‘ಪುಷ್ಪ 2’ ಎದುರು ಬರಲ್ಲ ‘ಸಿಂಗಂ ಅಗೇನ್​’; ರಿಲೀಸ್​ ಮುಂದೂಡಿಕೊಂಡ ರೋಹಿತ್​ ಶೆಟ್ಟಿ​?

|

Updated on: Apr 12, 2024 | 3:21 PM

ಕೆಲವೇ ದಿನಗಳ ಹಿಂದೆ ‘ಪುಷ್ಪ 2’ ಸಿನಿಮಾದ ಟೀಸರ್​ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಆ ಬಳಿಕ ‘ಸಿಂಗಂ ಅಗೇನ್​’ ಚಿತ್ರತಂಡದ ನಿರ್ಧಾರದಲ್ಲಿ ಬದಲಾವಣೆ ಆದಂತಿದೆ. ವರದಿಗಳ ಪ್ರಕಾರ, ನಿರ್ದೇಶಕ ರೋಹಿತ್​ ಶೆಟ್ಟಿ ಅವರು ‘ಸಿಂಗಂ ಅಗೇನ್​’ ಸಿನಿಮಾದ ರಿಲೀಸ್​ ಡೇಟ್​ ಮುಂದೂಡುವ ನಿರ್ಧಾರಕ್ಕೆ ಬಂದಿದ್ದಾರೆ. ಆ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವುದಷ್ಟೇ ಬಾಕಿ.

‘ಪುಷ್ಪ 2’ ಎದುರು ಬರಲ್ಲ ‘ಸಿಂಗಂ ಅಗೇನ್​’; ರಿಲೀಸ್​ ಮುಂದೂಡಿಕೊಂಡ ರೋಹಿತ್​ ಶೆಟ್ಟಿ​?
ಅಜಯ್​ ದೇವಗನ್​, ಅಲ್ಲು ಅರ್ಜುನ್​
Follow us on

ಎರಡು ಹೈ ಬಜೆಟ್​ ಸಿನಿಮಾಗಳು ಒಂದೇ ದಿನ ರಿಲೀಸ್​ ಆದರೆ ಎರಡೂ ಚಿತ್ರತಂಡಕ್ಕೆ ನಿರೀಕ್ಷಿತ ಪ್ರಮಾಣದ ಕಲೆಕ್ಷನ್​ ಆಗುವುದಿಲ್ಲ. ಹಾಗಾಗಿ ಈ ಕ್ಲ್ಯಾಶ್​ ತಪ್ಪಿಸಲು ಪ್ರಯತ್ನಿಸಲಾಗುತ್ತದೆ. ಈಗ ಪುಷ್ಪ 2’  (Pushpa 2) ಮತ್ತು ‘ಸಿಂಗಂ ಅಗೇನ್​’ ಚಿತ್ರಗಳ ವಿಚಾರದಲ್ಲಿ ಹಾಗೆಯೇ ಆಗಿದೆ. ಆಗಸ್ಟ್​ 15ರಂದು ಈ ಸಿನಿಮಾಗಳು ಬಿಡುಗಡೆ ಆಗಲಿವೆ ಎಂದು ಹೇಳಲಾಗಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ, ‘ಸಿಂಗಂ ಅಗೇನ್​’ (Singham Again) ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ನಿರ್ಮಾಪಕರಿಂದ ಅಧಿಕೃತ ಘೋಷಣೆ ಆಗುವುದು ಬಾಕಿ ಇದೆ.

ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಉತ್ತರ ಭಾರತದಲ್ಲೂ ನಿರೀಕ್ಷೆ ಹೆಚ್ಚಾಗಿದೆ. ‘ಪುಷ್ಪ 2’ ಎದುರು ಬರಲು ಬೇರೆ ಯಾವುದೇ ಸಿನಿಮಾ ತಂಡ ಕೂಡ ಧೈರ್ಯ ತೋರಿಸುವುದು ಕಷ್ಟ. ‘ಸಿಂಗಂ ಅಗೇನ್​’ ಸಿನಿಮಾ ತಂಡದವರು ರಿಲೀಸ್​ ಡೇಟ್​ ಮುಂದಕ್ಕೆ ಹಾಕಿರುವ ಸಾಧ್ಯತೆ ದಟ್ಟವಾಗಿದೆ.

ಅಜಯ್​ ದೇವಗನ್​ ಅವರು ‘ಸಿಂಗಂ ಅಗೇನ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಹಿತ್​ ಶೆಟ್ಟಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಭಾರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಅನೇಕ ಕಲಾವಿದರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಆಗಸ್ಟ್​ 15ರ ಬದಲು ಈ ವರ್ಷ ದೀಪಾವಳಿ ಹಬ್ಬಕ್ಕೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ಒಂದೇ ದೃಶ್ಯಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡಿದ ‘ಪುಷ್ಪ 2’ ಸಿನಿಮಾ ತಂಡ

ಒಂದು ಮೂಲದ ಪ್ರಕಾರ ‘ಸಿಂಗಂ ಅಗೇನ್​’ ಸಿನಿಮಾದ ರಿಲೀಸ್ ಡೇಟ್​ ಮುಂದೂಡಿಕೆ ಆಗಲು ‘ಪುಷ್ಪ 2’ ತಂಡದ ಪೈಪೋಟಿ ಕಾರಣ ಅಲ್ಲ. ಅಂದುಕೊಂಡ ವೇಗದಲ್ಲಿ ಈ ಸಿನಿಮಾದ ಕೆಲಸಗಳು ಮುಗಿಯುತ್ತಿಲ್ಲ. ಗುಣಮಟ್ಟದಲ್ಲಿ ರಾಜಿಯಾಗಲು ರೋಹಿತ್​ ಶೆಟ್ಟಿ ಸಿದ್ಧರಿಲ್ಲ. ಹಾಗಾಗಿ ಇನ್ನಷ್ಟು ಸಮಯ ತೆಗೆದುಕೊಂಡು ಉತ್ತಮ ಗುಣಮಟ್ಟದ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಉದ್ದೇಶದಿಂದ ರಿಲೀಸ್​ ಡೇಟ್ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.