AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲಾರ್ ಸಿನಿಮಾಕ್ಕೆ ಕೆಲಸ ಮಾಡಿದವರಿಗೆ ವಿಶೇಷ ಉಡುಗೊರೆ ಕೊಟ್ಟ ಪ್ರಭಾಸ್

Salaar: ಪ್ರಭಾಸ್​ರ ಒಳ್ಳೆಯ ವ್ಯಕ್ತಿತ್ವಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ತಮ್ಮ ನಟನೆಯ ಸಿನಿಮಾಕ್ಕೆ ಕೆಲಸ ಮಾಡಿದ ಸಿಬ್ಬಂದಿಗೆ ವೈಯಕ್ತಿಕವಾಗಿ ಉಡುಗೊರೆ ನೀಡಿದ್ದಾರೆ ಪ್ರಭಾಸ್.

ಸಲಾರ್ ಸಿನಿಮಾಕ್ಕೆ ಕೆಲಸ ಮಾಡಿದವರಿಗೆ ವಿಶೇಷ ಉಡುಗೊರೆ ಕೊಟ್ಟ ಪ್ರಭಾಸ್
ಸಲಾರ್
ಮಂಜುನಾಥ ಸಿ.
|

Updated on: Jun 15, 2023 | 4:12 PM

Share

ಪ್ರಭಾಸ್ (Prabhas) ಸ್ವಭಾವತಹ ಮೃದು ವ್ಯಕ್ತಿತ್ವದವರು, ಮಿತ ಭಾಷಿ, ಎಲ್ಲರಿಗೂ ಗೌರವ ಕೊಡುವ ವ್ಯಕ್ತಿತ್ವದವರೆಂದು ಅವರೊಟ್ಟಿಗೆ ಕೆಲಸ ಮಾಡಿದ ಅನೇಕ ನಟ-ನಟಿಯರು, ತಂತ್ರಜ್ಞರು ಹೇಳುತ್ತಾರೆ. ಇವುಗಳ ಜೊತೆಗೆ ಸಹಾಯ ಮಾಡುವ ಗುಣವನ್ನೂ ಸಹ ಹೊಂದಿರುವವರು. ಪ್ರಭಾಸ್​ರ ಸಹಾಯ ಗುಣಕ್ಕೆ ಹೊಸ ಸಾಕ್ಷ್ಯವೊಂದು ಸಿಕ್ಕಿದೆ. ತಮ್ಮ ನಟನೆಯ ಸಿನಿಮಾಕ್ಕೆ ಕೆಲಸ ಮಾಡಿದವರಿಗೆ ಪ್ರಭಾಸ್ ವಿಶೇಷ ಉಡುಗೊರೆ (Gift) ನೀಡಿದ್ದಾರೆ.

ಪ್ರಭಾಸ್ ನಟನೆಯ ಆದಿಪುರುಷ್ (Adipurush) ಸಿನಿಮಾ ನಾಳೆ (ಜೂನ್ 16) ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಇದರ ನಡುವೆ ಪ್ರಭಾಸ್​ರ ಇನ್ನೊಂದು ಸಿನಿಮಾ ಸಲಾರ್​ ಶೂಟಿಂಗ್​ ಸಹ ಬಹುತೇಕ ಪೂರ್ಣಗೊಂಡಿದೆ. ಇದೇ ಖುಷಿಯಲ್ಲಿ ಸಲಾರ್ ಸಿನಿಮಾಕ್ಕಾಗಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರಿಗೆ, ಸೆಟ್ ಬಾಯ್ಸ್, ಮೇಕಪ್ ಆರ್ಟಿಸ್ಟ್, ಫೈಟರ್​ಗಳು ಇನ್ನಿತರೆ ವಿಭಾಗದ ಸಿಬ್ಬಂದಿಗೆ ತಲಾ ಹತ್ತು ಸಾವಿರ ರೂಪಾಯಿ ಇನಾಮನನ್ನು ವೈಯಕ್ತಿಕವಾಗಿ ಪ್ರಭಾಸ್ ನೀಡಿದ್ದಾರೆ. ಪ್ರಭಾಸ್​ರ ಈ ಕಾರ್ಯವನ್ನು ಚಿತ್ರತಂಡ ಹಾಗೂ ಅಭಿಮಾನಿಗಳು ಶ್ಲಾಘಿಸಿದ್ದಾರೆ.

