂಡ ಈಗ ಆ ಕುರಿತು​ ಮನಬಿಚ್ಚಿ ಮಾತನಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತ, ಮಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘2020ರ ಕ್ವಾರಂಟೈನ್​ ತುಂಬಾನೇ ಅದ್ಭುತವಾಗಿತ್ತು. ಇಡೀ ಪ್ರಪಂಚವು ಕಷ್ಟದಲ್ಲಿ ಸಾಗುತ್ತಿರುವಾಗ, ನಮ್ಮ ಪ್ರಪಂಚವು ಬದಲಾಯಿತು. ನಮಗೆ ಆ ಸಂದರ್ಭದಲ್ಲಿ ಹೆಣ್ಣುಮಗುವಾಗಿದೆ’ ಎನ್ನುವ ಮೂಲಕ ತಾವು ತಾಯಿಯಾದ ವಿಚಾರವನ್ನು ಶ್ರೀಯಾ ಬಹಿರಂಗಪಡಿಸಿದರು.

ಶ್ರಿಯಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಇದಲ್ಲದೆ, ಶ್ರಿಯಾ ತೆಲುಗು, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರಿಯಾ ‘ಅರಸು’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರೂಪಾ ಅಯ್ಯರ್​ ನಿರ್ದೇಶನದ ‘ಚಂದ್ರ’ ಸಿನಿಮಾದಲ್ಲಿ ನಟಿಸಿದ್ದರು.

ಇದನ್ನೂ ಓದಿ:

Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್​ ಹೇಳಿಕೆ

Anchor Anasuya: ನಿರೂಪಕಿ ಅನುಸೂಯ ಬಟ್ಟೆ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ನಟ ಕೋಟ ಶ್ರೀನಿವಾಸ ರಾವ್​

Click on your DTH Provider to Add TV9 Kannada