ಹಾರ್ದಿಕ್-ನತಾಶಾ ಬಳಿಕ ಡಿವೋರ್ಸ್ ತೆಗೆದುಕೊಳ್ಳಲು ರೆಡಿ ಆಗಿದ್ದಾರೆ ಸ್ಟಾರ್ ಜೋಡಿ
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ವಿಚ್ಛೇದನ ವಿಚಾರ ಘೋಷಣೆ ಮಾಡಿದ್ದಾರೆ. ಇಬ್ಬರೂ ಬೇರೆ ಆಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೆ ಕಾರಣ ಇನ್ನೂ ರಿವೀಲ್ ಆಗಿಲ್ಲ. ಹೀಗಿರುವಾಗಲೇ ಮತ್ತೊಂದು ಸ್ಟಾರ್ ಜೋಡಿ ವಿಚ್ಛೇದನ ಪಡೆದುಕೊಳ್ಳಲು ರೆಡಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ಅವರು ನಾಲ್ಕು ವರ್ಷಗಳ ಕಾಲ ಹಾಯಾಗಿ ಸಂಸಾರ ನಡೆಸಿದರು. ಈಗ ಇಬ್ಬರೂ ವಿಚ್ಛೇದನ ಪಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಹಾಗೂ ನತಾಶಾ ಇಬ್ಬರೂ ಮಾಹಿತಿ ಹಂಚಿಕೊಂಡಿದ್ದಾರೆ. ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ಇವರು ರಿವೀಲ್ ಮಾಡಿಲ್ಲ. ಹೀಗಿರುವಾಗಲೇ ಮತ್ತೊಂದು ಸ್ಟಾರ್ ಜೋಡಿ ವಿಚ್ಛೇದನ ಪಡೆದುಕೊಳ್ಳಲು ರೆಡಿ ಆಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅವರು ಬೇರಾರೂ ಅಲ್ಲ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ.
ಇತ್ತೀಚೆಗೆ ಹಲವು ಸೆಲೆಬ್ರಿಟಿಗಳು ಬೇರೆ ಆಗಿದ್ದಾರೆ. ಸೆಲೆಬ್ರಿಟಿ ವಲಯದಲ್ಲಿ ವಿಚ್ಛೇದನ, ಪ್ರೀತಿ ಇದ್ಯಾವುದೂ ಹೊಸದಲ್ಲ. ಇದಕ್ಕೆಲ್ಲ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುವೂದು ಇಲ್ಲ. ಈ ಕಾರಣದಿಂದಲೂ ಅನೇಕ ವಿಚ್ಛೇದನಗಳು ನಡೆಯುತ್ತಿವೆ. ಮದುವೆ ಆಗಿ ಅಭಿಷೇಕ್ ಹಾಗೂ ಐಶ್ವರ್ಯಾ ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದಾರೆ. ಈಗ ಇಬ್ಬರೂ ದೂರ ಆಗಲು ನಿರ್ಧರಿಸಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳೇ ಇದಕ್ಕೆಲ್ಲ ಕಾರಣ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಪ್ರತ್ಯೇಕವಾಗಿ ಅನಂತ್ ಅಂಬಾನಿ ಮದುವೆಗೆ ಬಂದಿದ್ದಾರೆ. ಸೆಲೆಬ್ರಿಟಿ ಜೋಡಿ ಎಂದಾಗ ಸಾಮಾನ್ಯವಾಗಿ ಒಟ್ಟಾಗಿ ಬರುತ್ತಾರೆ. ಕುಟುಂಬದ ಜೊತೆ ಒಟ್ಟಾಗಿ ಬಂದು ಪೋಸ್ ಕೊಡುತ್ತಾರೆ. ಅದರಲ್ಲೂ ಅಂಬಾನಿ ಮನೆಯ ಮದುವೆ ಎಂದಾಗ ಎಲ್ಲರೂ ಒಟ್ಟಾಗಿ ಬರೋಕೆ ಇಷ್ಟಪಡುತ್ತಾರೆ. ಆದರೆ, ಇಲ್ಲಿ ಆ ರೀತಿ ಆಗಿಲ್ಲ. ಇನ್ನು ಕೆಲವು ಸಮಯದಿಂದ ಅಭಿಷೇಕ್ ಹಾಗೂ ಐಶ್ವರ್ಯಾ ಪ್ರತ್ಯೇಕವಾಗಿಯೇ ಉಳಿದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಡಿವೋರ್ಸ್ ಯಾರಿಗೂ ಸುಲಭವಲ್ಲ ಎಂಬ ಪೋಸ್ಟ್ನ ಮೆಚ್ಚಿದ ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಹಲವು ಬಾರಿ ಒಟ್ಟಾಗಿ ವಿದೇಶ ಪ್ರಯಣ ಮಾಡಿದ್ದಾರೆ. ಆದರೆ, ಅನಂತ್ ಅಂಬಾನಿ ಮದುವೆ ಬಳಿಕ ಐಶ್ವರ್ಯಾ ಅವರು ಮಗಳು ಆರಾಧ್ಯಾ ಜೊತೆ ವಿದೇಶಕ್ಕೆ ಹಾರಿದ್ದಾರೆ. ಇಲ್ಲಿ ಅಭಿಷೇಕ್ ಕಾಣಿಸಲಿಲ್ಲ. ಇನ್ನು ಅಭಿಷೇಕ್ ಅವರು ‘ವಿಚ್ಛೇದನ ಯಾರಿಗೂ ಸುಲಭ ಅಲ್ಲ’ ಎಂಬ ಪೋಸ್ಟ್ನ ಲೈಕ್ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ವಿಚ್ಛೇದನ ವಿಚಾರ ಬಹುತೇಕ ಖಚಿತವಾಗಿದೆ ಎಂದೇ ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Fri, 19 July 24