Prabhas: ಪ್ರಭಾಸ್ ನಟನೆಯ ಈ ಐದು ಚಿತ್ರಗಳನ್ನು ನೀವು ಮಿಸ್ ಮಾಡಲೇಬಾರದು..

ಪ್ರಭಾಸ್ ಅವರು ಈ ಮೊದಲು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾಗಳು ಸಾಕಷ್ಟು ಸದ್ದು ಮಾಡಿವೆ. ಆ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

Prabhas: ಪ್ರಭಾಸ್ ನಟನೆಯ ಈ ಐದು ಚಿತ್ರಗಳನ್ನು ನೀವು ಮಿಸ್ ಮಾಡಲೇಬಾರದು..
ಪ್ರಭಾಸ್

Updated on: Jun 16, 2023 | 10:45 AM

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ (Adipurush Movie) ಇಂದು (ಜೂನ್ 16) ರಿಲೀಸ್ ಆಗಿದೆ. ರಾಮಾಯಣದ ಕಥೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಪ್ರಭಾಸ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಈ ಚಿತ್ರ 3ಡಿಯಲ್ಲೂ ಮೂಡಿ ಬಂದಿದೆ ಅನ್ನೋದು ವಿಶೇಷ. ಪ್ರಭಾಸ್ (Prabhas) ಅವರು ಈ ಮೊದಲು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾಗಳು ಸಾಕಷ್ಟು ಸದ್ದು ಮಾಡಿವೆ. ಆ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

ಬಾಹುಬಲಿ

ಪ್ರಭಾಸ್ ನಟನೆಯ ‘ಬಾಹುಬಲಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಎನಿಸಿಕೊಂಡಿತು. ಎರಡು ಪಾರ್ಟ್​​ಗಳಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ರಾಜಮೌಳಿ ಅವರ ನಿರ್ದೇಶನ ಇದೆ. ಈ ಚಿತ್ರ ಬರೆದಿರುವ ಹಲವು ದಾಖಲೆಗಳನ್ನು ಈಗಲೂ ಅಳಿಸಲು ಸಾಧ್ಯವಾಗಿಲ್ಲ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಸಾವಿರಾರು ಕೋಟಿ ರೂಪಾಯಿ. ಈ ಎರಡು ಪಾರ್ಟ್​ಗಳಿಗಾಗಿ ಪ್ರಭಾಸ್ ಹಲವು ವರ್ಷ ಮೀಸಲು ಇಟ್ಟಿದ್ದರು. ಅವರ ಶ್ರಮ ಫಲ ಕೊಟ್ಟಿತ್ತು.

ಮಿರ್ಚಿ

2013ರಲ್ಲಿ ರಿಲೀಸ್ ಆದ ‘ಮಿರ್ಚಿ’ ಸಿನಿಮಾ ಹಿಟ್ ಎನಿಸಿಕೊಂಡಿದೆ. ಪ್ರಭಾಸ್ ವೃತ್ತಿ ಜೀವನಕ್ಕೆ ಈ ಚಿತ್ರ ಸಾಕಷ್ಟು ಮೈಲೇಜ್ ನೀಡಿತು. ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಗಮನ ಸೆಳೆದಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ನಾಯಕಿ.

ಡಾರ್ಲಿಂಗ್​

2010ರಲ್ಲಿ ರಿಲೀಸ್ ಆದ ‘ಡಾರ್ಲಿಂಗ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅವರಿಗೆ ಡಾರ್ಲಿಂಗ್ ಎನ್ನುವ ಪೆಟ್​ನೇಮ್ ಸಿಕ್ಕಿತ್ತು. ಈ ಚಿತ್ರದಲ್ಲಿ ಕಾಜಲ್ ಅಗರ್​ವಾಲ್ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯಶಸ್ಸು ಕಂಡಿತ್ತು.

ಮಿಸ್ಟರ್ ಪರ್ಫೆಕ್ಟ್​

ಪ್ರಭಾಸ್ ನಟನೆಯ ‘ಮಿಸ್ಟರ್ ಪರ್ಫೆಕ್ಟ್’ ಸಿನಿಮಾ ಕೂಡ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಈ ಚಿತ್ರದ ಮೂಲಕ ಪ್ರಭಾಸ್ ಜನಪ್ರಿಯತೆ ಹೆಚ್ಚಿತು.

ಇದನ್ನೂ ಓದಿ: Adipurush: 3ಡಿ ದೃಶ್ಯಗಳಲ್ಲಿ ರಾಮಾಯಣದ ವೈಭವ; ಹೇಗಿದೆ ‘ಆದಿಪುರುಷ್​’ ಚಿತ್ರದ ಫಸ್ಟ್​ ಹಾಫ್​?

‘ಬಿಲ್ಲಾ’

ಬಿಲ್ಲಾ ಸಿನಿಮಾ ಕೂಡ ಪ್ರಭಾಸ್ ಅಭಿಮಾನಿಗಳ ಅಚ್ಚುಮೆಚ್ಚಿನ ಸಿನಿಮಾ. ಈ ಚಿತ್ರ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿತ್ತು. ಪ್ರಭಾಸ್ ವೃತ್ತಿ ಜೀವನಕ್ಕೆ ಮೈಲೇಜ್ ನೀಡಲು ಈ ಸಿನಿಮಾ ಸಹಕಾರಿ ಆಗಿತ್ತು.‘

ವರ್ಷಂ

ಶೋಭನ್ ನಿರ್ದೇಶನದ ‘ವರ್ಷಂ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಪ್ರಭಾಸ್​-ತ್ರಿಷಾ ಮುಖ್ಯಭೂಮಿಕೆ ನಿರ್ವಹಿಸಿದ್ದರು.

ಛತ್ರಪತಿ

ರಾಜಮೌಳಿ ನಿರ್ದೇಶನದ ‘ಛತ್ರಪತಿ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಿಂದ ಪ್ರಭಾಸ್ ಅವರ ವೃತ್ತಿಜೀವನ ಸಂಪೂರ್ಣ ಬದಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us