ನಟ ಪ್ರಭಾಸ್ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರು ಏನೇ ಮಾಡಿದರೂ ಅದು ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಅಷ್ಟರಮಟ್ಟಿಗೆ ಅವರ ಜನಪ್ರಿಯತೆ ಹೆಚ್ಚಿದೆ. ಅಷ್ಟೇ ಅಲ್ಲ, ಅವರನ್ನು ಟ್ರೋಲ್ ಮಾಡುವವರ ಸಂಖ್ಯೆ ಕೂಡ ದೊಡ್ಡದಿದೆ. ಇತ್ತೀಚೆಗೆ ಅವರ ಒಂದು ಫೋಟೋ ವೈರಲ್ ಆಗಿತ್ತು. ಅದನ್ನು ಕಂಡ ಬಳಿಕ ಅವರನ್ನು ಅಂಕಲ್ ಎಂದು ಅನೇಕರು ಹೀಯಾಳಿಸಿದ್ದರು. ಇದರಿಂದ ಹೆಚ್ಚು ಚಿಂತೆಗೆ ಒಳಗಾಗಿರುವುದು ‘ಆದಿಪುರುಷ್’ ಸಿನಿಮಾ ನಿರ್ದೇಶಕ ಓಂ ರಾವುತ್! ಪ್ರಭಾಸ್ ಟ್ರೋಲ್ ಆಗುವುದಕ್ಕೂ, ಓಂ ರಾವುತ್ ಟೆನ್ಷನ್ ಮಾಡಿಕೊಳ್ಳುವುದಕ್ಕೂ ಏನು ಸಂಬಂಧ? ಅದಕ್ಕಿದೆ ಒಂದು ಲಿಂಕ್.
ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್’ ಸಿನಿಮಾ ತಯಾರಾಗುತ್ತಿದೆ. ಅದರಲ್ಲಿ ಪ್ರಭಾಸ್ಗೆ ರಾಮನ ಪಾತ್ರ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಭಾಸ್ ಅವರ ದೇಹದ ತೂಕ ಏಕಾಏಕಿ ಹೆಚ್ಚಾಗಿದೆ. ಇಂಥ ಫ್ಯಾಟ್ ಅವತಾರದಲ್ಲಿ ರಾಮನನ್ನು ನೋಡಲು ಜನರು ಇಷ್ಟಪಡುವುದಿಲ್ಲ ಎಂಬುದು ಖಚಿತ. ಹಾಗಾಗಿ ಪ್ರಭಾಸ್ ತೂಕ ಕಡಿಮೆ ಮಾಡಿಕೊಳ್ಳಬೇಕಿರುವುದು ತುಂಬ ಅನಿವಾರ್ಯ ಆಗಿದೆ. ಅದಕ್ಕಾಗಿ ಈ ಚಿತ್ರದ ನಿರ್ದೇಶಕ ಓಂ ರಾವುತ್ ಒಂದು ಪ್ಲ್ಯಾನ್ ಮಾಡಿದ್ದಾರೆ.
ಪ್ರಭಾಸ್ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಈಗ ಕೇಳಿಬರುತ್ತಿದೆ. ಹೀಗೆ ಏಕಾಏಕಿ ದೇಹದ ತೂಕ ಹೆಚ್ಚಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ಇಂಗ್ಲೆಂಡ್ನಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಅಲ್ಲಿಯೇ ಚಿಕಿತ್ಸೆ ಕೊಡಿಸಿ, ಆದಷ್ಟು ಬೇಗ ಅವರನ್ನು ಮೊದಲಿನ ಗೆಟಪ್ಗೆ ಮರಳಿಸಲು ನಿರ್ದೇಶಕರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಕುರಿತಂತೆ ಚಿತ್ರತಂಡದ ಯಾರೊಬ್ಬರೂ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.
‘ಬಾಹುಬಲಿ’ ಸರಣಿ ಸಿನಿಮಾಗಳ ಬಳಿಕ ಪ್ರಭಾಸ್ ‘ಸಾಹೋ’ ಸಿನಿಮಾ ಒಪ್ಪಿಕೊಂಡಿದ್ದರು. ಹಿಂದಿಯಲ್ಲೂ ಆ ಚಿತ್ರ ತೆರೆಕಂಡಿತ್ತು. ಆದರೆ ಹೇಳಿಕೊಳ್ಳುವ ಮಟ್ಟಕ್ಕೆ ಬಾಕ್ಸ್ ಆಫೀಸ್ನಲ್ಲಿ ಹಣ ಗಳಿಸಲಿಲ್ಲ. ಆಗಲೇ ಉತ್ತರ ಭಾರತದ ಹಲವು ಮಂದಿಗೆ ಪ್ರಭಾಸ್ ಮೇಲಿದ್ದ ಕ್ರೇಜ್ ಕಮ್ಮಿ ಆಗಿತ್ತು. ಈ ನಡುವೆ ಪ್ರಭಾಸ್ ಫಿಟ್ನೆಸ್ ಕೂಡ ಕಳೆದುಕೊಂಡರೆ ಅದು ‘ಆದಿಪುರುಷ್’ ಚಿತ್ರದ ಮೇಲೆ ಖಂಡಿತ ಕೆಟ್ಟ ಪರಿಣಾಮ ಬೀರಲಿದೆ ಎಂಬುದು ನಿರ್ದೇಶಕ ಓಂ ರಾವುತ್ ಅವರಿಗೆ ಖಚಿತ ಆದಂತಾಗಿದೆ. ಹಾಗಾಗಿ ಪ್ರಭಾಸ್ ಆದಷ್ಟು ಬೇಗ ಮೊದಲಿನ ಲುಕ್ಗೆ ಮರಳಬೇಕು ಎಂದು ಓಂ ರಾವುತ್ ಒತ್ತಾಯ ಹೇರುತ್ತಿದ್ದಾರೆ.
ಇದನ್ನೂ ಓದಿ:
Prabhas: ಡೇಟಿಂಗ್ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?
ಪ್ರಶಾಂತ್ ನೀಲ್ ಕಣ್ಣು ತಪ್ಪಿಸಿ ಪ್ರಭಾಸ್ ವಿಡಿಯೋ ಲೀಕ್? ಸಲಾರ್ ಸೆಟ್ನಲ್ಲಿ ಕಿತಾಪತಿ
Published On - 8:25 am, Fri, 17 September 21