ಹಲವು ಗೆಟಪ್​ನಲ್ಲಿ ಬಂದ ಅಜಿತ್ ಕುಮಾರ್; ಇದು ‘ಗುಡ್ ಬ್ಯಾಡ್ ಅಗ್ಲಿ’ ಅವತಾರ

Good Bad Ugly Teaser: ಅಜಿತ್ ಕುಮಾರ್ ಅವರ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ವಿಭಿನ್ನ ಅವತಾರಗಳಲ್ಲಿ ಅಜಿತ್ ಕಾಣಿಸಿಕೊಂಡಿದ್ದು, ಮಾಸ್ ಅಂಶಗಳಿಂದ ತುಂಬಿರುವ ಈ ಚಿತ್ರ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ. ತ್ರಿಷಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಹಲವು ಗೆಟಪ್​ನಲ್ಲಿ ಬಂದ ಅಜಿತ್ ಕುಮಾರ್; ಇದು ‘ಗುಡ್ ಬ್ಯಾಡ್ ಅಗ್ಲಿ’ ಅವತಾರ
ಅಜಿತ್ ಕುಮಾರ್
Edited By:

Updated on: Mar 01, 2025 | 7:29 AM

ಅಜಿತ್ ಕುಮಾರ್ ನಟನೆಯ ‘ವಿದಾಮುಯರ್ಚಿ’ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ರಿಲೀಸ್ ಆದ ಎರಡೇ ತಿಂಗಳಿಗೆ ಅವರ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾದ ಟೀಸರ್ ಬಿಡುಗಡೆ ಕಂಡಿದೆ. ಇದರಲ್ಲಿ ಹಲವು ಅವತಾರದಲ್ಲಿ ಅಜಿತ್ ಅವರು ಕಾಣಿಸಿಕೊಂಡಿದ್ದಾರೆ. ಈ ಟೀಸರ್ ಸಾಕಷ್ಟು ಗಮನ ಸೆಳೆಯುತ್ತಿದೆ.

ಅಜಿತ್ ಸಿನಿಮಾಗಳು ಎಂದರೆ ಅಲ್ಲಿ ಮಾಸ್ ಅಂಶಗಳು ಇರಲೇಬೇಕು. ಅದೇ ರೀತಿ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದಲ್ಲಿ ಇದಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ ಎಂಬುದು ಟೀಸರ್​​ನಲ್ಲಿ ಸ್ಪಷ್ಟವಾಗಿದೆ. ಮಾಸ್ ಅವತಾರದಲ್ಲಿ ಅಜಿತ್ ಎಂಟ್ರಿ ಆಗಿದೆ. ಗನ್​ಗಳ ಮೂಲಕ ಅವರು ಸೌಂಡ್ ಮಾಡುತ್ತಾರೆ. ಇಷ್ಟೇ ಅಲ್ಲ, ಅವರಿಗೆ ವಿವಿಧ ಗೆಟಪ್​ ಕೂಡ ಇದೆ.

‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಏಪ್ರಿಲ್ 10ರಂದು ಸಿನಿಮಾ ತೆರೆಗೆ ಬರಲಿದೆ. ‘ವಿದಾಮುಯರ್ಚಿ’ ಸಿನಿಮಾ ಫೆಬ್ರವರಿ 6ರಂದು ರಿಲೀಸ್ ಆಗಿತ್ತು. ಅಜಿತ್ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿರುವುದರಿಂದ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

ಇಲ್ಲಿ ಮತ್ತೊಂದು ವಿಶೇಷತೆ ಇದೆ. ‘ಗುಡ್ ಬ್ಯಾಡ್ ಅಗ್ಲಿ’ ಹಾಗೂ ‘ವಿದಾಮುಯರ್ಚಿ’ ಸಿನಿಮಾಗಳಲ್ಲಿ ತ್ರಿಶಾ ಇದ್ದಾರೆ. ಇದು ಕೂಡ ಸಿನಿಮಾದ ವಿಶೇಷತೆಗಳಲ್ಲಿ ಒಂದು ಎನ್ನಬಹುದು. ‘ಗುಡ್ ಬ್ಯಾಡ್ ಅಗ್ಲಿ’ ಟೀಸರ್​​ ಲಕ್ಷಾಂತರ ವೀಕ್ಷಣೆ ಪಡೆದಿದೆ.

ಇದನ್ನೂ ಓದಿ: ನಟ ಅಜಿತ್ ಕುಮಾರ್ ಟ್ಯಾಲೆಂಟ್ ಬಗ್ಗೆ ನಿಮಗೆಷ್ಟು ಗೊತ್ತು? ಇವರು ಫ್ಲೈಟ್ ಕೂಡ ಓಡಿಸ್ತಾರೆ

ಜಿವಿ ಪ್ರಕಾಶ್ ಕುಮಾರ್ ಅವರು ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಟೀಸರ್​ನಲ್ಲಿ ಬಳಕೆ ಆದ ಹಿನ್ನೆಲೆ ಸಂಗೀತ ಇಷ್ಟ ಆಗುವ ರೀತಿಯಲ್ಲಿ ಇದೆ. ಹೀಗಾಗಿ, ಸಿನಿಮಾದಲ್ಲೂ ಈ ಬಗ್ಗೆ ಹೆಚ್ಚಿನ ನಿರೀಕ್ಷೆ ಮಾಡಬಹುದು. 225 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗಿದೆ. ಮೈತ್ರಿ ಮೂವೀ ಮೇಕರ್ಸ್ ಹಾಗೂ ಟಿ-ಸೀರಿಸ್ ಫಿಲ್ಮ್ಸ್ ಇದನ್ನು ನಿರ್ಮಾಣ ಮಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Sat, 1 March 25