
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಷ್ಟು ದಿನ ಅವರ ಖಾಸಗಿ ಬದುಕಿನ ಬಗ್ಗೆ ಗಾಸಿಪ್ ಕೇಳಿಬರುತ್ತಿತ್ತು. ಅದು ಈಗ ನಿಜವಾಗಿದೆ. ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮಂತಾ ಮತ್ತು ರಾಜ್ ನಿಡಿಮೋರು (Raj Nidimoru) ಅವರಿಗೆ ಇದು 2ನೇ ಮದುವೆ. ಈ ಮೊದಲು ನಾಗಚೈತನ್ಯ ಜೊತೆ ಮದುವೆ ಆಗಿದ್ದ ಸಮಂತಾ ಅವರು ವಿಚ್ಛೇದನ ಪಡೆದಿದ್ದರು. ಈಗ ರಾಜ್ ನಿಡಿಮೋರು ಜೊತೆ ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಇವರಿಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರ (Age Gap) ಇದೆ.
ಭಾರತೀಯ ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ಸಮಂತಾ ರುತ್ ಪ್ರಭು ಅವರಿಗೆ ಈಗ 38 ವರ್ಷ ವಯಸ್ಸು. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅನಾರೋಗ್ಯ ಕಾಡಿತ್ತು. ಆದರೂ ಕೂಡ ಅವರು ಫಿಟ್ನೆಸ್ ಕಡೆಗೆ ಗಮನ ಹರಿಸುವುದನ್ನು ನಿಲ್ಲಿಸಲಿಲ್ಲ. ಆ ಕಾರಣದಿಂದ ಅವರು ಹದಿಹರೆಯದ ಹುಡುಗಿಯಂತೆ ಕಾಣುತ್ತಾರೆ. ಅವರನ್ನು ಕೈ ಹಿಡಿದಿರುವ ರಾಜ್ ನಿಧಿಮೋರು ಅವರಿಗೆ ಈಗ 50 ವರ್ಷ ವಯಸ್ಸು.
ರಾಜ್ ನಿಡಿಮೋರು ಅವರು ನಿರ್ದೇಶನ ಮಾಡಿದ್ದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ರುತ್ ಪ್ರಭು ಅವರು ನಟಿಸಿದ್ದರು. ಆಗ ಅವರಿಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಅದೇ ವೇಳೆಗೆ ನಾಗ ಚೈತನ್ಯ ಜೊತೆ ಸಮಂತಾ ಅವರಿಗೆ ವೈಮನಸ್ಸು ಉಂಟಾಗಿತ್ತು. ಬಳಿಕ ಅವರು ವಿಚ್ಛೇದನ ಪಡೆದುಕೊಂಡು ಅಕ್ಕಿನೇನಿ ಕುಟುಂಬದಿಂದ ಹೊರಬಂದರು.
ಹಲವು ದಿನಗಳಿಂದ ರಾಜ್ ನಿಡಿಮೋರು ಜೊತೆಗೆ ಸಮಂತಾ ರುತ್ ಪ್ರಭು ಸುತ್ತಾಡುತ್ತಿದ್ದರು. ಒಟ್ಟಿಗೆ ಫಾರಿನ್ ಟ್ರಿಪ್ ಕೂಡ ಮಾಡಿದ್ದರು. ಕೆಲವು ಸಮಾರಂಭಗಳಲ್ಲಿ ಕೂಡ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ತಾವಿಬ್ಬರು ತುಂಬ ಆಪ್ತವಾಗಿರುವ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಆಗಲೇ ಅಭಿಮಾನಿಗಳಿಗೆ ಎಲ್ಲವೂ ಖಚಿತ ಆಗಿತ್ತು. ಆದರೆ ಈ ಜೋಡಿ ಬಾಯಿ ಬಿಟ್ಟಿರಲಿಲ್ಲ.
ಇದನ್ನೂ ಓದಿ: ಸಮಂತಾ ಮದುವೆ ಆದ ರಾಜ್ ನಿಡಿಮೋರು ಆಸ್ತಿ ಎಷ್ಟು ಕೋಟಿ?
ಇಂದು (ಡಿಸೆಂಬರ್ 1) ಸಮಂತಾ ರುತ್ ಪ್ರಭು ಅವರು ರಾಜ್ ನಿಡಿಮೋರು ಜೊತೆ ಮದುವೆ ಆಗಿದ್ದಾರೆ. ಕೆಲವೇ ಕೆಲವು ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಮದುವೆ ಬಳಿಕ ಒಂದಷ್ಟು ಫೋಟೋಗಳನ್ನು ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಕಮೆಂಟ್ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.