Ajith Kumar: ಹವ್ಯಾಸವನ್ನೇ ಲಾಭದಾಯಕ ಉದ್ಯಮವನ್ನಾಗಿ ಬದಲಾಯಿಸಿಕೊಂಡ ಸ್ಟಾರ್ ನಟ ಅಜಿತ್

Ajith Kumar: ತಮಿಳಿನ ಸ್ಟಾರ್ ನಟ ಅಜಿತ್​ ನುರಿತ ಬೈಕ್ ರೈಡರ್ ಸಹ ಹೌದು. ತಮ್ಮ ಈ ನೆಚ್ಚಿನ ಹವ್ಯಾಸವನ್ನು ಲಾಭದಾಯನ ಉದ್ದಿಮೆಯಾಗಿ ಬದಲಾಯಿಸಿದ್ದಾರೆ ಈ ನಟ.

Ajith Kumar: ಹವ್ಯಾಸವನ್ನೇ ಲಾಭದಾಯಕ ಉದ್ಯಮವನ್ನಾಗಿ ಬದಲಾಯಿಸಿಕೊಂಡ ಸ್ಟಾರ್ ನಟ ಅಜಿತ್
ಅಜಿತ್ ಕುಮಾರ್
Follow us
ಮಂಜುನಾಥ ಸಿ.
|

Updated on: May 22, 2023 | 6:26 PM

ತಮಿಳಿನ ಸ್ಟಾರ್ ನಟ ಅಜಿತ್ (Vijay), ತಮ್ಮ ವಾರಗೆಯ ಇತರ ಸ್ಟಾರ್ ನಟರಂತೆ ಅಲ್ಲ. ಪರದೆಯ ಮೇಲೆ ಸ್ಟಾರ್ ನಾಯಕರಾಗಿರುವ ಅಜಿತ್ (Ajith Kumar), ಹೊರಗೆ ಸಾಮಾನ್ಯ ವ್ಯಕ್ತಿಯಂತೆ ಬದುಕಲು ಇಷ್ಟಪಡುತ್ತಾರೆ ಮತ್ತು ಹಾಗೆಯೇ ಬದುಕುತ್ತಿದ್ದಾರೆ ಸಹ. ವಾರಗೆಯ ಸ್ಟಾರ್ ನಟರು ತಮ್ಮ ಸ್ಟಾರ್​ಗಿರಿ ಉಳಿಸಿಕೊಳ್ಳಲು ಪರದೆಯ ಹೊರಗೂ ನಾನಾ ಸ್ಟಂಟ್​ಗಳನ್ನು ಮಾಡುತ್ತಿದ್ದರೆ ಅಜಿತ್ ಮಾತ್ರ ಅದ್ಯಾವುದರ ಪರಿವೆಯೇ ಇಲ್ಲದೆ ಸಿನಿಮಾ ಮುಗಿಸಿದ ಕೂಡಲೇ ಪ್ರಚಾರಕ್ಕೂ ನಿಲ್ಲದೆ ತಮ್ಮ ಬೈಕ್  (Bike Ride) ಹತ್ತಿ ಪ್ರವಾಸಕ್ಕೆ ತೆರಳಿ ಬಿಡುತ್ತಾರೆ.

ಬೈಕಿಂಗ್ ಅಜಿತ್​​ರ ಅತ್ಯಂತ ಮೆಚ್ಚಿನ ಹವ್ಯಾಸ. ಭಾರತದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಸೇರಿದಂತೆ ಹಲವು ದೇಶಗಳಲ್ಲಿ ಅಜಿತ್ ಬೈಕಿಂಗ್ ಮಾಡಿದ್ದಾರೆ. ಅವರ ಬೈಕಿಂಗ್ ಸಾಹಸದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಆದರೆ ಈಗ ಅಜಿತ್ ತಮ್ಮ ನೆಚ್ಚಿನ ಹವ್ಯಾಸವನ್ನೇ ಹಣ ಮಾಡುವ ಉದ್ಯಮವನ್ನಾಗಿ ಬದಲಾಯಿಸಲು ಹೊರಟಿದ್ದಾರೆ. ಇದರಲ್ಲಿ ಹಣ ಮಾಡುವ ಉದ್ದೇಶ ಮಾತ್ರವೇ ಇರದೆ ಕಾಳಜಿಯೂ ಇದೆ.