ಸಲಾರ್ ಸಿನಿಮಾವನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಕಳೆದ ಮೂರು ವರ್ಷಗಳಿಂದಲೂ ನಡೆಯುತ್ತಲೇ ಇದೆ. 2020 ರಲ್ಲಿ ಸಿನಿಮಾದ ಅಧಿಕೃತ ಘೋಷಣೆ ಆಗಿತ್ತು, 2021ರ ಜನವರಿಯಲ್ಲಿ ಚಿತ್ರೀಕರಣ ಶುರುವಾಯ್ತು. ಪ್ರಭಾಸ್​ರ ಬಹು ಟೈಟ್ ಶೆಡ್ಯೂಲ್ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಚಿತ್ರೀಕರಣ ಬಹಳ ತಡವಾಗಿದೆ. ಕೆಜಿಎಫ್​ಗೆ ಕ್ಯಾಮೆರಾಮನ್ ಆಗಿದ್ದ ಭುವನ್ ಗೌಡ ಈ ಸಿನಿಮಾಕ್ಕೆ ಕ್ಯಾಮೆರಾಮ್ಯಾನ್ ಆಗಿದ್ದು ಸಂಗೀತವನ್ನು ರವಿ ಬಸ್ರೂರು ನೀಡಿದ್ದಾರೆ.

ಇದನ್ನೂ ಓದಿ:Prabhas: ‘ಆದಿಪುರುಷ್​’ ಬಿಡುಗಡೆ ದಿನ ಪ್ರಭಾಸ್​ ಭಾರತದಲ್ಲಿ ಇರಲ್ಲ? ಅಮೆರಿಕಕ್ಕೆ ತೆರಳಿದ ಪ್ಯಾನ್​ ಇಂಡಿಯಾ ಸ್ಟಾರ್​

ಸಲಾರ್ ಸಿನಿಮಾದಲ್ಲಿ ಪ್ರಭಾಸ್​ರದ್ದು ಅತಿ ಹಿಂಸಾತ್ಮಕ ಪ್ರವೃತ್ತಿಯುಳ್ಳ ವ್ಯಕ್ತಿಯ ಪಾತ್ರವಂತೆ. ಈ ರೀತಿಯ ಪಾತ್ರದಲ್ಲಿ ಈ ಹಿಂದೆ ನಾನು ನಟಿಸಿಲ್ಲ ಎಂದಿರುವ ಪ್ರಭಾಸ್, ಸಲಾರ್​ನಲ್ಲಿ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಮಾತ್ರವೇ ಅಲ್ಲದೆ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಕನ್ನಡಿಗರಾದ ಪ್ರಮೋದ್, ಮಧು ಗುರುಸ್ವಾಮಿ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ.

ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಜೂನ್ 16ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ರಾಮಾಯಣದ ಕತೆ ಆಧರಿಸಿದ ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಸೀತೆಯಾಗಿ ಕೃತಿ ಸೆನನ್ ಇದ್ದಾರೆ. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ನಾಗ್ ಅಶ್ವಿನ್ ನಿರ್ದೇಶನದ ಇನ್ನೂ ಹೆಸರಿಡ ಸಿನಿಮಾದಲ್ಲಿಯೂ ಪ್ರಭಾಸ್ ನಟಿಸುತ್ತಿದ್ದು, ಈ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿ. ಅಮಿತಾಬ್ ಬಚ್ಚನ್ ಸಹ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಭವಿಷ್ಯದ ಪ್ರಪಂಚದ ಬಗೆಗಿನ ಕತೆಯನ್ನು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