ನಟ ಅಜಿತ್, ತಮ್ಮದೇ ಒಡೆತನದ ಬೈಕಿಂಗ್ ಪ್ರವಾಸಿ ಸಂಸ್ಥೆಯನ್ನು ಪ್ರಾರಂಭಿಸುತ್ತಿದ್ದಾರೆ. ಎಕೆ ಮೋಟೋ ರೈಡ್ ಎಂದು ತಮ್ಮ ಬೈಕ್ ಟೂರಿಂಗ್ ಸಂಸ್ಥೆಗೆ ಅಜಿತ್ ಹೆಸರು ಇಟ್ಟಿದ್ದು, ಬೈಕರ್ಸ್​ಗಳಿಗೆ ಇದು ದ್ವಿಚಕ್ರ ವಾಹನದ ಮೇಲೆ ಪ್ರವಾಸ ಹೋಗಲಿಚ್ಛಿಸುವ ಪ್ರವಾಸಿಗರಿಗೆ ಸಹಾಯ ಮಾಡಲಿದೆ. ”ಮೋಟಾರ್ ರೈಡಿಂಗ್, ಬೈಕ್​ಗಳು ಹಾಗೂ ಬೈಕ್ ಪ್ರವಾಸದ ನನ್ನ ಪ್ರವೃತ್ತಿಯನ್ನು ಎಕೆ ಮೋಟೋ ರೈಡ್ ಟೂರಿಂಗ್ ಸಂಸ್ಥೆಯ ಮೂಲಕ ವೃತ್ತಿಯನ್ನಾಗಿ ಬದಲಾಯಿಸಿಕೊಳ್ಳುತ್ತಿದ್ದೇನೆ” ಎಂದು ಅಜಿತ್ ಕುಮಾರ್ ಅಧಿಕೃತ ಹೇಳಿಕೆ ಪ್ರಕಟಿಸಿದ್ದಾರೆ.

ಇದನ್ನೂ ಓದಿ:Thunivu Movie: ‘ತುನಿವು’ ರಿಲೀಸ್ ವೇಳೆ ಅವಘಡ; ಅಜಿತ್ ಕುಮಾರ್ ಅಭಿಮಾನಿ ಸಾವು

ಎಕೆ ಮೋಟೋ ರೈಡ್ ಆಸಕ್ತ ಬೈಕ್ ಸವಾರರು, ಉತ್ಸಾಹಿ ಸಾಹಸ ಆಸಕ್ತರು ಮತ್ತು ಪ್ರವಾಸದ ಇಚ್ಛೆಯುಳ್ಳವರು, ಹೊಸ ಸ್ಥಳಗಳನ್ನು ಅನ್ವೇಶಣೆ ಮಾಡುವ ಆಸಕ್ತಿಯುಳ್ಳವರಿಗೆ ಹಲವು ವಿಭಾಗಗಳಲ್ಲಿ ನೆರವು ನೀಡುತ್ತದೆ. ಎಕೆ ಮೋಟೋ ರೈಡ್, ಭಾರತದ ರಮಣೀಯ ಪ್ರವಾಸಿ ತಾಣಗಳು, ಹೆಚ್ಚು ಜನರಿಗೆ ತಿಳಿಯದ ಅನ್​ಎಕ್ಸ್​ಪ್ಲೋರ್ಡ್​ ಸ್ಥಳಗಳ ಜೊತೆಗೆ ವಿದೇಶದ ರಮಣೀಯ ಭೂಪ್ರದೇಶದ ದರ್ಶನ ಮಾಡಲು ಸಹಕರಿಸುತ್ತದೆ. ಅಲ್ಲದೆ, ಸಾಹಸ ಪ್ರಿಯ ಬೈಕ್ ರೈಡರ್​ಗಳಿಗೆ ಮೋಟಾರ್‌ಸೈಕಲ್ ಪ್ರವಾಸದ ಬಗ್ಗೆ ತರಬೇತಿ, ರಸ್ತೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ತಯಾರಿ, ಪ್ರವಾಸಕ್ಕೆ ಬೇಕಾದ ಇತರೆ ವ್ಯವಸ್ಥೆಗಳನ್ನು ಮಾಡಿಕೊಡುವ ಜೊತೆಗೆ ಮಾರ್ಗದರ್ಶನವನ್ನು (ಗೈಡ್) ಸಹ ನೀಡುತ್ತದೆ.

ಅಜಿತ್ ಕುಮಾರ್, ಒಬ್ಬ ಹವ್ಯಾಸಿ ಹಾಗೂ ನುರಿತ ಮೋಟಾರ್ ರೈಡರ್. ತಮ್ಮ ಅತ್ಯಾಧುನಿಕ ಬೈಕ್​ನಲ್ಲಿ ಅವರು ಭಾರತ ಮಾತ್ರವೇ ಅಲ್ಲದೆ ಸಿಂಗಪುರ, ನೇಪಾಳ, ಭೂತಾನ್ ಇನ್ನೂ ಹಲವು ದೇಶಗಳಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಸಹ ಬೈಕ್​ನಲ್ಲಿ ಪ್ರವಾಸ ಮಾಡಿದ್ದಾರೆ. ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಅಜಿತ್ ಬಹಳ ಕಡಿಮೆ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ಈ ಹಿಂದೆ ಅವರು ನಟಿಸಿರುವ ತುಣಿವು ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ವರ್ಷಕ್ಕೆ ಒಂದು ಸಿನಿಮಾ ಮಾತ್ರವೇ ಮಾಡುವ ಅಜಿತ್ ಪ್ರಸ್ತುತ ವಿದಾ ಮುಯಾರ್ಚಿ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದು ಆ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್
ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್
ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು
ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು